ಮೂರ್ತಿ ಹೆಸರಲ್ಲಿ ಜನರ ಹಣ ಲೂಟಿ ಹೊಡೆಯಲಾಗಿದೆ..! ಹೈಕೋರ್ಟ್ ಗರಂ..!
ಬೆಂಗಳೂರು : ಕಾರ್ಕಳದಲ್ಲಿ ನಿರ್ಮಿಸಿದ್ದ ಪರಶುರಾಮನ ವಿಗ್ರಹದ ವಿಚಾರವಾಗಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರನ್ನು ಹೈ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸುನಿಲ್ ಕುಮಾರ್ ಪರ ವಕೀಲರು ವಾದ ಮಂಡಿಸಲು ಆರಂಭಿಸುತ್ತಿದ್ದಂತೆ ನೀವೇನು ಹೇಳಬೇಕಾಗಿಲ್ಲ ಎಲ್ಲಾ ದಾಖಲೆ ಹೇಳ್ತಾ ಇದೆ ಎಂದು ನ್ಯಾಯ ಮೂರ್ತಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ನ್ಯಾಯಮೂರ್ತಿಗಳು ಮೂರ್ತಿ ವಿಚಾರದಲ್ಲಿ ಹೇಳಿದಿಷ್ಟು
ಪರಶುರಾಮನ ಮೂರ್ತಿಯ ನಿರ್ಮಾಣದ ಹೆಸರಿನಲ್ಲಿ ಜನರ ಹಣವನ್ನು ಲೂಟಿ ಹೊಡೆಯಲಾಗಿದೆ. ಕಂಚಿನ ಪ್ರತಿಮೆ ಅಂತ ನಂಬಿಸಿ ಬೇರೆಯೇ ವಸ್ತುಗಳಿಂದ ಮೂರ್ತಿಯ ನಿರ್ಮಾಣ ಮಾಡಿದ್ದು ಯಾಕೆ ? ಒಂದು ಕೋಟಿ ಎಂಬತ್ತ ಮೂರು ಲಕ್ಷ ಹಣ ಪಡೆದ ಮೇಲೆ ಮೂರ್ತಿಯನ್ನು ಸಂಪೂರ್ಣ ಕಂಚಿನಿಂದಲೇ ಮಾಡಬೇಕಾಗಿತ್ತು. ಅದು ಸಾರ್ವಜನಿಕರ ಹಣವಾಗಿದ್ದು, ಎನ್‌ಐಟಿಕೆ ಕೊಟ್ಟಿರುವ ರಿಪೋರ್ಟ್‌ನಲ್ಲಿ ಕಂಚಿನ ಬದಲು ಬೇರೆಯ ವಸ್ತುವಿನಿಂದ ಮೂರ್ತಿ ರಚಿಸಿದ್ದಾಗಿ ಇದೆ. ಜನರ ಹಣವನ್ನು ದುರುಪಯೋಗಪಡಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಪುಣ್ಯಕ್ಕೆ ಇದು ಮಾಡಿದಾಗ ಬಿದ್ದು ಹೋಗಿಲ್ಲ..ಅದಕ್ಕೂ ಮೊದಲು ಕಳಪೆ ಕೆಲಸ ಅಂತ ತೆಗೆಸಿದ್ದಾರೆ. ಹೀಗಂತ ನ್ಯಾಯಮೂರ್ತಿಗಳು ಸುನಿಲ್ ಕುಮಾರ್ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.