ದುರ್ಗಾ ಮಾತಾ ದೌಡ್‍ಗೆ ಚಾಲನೆ
ಬೈಲಹೊಂಗಲ,ಅ.4:– ಭೂಮಿಯ ಮೇಲಿನ ಅತ್ಯಂತ ಹಳೆಯ ಹಾಗೂ ಪವಿತ್ರ ಧರ್ಮಕ್ಕೆ ಸೇವಕರಾಗಿ ಜೀವನ ಸಾರ್ಥಕಗೊಳಿಸುವಂತೆ ಮೂರುಸಾವಿರ ಮಠದ ಪ್ರಭು ನೀಲಕಂಠ ಕರೆ ನೀಡಿದರು.
ಪಟ್ಟಣದ ಜವಳಿ ಕೂಟ ದಲ್ಲಿ ಗ್ರಾಮದೇವಿ ದೇವಸ್ಥಾನದಲ್ಲಿ ದುರ್ಗಾ ಮಾತಾ ದೌಡ್ ಗೆ ಚಾಲನೆ ಅವರು ಮಾತನಾಡಿದರು.
ಜನರನ್ನು ಹೆದರಿಸಿ ನಂಬಿಸುವುದಕ್ಕಿಂತ ನಾಲ್ಕರು ಜನರಿಗೆ ಅನ್ನ ಹಾಕಿ ಸ್ವರ್ಗ ಕಾಣಿರೆಂಬ ಧ್ಯೇಯವುಳ್ಳ ಪವಿತ್ರ ಧರ್ಮವಾಗಿದೆ.
ದುಷ್ಟ ಶಕ್ತಿಗಳನ್ನು ನಿಗ್ರಹಿಸಲು ದುರ್ಗಾ ಮಾತೆಯ, ಧರ್ಮ ರಕ್ಷಣೆಗಾಗಿ ವಿಷ್ಣು ದಶವತಾರ ಎತ್ತಿದ ಧರ್ಮವಾಗಿದ್ದು,ಇಂತಹ ಪವಿತ್ರ ಧರ್ಮದಲ್ಲಿ ಹುಟ್ಟಿರುವುದು ನಮ್ಮೆಲರ ಪೂರ್ವಜನ್ಮದ ಪುಣ್ಯದ ಫಲವೆಂದು ತಿಳಿಸಿದರು.
ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ, ಪ್ರಮೋದಕುಮಾರ ವಕ್ಕುಂದಮಠ ಮಾತನಾಡಿ, ಪವಿತ್ರ ದಸರಾ ಸಮಯದಲ್ಲಿ ಪ್ರತಿಕ್ಷಣ ದೇವಿ ಆರಾಧನೆ ಮೂಲಕ ಜೀವನದಲ್ಲಿ ಶಾಂತಿ, ನೆಮ್ಮದಿ ಹೊಂದುವಂತೆ ತಿಳಿಸಿದರು.
ಗ್ರಾಮದೇವಿ ದೇವಸ್ಥಾನದಿಂದ ಆರಂಭವಾದ ಮೊದಲ ದಿನದ ದೌಡ್ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ ಗಲ್ಲಿ ಗಾಳಿ ದುರ್ಗಾದೇವಿ ದೇವಸ್ಥಾನಕ್ಕೆ ಬಂದು ತಲುಪಿತು. ದೌಡ್ ದಲ್ಲಿ ಹಿರಿಯರು, ಯುವಕರು, ಮಕ್ಕಳು, ಕದಳಿ ಮಹಿಳಾ ವೇದಿಕೆಯ ಮಾತೆಯರು ಭಾಗವಹಿಸಿದ್ದರು. ವೇ. ಮೂ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ, ನಟ ಶಿವರಂಜನ ಬೋಳನ್ನವರ, ಉದ್ಯೆಮಿ ವಿಜಯ ಮೆಟಗುಡ್ಡ, ಬಸವರಾಜ ಜನ್ಮಟ್ಟಿ, ಮಹಾಂತೇಶ ತುರಮರಿ, ಮಡಿವಾಳಪ್ಪ ಹೋಟಿ, ಸೋಮನಾಥ ಸೊಪ್ಪಿಮಠ, ಶ್ರೀಶೈಲ ಯಡಳ್ಳಿ, ಶಿವಾನಂದ ಬಡ್ಡಿಮನಿ, ಬಾಬು ಕುಡಸೋಮಣ್ಣವರ, ಶಿವಾನಂದ ಬೆಳಗಾವಿ, ರಾಜು ಬಡಿಗೇರ, ಎಫ್.ಎಸ್.ಸಿದ್ದನಗೌಡರ, ನಾರಾಯಣ ನಲವಡೆ, ಗೌತಮ್ ಇಂಚಲ, ಅಶೋಕ ಸವದತ್ತಿ, ವಿವೇಕಾನಂದ ಪೂಜಾರ, ಮಲ್ಲಿಕಾರ್ಜುನ ಏಣಗಿಮಠ, ಮುರುಳಿಧರ ಮಾಳೋದೆ, ಸಂಗಮೇಶ ಸವದತ್ತಿಮಠ, ಮಂಜುನಾಥ ಜಾಧವ, ಮಹಾಂತೇಶ ಮಾಟ್ನವರ, ಮಂಜುನಾಥ ಆದರಗಿ, ಮಂಜುನಾಥ ಕಂಠಿ, ಮಹೇಶ ಜಾಧವ, ಆನಂದ ಗುಂಡ್ಲೂರ, ಆನಂದ ಅಕ್ಕಿ, ಗಣೇಶ ಕಾಂಬ್ಳೇ, ರಾಜು ಕಂಠಿ,ಸಂತೋಷ ಹುಣಶೀಕಟ್ಟಿ, ಆನಂದ ಹಿರೇಮಠ, ಆನಂದ ತೋಟಗಿ, ಬಸವರಾಜ ಸರಾಯದ, ಬಸವರಾಜ ದೊಡಮನಿ, ಚಂದ್ರಕಾಂತ ಉಂಡಿ ಸೇರಿದಂತೆ ಕ್ರಿಯಾಶೀಲ ಗೆಳೆಯರ ಬಳಗದವರು ಉಪಸ್ಥಿತರಿದ್ದರು.