ಹೆಣ್ಣು ಮಗುವಿಗೆ ಜನ್ಮ ನೀಡಿದ ಹರ್ಷಿಕಾ
ಬೆಂಗಳೂರು,ಅ.೪-ಕಳೆದ ವರ್ಷ ಆಗಸ್ಟ್‌ನಲ್ಲಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ದಂಪತಿ ಚೊಚ್ಚಲ ಮಗುವನ್ನು ಸ್ವಾಗತಿಸಿದ್ದಾರೆ. ಗುರುವಾರ, ಹರ್ಷಿಕಾ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತೋಷ ಸುದ್ದಿಯನ್ನು ಭುವನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ನನ್ನ ಮಗಳು ಮನೆಗೆ ಬಂದಿರುವುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಹರ್ಷಿ (ಹರ್ಷಿಕಾ ಪೂಣಚ್ಚ) ಮತ್ತು ಮಗು ಆರೋಗ್ಯವಾಗಿದ್ದಾರೆ. ಮಗು ಹರ್ಷಿಯಂತೆ ಕಾಣುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ ಮಗಳು ನನ್ನಂತೆ ಕಾಣುತ್ತಾಳೆ ಎನ್ನುತ್ತಾಳೆ ಹರ್ಷಿ ಎಂದು ಭುವನ್ ಪೊನ್ನಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.ನಿಮ್ಮೆಲ್ಲರ ಪ್ರೀತಿಯ ಶುಭಾಶಯಗಳಿಗೆ ಧನ್ಯವಾದಗಳು.
ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಮತ್ತು ನೆಟಿಜನ್‌ಗಳು ಹರ್ಷಿಕಾ ಮತ್ತು ಭುವನ್‌ಗೆ ಅಭಿನಂದನೆಗಳ ಮಳೆಯೇ ಹರಿಸಿದ್ದಾರೆ.