ರಾಜ್ಯ ಮಟ್ಟಕ್ಕೆ ಕೋಲಾರದ ಕ್ರೀಡಾಪಟುಗಳು ಆಯ್ಕೆ
ಕೋಲಾರ,ಸೆ.೧೩- ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ ೧೪ ರಿಂದ ೧೭ ರವರೆಗೆ ನಡೆಯುವ ರಾಜ್ಯ ಮಟ್ಟದ ಅಂತರ ಜಿಲ್ಲಾ ಜೂನಿಯರ್ ಹಾಗೂ ಸೀನಿಯರ್ ಅಥ್ಲೆಟಿಕ್ಸ್ ಕ್ರೀಡಾ ಕೂಟಕ್ಕೆ ಜಿಲ್ಲೆಯಿಂದ ೨೩ ಬಾಲಕರು ಹಾಗೂ ೮ ಬಾಲಕಿಯರು ಸೇರಿ, ಒಟ್ಟು ೩೧ ಅಥ್ಲೆಟಿಕ್ ಕ್ರೀಡಾ ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ.
ನಗರದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಆಯ್ಕೆ ಪ್ರಕ್ರಿಯೆ ೧೪,೧೬,೧೮,೨೦,೨೩ ವರ್ಷದೊಳಗಿನ ಬಾಲಕ/ ಬಾಲಕಿಯರಿಗೆ ಏರ್ಪಡಿಸಲಾಗಿತ್ತು. ವಿವಿಧ ತಾಲ್ಲೂಕುಗಳಿಂದ ಸುಮಾರು ೨೦೦ ಕ್ಕೂ ಅಧಿಕ ಕ್ರೀಡಾ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಆಯ್ಕೆಯಲ್ಲಿ ೩೧ ಮಂದಿ ಅಥ್ಲೆಟ್ಸ್ ಜಿಲ್ಲೆಯಿಂದ ರಾಜ್ಯ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾದರು.
ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿಸಲು, ಬಾಲಕರ ವಿಭಾಗದಿಂದ ನಂದನ್ ಆರ್, ಉದಯ್ ಕಿರಣ್. ಕೆ. ಹೆಚ್, ಸಾಯಿ ಹಿತೇಶ್ ಎನ್, ರೋಶನ್ ಆರ್, ಮಯೂರ್ ಆರ್, ಮೋಹನ್ ಎಸ್, ಧನುಷ್ ಡಿ.ಆರ್, ಶಿವಮಣಿ ಕೆ.ವಿ, ದೈನಿಕ್ ಕದಂ ಆರ್.ಎಸ್, ಭಾನುಪ್ರಕಾಶ್ ಕೆ.ಎನ್, ರಾಮ್ ರಚಿತ್ ಸಿಂಗ್, ಜಿಯಾ ಉಲ್ ಅಬಿದಿನ್, ಮಹಮ್ಮದ್ ಸೂಫಿಯನ್ ಟಿ, ನಂದನ್ ಎಂ.ಸಿ, ಅಭಿಲಾಷ್ ಜಿ, ಅಭಿಷೇಕ್ ಸಿ, ಮೊಹಮ್ಮದ್ ಸಲ್ಮಾನ್ ಅಹ್ಮದ್, ಹರೀಶ್, ಅರುಶ್‌ಗೌಡ ಬಿ.ಎಂ, ವರುಣ್ ಕೆ.ವಿ, ಜೀವನ್ ಡೇನಿಯಲ್ ಜಿ, ಶ್ರವಂತ್ ಕುಮಾರ್ ಜಿ.ಎಸ್, ಸಂಕೀರ್ಥ್ ಐಸಾಕ್ ಹಾಗೂ ಬಾಲಕಿಯರ ವಿಭಾಗದಿಂದ ಆಶಾ ವೆಂಕಟೇಶಪ್ಪ, ಅಂಜಲಿ ಡಿ.ಎನ್, ಧನ್ಯಶ್ರೀ ಎಸ್.ಜಿ, ಧನ್ಯತಾ ವೈ, ಸ್ಪಂದನ ಎ, ಹರ್ಷ್ಮಿತಾ ಎನ್.ಆರ್, ಶಿರೀಷಾ ಜಿ, ಸುಪ್ರಿಯಾ ಎಸ್ ಆಯ್ಕೆಯಾಗಿದ್ದಾರೆ.
ಆಯ್ಕೆಯಾಗಿರುವ ಕ್ರೀಡಾ ಸ್ಪರ್ಧಿಗಳು ಕೋಲಾರದಿಂದ ಸೆ.೧೪ ರ ಶನಿವಾರದಂದು ಮೈಸೂರಿಗೆ ಪ್ರಯಾಣ ಮಾಡಲಿದ್ದಾರೆ. ಇವರ ಜೊತೆಗೆ ಬಾಲಕರ ತಂಡದ ವ್ಯವಸ್ಥಾಪಕರಾಗಿ ಕೆ.ಜಿ.ಎಫ್.ರಾಮು (೯೧೪೧೧೮೨೬೧೬), ತರಬೇತುದಾರರಾಗಿ ಕ್ರೀಡಾ ವಸತಿ ಶಾಲೆಯ ಎಂ.ವೆಂಕಟೇಶ್ ( ೯೬೨೦೫೪೩೭೦೦) ಮತ್ತು ಬಾಲಕಿಯರ ತಂಡದ ತರಬೇತುದಾರರಾಗಿ ಅನಿತಾ ರವರು ಕಾರ್ಯನಿರ್ವಹಿಸಲಿದ್ದಾರೆ.
ಆಯ್ಕೆಯಾದ ಕ್ರೀಡಾ ಸ್ಪರ್ಧಿಗಳಿಗೆ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಎನ್.ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಆರ್.ರಾಘವೇಂದ್ರ, ಉಪಾಧ್ಯಕ್ಷ ಗೌಸ್ ಖಾನ್, ಜಂಟಿ ಕಾರ್ಯದರ್ಶಿ ರಾಜೇಶ್ ಬಾಬು, ಸದಸ್ಯ ನಾಗೇಶ್ ರವರು ಅಭಿನಂದಿಸಿ, ಶುಭ ಹಾರೈಸಿದ್ದಾರೆ.