ಶಿಕ್ಷಕರು ಮೌಲ್ಯಯುತ ಶಿಕ್ಷಣ ನೀಡಲಿ
ಕೆ.ಆರ್.ಪುರ, ಅ.೪- ಪೋಷಕರು ಹಾಗೂ ಶಿಕ್ಷಕರು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರು ತಿಳಿಸಿದರು.
ಬೆಂಗಳೂರು ಅನುದಾನರಹಿತ ಶಾಲಾ ಕಾಲೇಜು ಆಡಳಿತ ಮಂಡಳಿ ಗಳ ಒಕ್ಕೂಟದ ವತಿಯಿಂದ ಗೆದ್ದಲ ಹಳ್ಳಿಯ ಪ್ರೇಸ್ಟೀಜ್ ಶಾಲೆಯಲ್ಲಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಜೀವನದಲ್ಲಿ ಮೌಲ್ಯಗಳು ಕುಂಠಿತ ವಾಗುತ್ತಿರುವುದು ಬೇಸರದ ಸಂಗತಿ, ಮಾನವೀಯ ಮೌಲ್ಯಗಳನ್ನು ಬಾಲ್ಯದಿಂದಲೇ ಮಕ್ಕಳಿಗೆ ಕಲಿಸಬೇಕು ಎಂದು ಸಲಹೆ ನೀಡಿದರು. ತಂತ್ರಜ್ಞಾನಗಳು ಅಭಿವೃದ್ಧಿ ಹೊಂದಿ ದಂತೆ, ಮೌಲ್ಯಗಳು ಕುಸಿಯುತ್ತಿವೆ, ಮಕ್ಕಳಿಗೆ ತಂತ್ರಜ್ಞಾನದ ಜೋತೆಗೆ ಮನುಷತ್ವವನ್ನು ಕಲಿಸಬೇಕೆಂದು ಸಲಹೆ ನೀಡಿದರು.
ಒಕ್ಕೂಟ ಶಿಕ್ಷಕರು ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದ್ದು,ಶಿಕ್ಷಕರ ಹಿತರಕ್ಷಣೆ ನಮ್ಮ ಧ್ಯೇಯವಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಮೇಜರ್ ಜನರಲ್ ಬಸವರಾಜು,ಡಾ.ಹುಲಿಕಲ್ ನಟರಾಜ್,ಡಾ.ಅಂಜಿನಪ್ಪ, ಒಕ್ಕೂಟದ ಗೌರವಾಧ್ಯಕ್ಷ ಕೆ.ಅಂಜಿನಪ್ಪ, ಕೆ ರಮೇಶ್,ಸಂಸ್ಥಾಪಕ ಅಧ್ಯಕ್ಷ ಕೆ.ಪರಶುರಾಮ,ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕೆ.ಸ್ವಾಮಿ,ಖಜಾಂಚಿ ಶ್ರೀನಿವಾಸ್, ಸುಹಾಸ್ ಸುಬ್ಬರಾಜು,ಮಾಜಿ ಭೂನ್ಯಾಯ ಮಂಡಲಿ ಸದಸ್ಯ ಆನಂದ್,ಮುಖಂಡರಾದ ಪ್ರಭಾಕರ್ ಇದ್ದರು.