ಪ್ಲಾಸ್ಟಿಕ್ ಮುಕ್ತ ಗ್ರಾಮಪಂಗೆ ಕೈಜೋಡಿಸಿ
ಕೋಲಾರ, ಸೆ,೧೩- ಪ್ಲಾಸ್ಟಿಕ್ ಬಳಕೆ ಮುಕ್ತ ಗ್ರಾಮ ಪಂಚಾಯಿತಿ ಮಾಡುವ ನಮ್ಮ ಸಂಕಲ್ಪ ಕೈಗೂಡಲು ಮಹಿಳಾ ಸ್ವಸಹಾಯ ಸಂಘಗಳು ಕೈಜೋಡಿಸಬೇಕು, ಸಾಹಸ್ ಸಂಸ್ಥೆ, ಜುನಿಪರ್ ನೆಟ್‌ವರ್ಕ್‌ನ ಸಿಎಸ್‌ಆರ್ ಅನುದಾನದಲ್ಲಿ ಒದಗಿಸಿರುವ ಅಡುಗೆ ಪಾತ್ರೆಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿಯೂ ಸ್ವಾವಲಂಬನೆ ಸಾಧಿಸಬೇಕು ಎಂದು ತಾಲ್ಲೂಕಿನ ಸೂಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಕರೆ ನೀಡಿದರು.
ತಾಲ್ಲೂಕಿನ ಸೂಲೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಜುನಿಫರ್ ನೆಟ್ವರ್ಕ್ಸ್ ಸಿಎಸ್‌ಆರ್ ಅನುದಾನಡಿಯಲ್ಲಿ ಹಾಗೂ ಸಾಹಸ ಸಂಸ್ಥೆ ಸಹಯೋಗದೊಂದಿಗೆ ಗ್ರಾಮದ ನಿವೇದಿತ ಮಹಿಳಾ ಸ್ವಸಹಾಯ ಸಂಘಕ್ಕೆ ಒದಗಿಸಿರುವ ಅಡುಗೆ ಪಾತ್ರೆಗಳಿರುವ ನಿಸರ್ಗ ಕಟ್ಲರಿ ಬ್ಯಾಂಕ್‌ಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಗಾಂಧಿ ಜಯಂತಿಯ ಒಳಗೆ ಪ್ಲಾಸ್ಟಿಕ್ ಬಳಕೆ ಮುಕ್ತ ಪಂಚಾಯತಿಯನ್ನಾಗಿ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದ ಅವರು, ಒಂದೂವರೆ ಲಕ್ಷ ಮೌಲ್ಯದ ಸ್ಟೀಲ್,ಗಾಜಿನ ಲೋಟ,ಅಡುಗೆ ಪಾತ್ರೆಗಳನ್ನು ನಿವೇದಿತಾ ಮಹಿಳಾ ಸ್ವಸಹಾಯ ಸಂಘಕ್ಕೆ ಕೊಡುಗೆ ನೀಡಿದ್ದು, ಇದನ್ನು ಗ್ರಾಮೀಣ ಪ್ರದೇಶದ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಬಾಡಿಗೆಗೆ ನೀಡುವ ಮೂಲಕ ಸಂಘ ಆದಾಯವನ್ನು ಗಳಿಸಬಹುದು ಮತ್ತು ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣವೂ ಹಾಕಲು ಸಹಕಾರಿಯಾಗಿದೆ ಎಂದರು.
ಇಂದು ಪ್ಲಾಸ್ಟಿಕ್ ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು, ಎಲ್ಲದಕ್ಕೂ ಪ್ಲಾಸ್ಟಿಕ್ ಉಪಯೋಗಿಸುವತ್ತ ನಾವು ತಲುಪಿದ್ದೇವೆ, ಪ್ಲಾಸ್ಟಿಕ್ ಉತ್ಪನ್ನಗಳು ಮಾನವನ ಆರೋಗ್ಯ, ಪ್ರಾಣಿಗಳ ಆರೋಗ್ಯ ಮತ್ತು ಪರಿಸರಕ್ಕೆ ಅಪಾಯ ಉಂಟು ಮಾಡುವುದಲ್ಲದೇ ಅಂತರ್ಜಲ ನಾಶಕ್ಕೂ ಕಾರಣವಾಗಿದೆ ಎಂದು ಕಳವಳ ವ್ಯಕ್ತ ಪಡೆಸಿದರು,
ಕೋಲಾರ ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ವೆಂಕಟಾಚಲಪತಿ ಮಾತನಾಡಿ,ಪ್ಲಾಸ್ಟಿಕ್ ಇಲ್ಲದೆ ನಾವು ಇಲ್ಲ ಇನ್ನು ರೀತಿಯಲ್ಲಿ ಅದರ ಮೇಲೆ ಅವಲಂಬಿತರಾಗಿದ್ದೇವೆ, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು, ಇಲ್ಲವಾದರೆ ಇದು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ತೊಂದರೆ ನೀಡುತ್ತದೆ ಎಂದರು.
ಗ್ರಾ.ಪಂ ಉಪಾಧ್ಯಕ್ಷೆ ರೂಪಾ, ಪಿಡಿಓ ಬಾಲಾಜಿ, ಸದಸ್ಯರಾದ ಅಶೋಕ, ಜಿ.ಗಾಯತ್ರಮ್ಮ, ವೆಂಕಟೇಶಪ್ಪ, ಸುಜಾತಮ್ಮ, ರಬೀನಾತಾಜ್, ಟಿ.ಎಸ್.ನರಸರಾಜು, ವಿ.ಆದಿಮೂರ್ತಿ, ಚಂದ್ರಿಕಾ, ಸಿದ್ದಮ್ಮ, ಎಸ್.ಲೋಕೇಶ್, ಕೆ.ಶ್ಯಾಮಲ, ಪದ್ಮ, ಎನ್.ಕೃಷ್ಣಮೂರ್ತಿ, ಎಂ.ಶಿಲ್ಪ, ಮುನಿರಾಜು, ಎಂ.ನಾರಾಯಣಸ್ವಾಮಿ, ಕೆಂದಟ್ಟಿ ಎಂ.ನಾರಾಯಣಸ್ವಾಮಿ,ಎಸ್.ನಂದಿನಿ ಗ್ರಾ.ಪಂ ಕಾರ್ಯದರ್ಶಿ ಶ್ರೀನಿವಾಸಪ್ಪ, ಎಸ್‌ಡಿಎ ಪ್ರದೀಪ್‌ಕುಮಾರ್ ಮತ್ತಿತರಿದ್ದರು.