ಸ್ಲಂಗಳ ಕಾಮಗಾರಿ ನನೆಗುದಿಗೆ: ಸ್ಲಂ ನಿವಾಸಿಗಳಿಂದ ಧರಣಿ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೧೩:ಜನವೇದಿಕೆ ಹಾಗೂ ಸ್ಲಂ ಅಭಿವೃದ್ದಿ ಸಮಿತಿ ಒಕ್ಕೂಟ ಇವರ ಸಹಯೋಗದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಕಾರ್ಯಾಲಯದ ಎದುರು ಗುರುವಾರ ಧರಣಿ ಸತ್ಯಾಗ್ರಹ ಮಾಡಲಾಯಿತು.
ನಗರದ ಎಲ್ಲ ಸ್ಲಂ ನಿವಾಸಿಗಳು ಮಂಡಳಿ ಕಾರ್ಯಾಲಯದ ಎದುರು ಅಪಾರ ಸಂಖ್ಯೆಯಲ್ಲಿ ಸೇರಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ವಿಜಯಪುರ ಸ್ಲಂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮುತ್ತು ಭೋವಿ ಅವರು ಮಾತನಾಡಿ, ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಅಧಿಕಾರಿಗಳು ಸ್ಲಂ ಕಾಮಗಾರಿಗಳನ್ನು ಸರಿಯಾಗಿ ಮಾಡುತ್ತಿಲ್ಲ. ಅನೇಕ ಸ್ಲಂಗಳಿಗೆ ಹಕ್ಕುಪತ್ರಗಳು ವಿತರಣೆಯಾಗುತ್ತಿಲ್ಲ. ಪ್ರಧಾನಮಂತ್ರಿ ಆವಾಸ್ ಯೋಜನೆ ಮನೆಗಳ ಕಾಮಗಾರಿ ವಿಳಂಭವಾಗಿ ನಡೆಯುತಿದ್ದು, ಸ್ಲಂಗಳ ಘೋಷಣೆ ಆಗುತ್ತಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸ್ಲಂ ಅಭಿವೃದ್ಧಿ ಸಮಿತಿ ಜಿಲ್ಲಾ ಸಂಚಾಲಕ ಅಕ್ರಂ ಮಾಶಾಳಕರ ಹಾಗೂ ನಿರ್ಮಲಾ ಹೊಸಮನಿ ಮಾತನಾಡಿದರು.
ಧರಣಿ ಸ್ಥಳಕ್ಕೆ ಕರ್ನಾಟಕ ಕೂಳಗೇರಿ ಅಭಿವೃದ್ದಿ ಮಂಡಳಿ ಅಧಿಕಾರಿ ಶಿವಾನಂದ ರಾಠೋಡ ಅವರು ಆಗಮಿಸಿ ಸ್ಲಂ ನಿವಾಸಿಗಳ ಹಕ್ಕೋತ್ತಾಯಗಳ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರಮೇಶ ಬಿದರಿ, ಪಂಡಿತ ಖಂಡಗಳ, ಮೀನಾಕ್ಷಿ ಕಾಲೇಬಾಗ, ರೇಷ್ಮಾ ಬಂಡಿವಡ್ಡರ, ಪುಪ್ಪಾ ನೇಗಿನಾಳ, ಅರುಣಾ ಬೋದಿಹಾಳ, ರಫೀಕ ಮನಗೋಳಿ, ಗುರುನಾಥ ವಾಲಿಕಾರ, ಸರಸ್ವತಿ ಕಪಾ¼,ೆ ತೇಜವ್ವ ದಿಂಡವಾರ, ಕೃಷ್ಣಾ ಜಾಧವ, ರಾಜೇಸಾಬ ಸುತಾರ, ಸುಲ್ತಾನ ಅಗಸಿಮನಿ, ಲಾಲಬಿ ಜಾತಗಾರ, ಶ್ರೀದೇವಿ ಘಂಟಿ, ಮಾಲನ ಮುಜಾವರ, ಕಸ್ತೂರಿ ಸಿಂಗೆ, ಕೈರುನ ಜಮಾದಾರ, ಹಮೀದಾ ಪಟೇಲ, ಇಬ್ರಾಹಿಂ ಮಸಗನಾಳ, ಪುಂಡಲಿಕ ರಾಠೋಡ, ಅಶೋಕ ಭಜಂತ್ರಿ ಮುಂತಾದ ಪ್ರಮುಖರು ಸೇರಿದಂತೆ ನೂರಾರು ಸ್ಲಂ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.