ಒಕ್ಕೂಟ ವ್ಯವಸ್ಥೆ ಬಲಪಡಿಸಲು ಕೈಜೋಡಿಸಿ
ಕೋಲಾರ,ಸೆ,೧೩;ರಾಷ್ಟ್ರದ ೧೬ನೇ ಹಣಕಾಸು ಯೋಜನೆಯ ಹಂಚಿಕೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುವುದನ್ನು ನಿಯಂತ್ರಿಸಲು ಹೋರಾಟ ಅನಿವಾರ್ಯವಾಗಿದೆ. ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯೇತರ ೮ ರಾಜ್ಯಗಳ ಮುಖ್ಯ ಮಂತ್ರಿಗಳೊಂದಿಗೆ ಸಮಾವೇಶ ಮಾಡುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಉಳಿಸಲು ಅಂದೋಲನ ಮಾಡಲು ಮುಂದಾಗಿರುವುದಕ್ಕೆ ರಾಜ್ಯದ ಜನತೆ ಸಹಕಾರದ ಹಸ್ತಚಾಚ ಬೇಕೆಂದು ಪತ್ರಕರ್ತ ಹಾಗೂ ವಿಚಾರವಾದಿ ಡಾ.ಎಚ್.ವಿ. ವಾಸು ಕರೆ ನೀಡಿದರು,
ನಗರದ ಜಿಲ್ಲಾ ಸ್ಕೌಟ್ಸ್ ಭವನದ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಸಮಾನ ಮನಸ್ಕ ಸ್ನೇಹಿತ ಬಳಗ ವತಿಯಿಂದ ಲೋಕನಾಯಕ ಜೆ.ಪಿ.ವಿಚಾರ ವೇದಿಕೆಯಲ್ಲಿ ಒಕ್ಕೂಟ ವ್ಯವಸ್ಥೆ ಉಳಿಸಿ ಅಂದೋಲನ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ಒಕ್ಕೂಟ ವ್ಯವಸ್ಥೆ ಉಳಿಸಿ ಅಂದೋಲನ ಮುಖ್ಯ ಉದ್ದೇಶ ಕೇಂದ್ರದಿಂದ ರಾಜ್ಯಗಳ ಮೇಲಿನ ದಾಳಿಗೆ ಜನರ ಪ್ರತಿರೋಧದ ಅಗತ್ಯವಿದೆ ಎಂಬ ಸಂದೇಶವನ್ನು ನೀಡುವುದಾಗಿದೆ ಎಂದು ಹೇಳಿದರು.
ಅರ್ಥಿಕ ಸಮಿತಿಯ ಅಧ್ಯಕ್ಷ ವೈ.ವಿ.ರೆಡ್ಡಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ರಹಸ್ಯವಾಗಿ ಸಭೆ ಸೇರಿ ರಾಜ್ಯ ಸಕಾರದ ಹಕ್ಕು ಮತ್ತು ಜಿ.ಎಸ್.ಟಿ.ತೆರಿಗೆಯನ್ನು ವಿಧಿಸುವ ಮೂಲಕ ವಂಚಿಸಿದೆ ತೆರಿಗೆ, ಉಪತೆರಿಗೆ, ಸೆಸ್ಸ್ ಮತ್ತು ಸರ್‌ಚಾರ್ಚಗಳನ್ನು ವಿಧಿಸಿ ೩೬ ಲಕ್ಷ ಕೋಟಿ ಸಂಗ್ರಹಿಸಿತು ಇದರಿಂದ ರಾಜ್ಯವು ಅರ್ಥಿಕವಾಗಿ ನಷ್ಟವಾಗಲು ಕಾರಣವಾಯಿತು, ರಾಜ್ಯದ ಕಾಂಗ್ರೇಸ್ ಮಾತ್ರವಲ್ಲ ವಿಪಕ್ಷವಾದ ಬಿಜೆಪಿ ಕೇಳಿದರೂ ಸಹ ಕೇಂದ್ರವು ಸ್ಪಂದಿಸದೆ ಅನ್ಯಾಯವೇಸಗಿತು ಎಂದರು.
ಮಾದ್ಯಮಗಳು ಅಂಬಾನಿ ಅದಾನಿಯವರ ಬಳಿ ಸೂಪರಿ ಪಡೆದು ದೇಶದ ಜನತೆಯ ಗಮನವನ್ನು ಬೇರೆಡೆಗೇ ತಿರುಗಿಸಿದವು. ಕೆಲಸಕ್ಕೆ ಬಾರದ ಚಿತ್ರನಟ ದರ್ಶನ್ ಕೈಲಿನಲ್ಲಿ ಸಿಗರೇಟ್ ಸೇದಿದ ವಿಷಯವನ್ನು ವಾರನುಗಟ್ಟಲೇ ಚರ್ಚಿಸುವ ಮೂಲಕ ದಿಕ್ಕು ತಪ್ಪಿಸುತ್ತಿದೆ. ಮುಖ್ಯವಾಗಿ ಜನತೆ ಬೇಕಾದ ವಿಷಯಗಳ ಬಗ್ಗೆ ಚರ್ಚೆಗಳು ಸುದ್ದಿಗಳನ್ನು ಪ್ರಸಾರ ಮಾಡದೆ ಕಾಲಹರಣ ಮಾಡುತ್ತಿರುವ ಬಗ್ಗೆ ಬೇಸರ ವ್ಯಕ್ತ ಪಡೆಸಿದರು.
ಕರ್ನಾಟಕ ಸೇರಿದಂತೆ ಬಿಜೆಪಿಯೇತರ ಸರ್ಕಾರಗಳ ಮೇಲೆ ಇ.ಡಿ. ಐ.ಟಿ. ಸಿ.ಬಿ.ಐ ಸೇರಿದಂತೆ ಹಲವು ವಿಧಾನದಲ್ಲಿ ದಾಳಿ ಮಾಡುವ ಮೂಲಕ ಸರ್ಕಾರಗಳನ್ನು ಅಸ್ಥಿರಗೊಳಿಸಲು ಮುಂದಾಗಿರುವ ಹಿನ್ನಲೆಯಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿ ಸಂವಿಧಾನವನ್ನು ಬೆಳೆಸಲು ಅಂದೋಲವು ಇಂದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ ಪ್ರಜಾಪ್ರಭುತ್ವದ ವ್ಯವಸ್ಥೆಗಳನ್ನು ಸಧೃಡ ಪಡೆಸ ಬೇಕು ದೇಶದಲ್ಲಿ ಏಕತೆ, ಐಕ್ಯತೆ, ಅಭಿವೃದ್ದಿಗಳನ್ನು ಒಳಗೊಂಡು ರಚಿಸಿರುವಂತ ಸಂವಿಧಾನ ಹಾಗೈ ಒಕ್ಕೂಟವನ್ನು ಉಳಿಸಿ ಕೊಂಡು ಗಟ್ಟಿ ಗೊಳಿಸಲು ಆಂದೋಲದ ಹೋರಾಟಗಳು ನಿರಂತರವಾಗಿ ಮುಂದುವರೆಸ ಬೇಕಾಗಿದೆ ಎಂದರು
ಉಮಾಶಂಕರ್ ನಿರೂಪಿಸಿ ಅನ್ವರ್ ಪಾಷ ಸ್ವಾಗತಿಸಿದರು, ದಯಾನಂದ್ ಪ್ರಸ್ತಾವಿಕ ನುಡಿಗಳಾಡಿದರು ಜೈ ದೀಪ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಮುಖಂಡ ಕೆ.ವಿ. ಗೌತಮ್, ಶ್ರೀಕೃಷ್ಣ, ದಲಿತ ಮುಖಂಡ ಟಿ.ವಿಜಯಕುಮಾರ್, ಮೌಲಿ ಮುಜುಬಿನ್ ರೆಹಮಾನ್ ಉಪಸ್ಥಿತರಿದ್ದರು,