ಅಬ್ಬರದ ಹೆಜ್ಜೆಯಿಟ್ಟುಕೊಂಡು ಬರುತ್ತಿದೆ ”ಕಲ್ಜಿಗ”
ಮಂಗಳೂರು: ಹಿಮಾನಿ ಫಿಲಂಸ್ ಬ್ಯಾನರ್‌ನಡಿ ನಿರ್ಮಾಣಗೊಂಡಿರುವ “ಕಲ್ಜಿಗ” ಕನ್ನಡ ಸಿನಿಮಾ ಸೆ.೧೩ ರಂದು ರಾಜ್ಯಾದಂತ್ಯ ತೆರೆಕಾಣಲಿದೆ. ಕುತೂಹಲಕಾರಿಯಾಗಿರುವ ಶೀರ್ಷಿಕೆಯಲ್ಲೇ ಸೆಳೆತವೊಂದನ್ನು ಬಚ್ಚಿಟ್ಟುಕೊಂಡಿರುವ ಈ ಚಿತ್ರದ ಟ್ರೈಲರ್ ಭಾರತ್ ಮಾಲ್‌ನ ಭಾರತ್ ಸಿನಿಮಾಸ್ ನಲ್ಲಿ ಅನಾವರಣಗೊಂಡಿತ್ತು. ಚಿತ್ರದ ಟ್ರೈಲರ್ ಎ೨ ಫಿಲ್ಮ್ ಯೂಟ್ಯೂಬ್ ಚಾನೆಲ್‌ನಲ್ಲಿ ಬೆಡುಗಡೆಯಾಗಿದ್ದು, ಜನರಿಂದ ಅದ್ಬುತ ಪ್ತತಿಕ್ರಿಯೆ ದೊರಕಿದೆ ಎಂದು ನಿರ್ದೇಶಕ ಸುಮನ್ ಸುವರ್ಣ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಶರತ್ ಕುಮಾರ್ ಎ.ಕೆ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. “ಕಲ್ಜಿಗ” ದ ಕಥೆ ಚಿತ್ರಕಥೆ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದು, ಹಂಸಲೇಖ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ನಟ ಅರ್ಜುನ್ ಕಾಪಿಕಾಡ್ ನಾಯಕನಾಗಿ ಹಾಗೂ ಸುಶ್ಮಿತಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ನಟರಾದ ಗೋಪಿನಾಥ್ ಭಟ್, ಜ್ಯೋತಿಷ್ ಶೆಟ್ಟಿ, ಮಾನಸಿ ಸುಧೀರ್, ವಿಜಯ್ ಶೋಭರಾಜ್ ಪಾವೂರ್, ಶ್ಲಾಘಾ ಸಾಲಿಗ್ರಾಮ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪ್ರಸಾದ್ ಕೆ. ಶೆಟ್ಟಿ ಹಿನ್ನಲೆ ಸಂಗೀತ ನೀಡಿದ್ದಾರೆ.