ಲೋಕ ಕಲ್ಯಾಣ ಶಾಲೆಯ ವಿದ್ಯಾರ್ಥಿಗಳ ಸಾಧನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೧೩: ೨೦೨೪-೨೫ನೇ ಸಾಲಿನ ಕೆ.ಜಿ.ಎಸ್-೩ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ನಗರದ ವಿಕಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಿತು.
ಲೋಕ ಕಲ್ಯಾಣ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಅಪ್ಸಾ ಮುಲ್ಲಾ, ಚಿತ್ರಕಲೆಯಲ್ಲಿ ಪ್ರಥಮ, ವಿಶಾಲ ಚವ್ಹಾಣ ಮಿಮಿಕ್ರಿಯಲ್ಲಿ ಪ್ರಥಮ, ಬೀಬಿ ಆಯೇಶಾ ಗೋಡಿಹಾಳ ಅಭಿನಯ ಗೀತೆಯಲ್ಲಿ ಪ್ರಥಮ, ಜಾನವಿ ಕೊಕಟ್ನೂರ್ ಅಭಿನಯ ಗೀತೆಯಲ್ಲಿ ಪ್ರಥಮ, ಚೈತ್ರಾ ವಾಡೇದ ಭಕ್ತಿ ಗೀತೆಯಲ್ಲಿ ಪ್ರಥಮ, ಶಾಯಿನ ನಗಾರ್ಚಿ ಆಶುಭಾಷಣದಲ್ಲಿ ದ್ವಿತೀಯ, ನವನೀತ್ ಕೋರ್ ಹಿಂದಿ ಭಾಷಣದಲ್ಲಿ ದ್ವಿತೀಯ, ಪ್ರದೀಪ ರಾಠೋಡ ಚಿತ್ರಕಲೆಯಲ್ಲಿ ದ್ವಿತೀಯ, ಫಾತಿಮಾ ಗೊಡಿಹಾಳ ದೇಶಭಕ್ತಿಗೀತೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹರ್ಷಿತಾ ಕ್ಷೀರಸಾಗರ ಕನ್ನಡ ಕಂಠಪಾಠದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ, ಚೇತನ ವಾಡೇದ ಕ್ಲಾಯ್ ಮಾಡ್ಲಿಂಗ್, ಕಿರಣ ರಾಠೋಡ ಕ್ವಿಜ್, ಸಮೀಕ್ಷಾ ಚೂರಿ ಕ್ವಿಜ್, ಶ್ರೀದೇವಿ ಪಾತ್ರೋಟಿ ಕ್ವಿಜ್, ನವನೀತ್ ಕೋರ್ ಟಾಕ್ ಕ್ವಿಜ್, ಆನಂದ್ ರಜಪೂತ ಜಾನಪದ ಗೀತೆ, ಅರ್ಶಿಯಾ ನಗಾರ್ಚಿ ಅರೇಬಿಕ್ ಪಠಣ, ಸುಪ್ರೀತಾ ಕರ್ನಾಳ್ ಭಕ್ತಿಗೀತೆ, ಐಮನ್ ಮೊಮಿನ ಕಥೆ, ಐಶ್ವರ್ಯ ರಾಠೋಡ ಪ್ಲೇ ಮಾಡ್ಲಿಂಗ್, ಸುಹಾಸಿನಿ ಇಚ್ಚುರ್ ಕನ್ನಡ ಕಂಠಪಾಠದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಯ ಅಧ್ಯಕ್ಷ ದಾನಪ್ಪ ಸೂರಗೊಂಡ, ಉಪಾಧ್ಯಕ್ಷÀ ಮಲ್ಲಿಕಾರ್ಜುನ ಬಿರಾದಾg,À ಶಾಲೆಯ ನಿರ್ದೇಶಕÀ ರಾಜು ರಾಠೋಡ , ಶಾಲೆಯ ಉಪ ಕಾರ್ಯದರ್ಶಿ ದಯಾಸಾಗರ ಸೂರಗೊಂಡ ಮತ್ತು ಮುಖ್ಯ ಗುರುಗಳಾದ ಲಕ್ಷ್ಮಿ ಹೂಗಾರ, ಶಿಕ್ಷಕರಾದ ಪ್ರದೀಪ ಅಂಬಿಗ, ಸಂಜೀವ ಪವಾರ, ವೀಣಾ ಸಕ್ರೇನವರ, ವಿಜಯಲಕ್ಷಿö್ಮÃ ವಾಡೇದ, ಎಲ್ಲ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದರು