ರೋಗಿಗಳ ಸಮಸ್ಯೆ ನಿವಾರಣೆ ಆರೋಗ್ಯ ಇಲಾಖೆ ಜವಾಬ್ದಾರಿ
ಕೋಲಾರ,ಸೆ,೧೩– ಸರ್ಕಾರಿ ಆಸ್ಪತ್ರೆಗಳಲ್ಲಿ ಒಳ ರೋಗಿಗಳಿಗೆ ಮತ್ತು ಹೊರ ರೋಗಿಗಳಿಗೆ ಅಗತ್ಯವಾದ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸ ಬೇಕಾಗಿರುವುದು ಜಿಲ್ಲಾ ಶಸ್ತ್ರ ಚಿಕಿತ್ಸಕರದ್ದಾಗಿದೆ. ಏನೆ ಸಮಸ್ಯೆಗಳು ಇದ್ದರೂ ಜಿಲ್ಲಾ ಮಟ್ಟದಲ್ಲಿ ಬಗೆ ಹರಿಸದಿದ್ದರೆ ರಾಜ್ಯ ಮಟ್ಟದ ಆರೋಗ್ಯವ ಇಲಾಖೆಯ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸ ಬೇಕಾಗಿರುವುದು ಅವರು ಜವಾಬ್ದಾರಿಯಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ.ನಾಗಲಕ್ಷ್ಮೀ ಚೌದರಿ ಅಸಮಾಧಾನ ವ್ಯಕ್ತ ಪಡೆಸಿದರು,
ನಗರದ ಜಿಲ್ಲಾ ಎಸ್‌ಎನ್‌ಆರ್ ಸರ್ಕಾರಿ ಆಸ್ಪತ್ರೆಗೆ ರಾಜ್ಯ ಮಹಿಳಾ ಅಯೋಗದ ಅಧ್ಯಕ್ಷೆ ಡಾ.ನಾಗಲಕ್ಷಿ ಚೌದರಿ ಅವರು ಗುರುವಾರ ಭೇಟಿ ನೀಡಿ, ಆಸ್ಪತ್ರೆಯ ವ್ಯವಸ್ಥೆಯನ್ನು ವೀಕ್ಷಿಸಿದ ಸಂದರ್ಭದಲ್ಲಿ, ಆವರಣದಲ್ಲಿ ಕುಳಿತಿದ್ದ ಹೊರ ರೋಗಿಗಳನ್ನು ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ವಿಚಾರಿಸಿದರು,
ನಂತರ ವಿಶೇಷ ವಾರ್ಡ್, ಮಹಿಳಾ ವರ್ಡ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳ ತೀವ್ರ ನಿಗಾ ಘಟಕ, ಪ್ರಸೂತಿ ವಿಭಾಗಕ್ಕೆ ಭೇಟಿ ನೀಡಿದಾಗ ಆಲ್ಲಿ ಕಂಡು ಬಂದ ಅಸ್ಪಚ್ಚತೆ, ಕಸದ ಬುಟ್ಟಿಗಳು ವಿಲೇವಾರಿ ಮಾಡದೆ ಇರುವುದು, ದುರ್ವಾಸನೆ, ವೈದ್ಯರು ಸಕಾಲಕ್ಕೆ ಆಗಮಿಸಿ ಒಳ ರೋಗಿಗಳಿಗೆ ಚಿಕಿತ್ಸೆ ನೀಡದೆ ಇರುವುದು, ಶೌಚಾ ಗೃಹಗಳಿಗೆ ಬೀಗ ಹಾಕಿದನ್ನು ಕಂಡು ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಮಮತಾ, ಶುಶ್ರೂಷಕಾಧಿಕಾರಿ ವಿಜಯಮ್ಮ ಹಾಗೂ ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು.
ಆಸ್ಪತ್ರೆಗೆ ದಾಖಲಾಗಿ ಒಂದು ವಾರ ಕಳೆದಿದೆ, ವಿಶೇಷ ವಾರ್ಡಿನಲ್ಲಿ ಇದ್ದು ಸ್ವಚ್ಚತೆ ಮಾಡಿಲ್ಲ, ನಾನೇ ಖುದ್ದು ಸ್ವಚ್ಚತೆ ಮಾಡಿಕೊಂಡಿದ್ದೇನೆ, ಪಕ್ಕದಲ್ಲಿರುವ ಕಸದ ಬುಟ್ಟಿಯನ್ನು ವಿಲೇವಾರಿ ಮಾಡದಿರುವ ಹಿನ್ನಲೆಯಲ್ಲಿ ತ್ಯಾಜ್ಯ ತುಂಬಿ ಕೊಂಡು ದುರ್ನಾತ ಬೀರುತ್ತಿದೆ. ಶೌಚಾ ಗೃಹ ಬಾಗಿಲುಗಳು ಹಾಳಾಗಿವೆ. ಸಮರ್ಪಕವಾಗಿ ನೀರು ಬರುವುದಿಲ್ಲ ಎಂದು ಮಾಲೂರಿನ ನಿವಾಸಿ ಅಧ್ಯಕ್ಷರ ಗಮನಕ್ಕೆ ತಂದರು.
ಆಗ ಕೆಂಡಮಂಡಲರಾದ ಅಧ್ಯಕ್ಷೆ ನಾಗಲಕ್ಷಿ ಚೌದರಿ ಅವರು, ಇವೆಲ್ಲಾ ಸಮಸ್ಯೆಗಳಲ್ಲವೇ ? ನಾನು ಕೇಳಿದ್ದಕ್ಕೆ ಏನು ಸಮಸ್ಯೆಯಿಲ್ಲ ಎಂದು ಹೇಳುತ್ತೀರಾ ಅದರೆ ಈಗೇನೂ ಹೇಳುತ್ತಿರಾ ಎಂದು ಪ್ರಶ್ನಿಸಿದರು,
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಆಗಮಿಸಿ ಮಕ್ಕಳ ತೀವ್ರ ನಿಗಾ ಘಟಕ ವೀಕ್ಷಿಸಿದರು., ಕುಡಿಯುವ ನೀರು ಶುದ್ದ ನೀರಿನ ಘಟಕದಲ್ಲಿ ಖಾಲಿ ಆಗಿತ್ತು, ಬಿಸಿ ನೀರಿನ ಘಟಕವು ಶುಚಿ ಇಲ್ಲದೆ ಪಾಚಿ ಕಟ್ಟಿರುವುದು ಕಂಡರು ಹಾಗೂ ಅತಿಯಾಗಿ ಬಿಸಿ ನೀರು ಬರುತ್ತಿದ್ದನ್ನು ಕಂಡು ಅಧಿಕಾರಿಗಳು ಇಷ್ಟೊಂದು ಬಿಸಿ ಇದ್ದರೆ ಸಾರ್ವಜನಿಕರ ಕೈಗಳು ಸುಡುವುದಿಲ್ಲವೇ ಎಂದು ನಿಯೋಜಿತ ಸಿಬ್ಬಂದಿಗಳನ್ನು ಪ್ರಶ್ನಿಸಿ ನಿರ್ವಹಣೆಯ ಕೆಲಸಗಳನ್ನು ಗಂಭೀರವಾಗಿ ಮಾಡಿ, ಇಲ್ಲಿಗೆ ಬಹುತೇಕವಾಗಿ ಬಡ ರೋಗಿಗಳೇ ಚಿಕಿತ್ಸೆಗಾಗಿ ಬರುತ್ತಾರೆ. ಕನಿಷ ಕುಡಿಯುವ ನೀರು ಕಲ್ಪಿಸಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿ ಕಿಡಿಕಾರಿದರು.