ನವರಾತ್ರಿ ಅಂಗವಾಗಿ ನಿತ್ಯ ವಿಶೇಷ ಪೂಜೆ ಸಫಲಮ್ಮ ದೇವಿಗೆ ಅರಿಶಿನ ಅಲಂಕಾರ
ಕೋಲಾರ,ಅ,೪- ನಗರದ ಜಯನಗರ ೭ನೇ ಕ್ರಾಸ್‌ನಲ್ಲಿರುವ ಸಪಲಮ್ಮ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ ಅಮ್ಮನವರಿಗೆ ಪ್ರತಿ ನಿತ್ಯವೂ ವಿವಿಧ ರೀತಿಯ ಅಲಂಕಾರ, ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.
ಗುರುವಾರದಂದು ದೇವಿಗೆ ಅರಿಶಿನ ಅಲಂಕಾರ ಮಾಡಲಾಗಿತ್ತು, ಅರ್ಚಕರಾದ ಸತ್ಯನಾರಾಯಣ ಪೂಜೆಯ ನೇತೃತ್ವ ವಹಿಸಿದ್ದು, ನೂರಾರು ಭಕ್ತರು ತಾಯಿಯ ದರ್ಶನ ಪಡೆದರು.
ನವರಾತ್ರಿಯ ಎಲ್ಲಾ ೯ ದಿನಗಳಲ್ಲೂ ವಿಶೇಷ ಅಲಂಕಾರ ನಡೆಯಲಿದ್ದು, ಅ.೪ ರಂದು ಕುಂಕುಮ ಅಲಂಕಾರ, ೫ ರಂದು ಅರಿಶಿನ,ಕುಂಕುಮ ಅಲಂಕಾರ, ೬ ರಂದು ವೀಳ್ಯದೆಲೆ ಅಲಂಕಾರ, ೭ ರಂದು ಬೆಣ್ಣೆ ಅಲಂಕಾರ, ಅ.೮ರಂದು ಮಂಗಳವಾರ ವಜ್ರಾಂಗಿಮತ್ತು ಲಕ್ಷ್ಮೀ ಅಲಂಕಾರ, ಅ.೯ ರಂದು ಸರಸ್ವತಿ ಅಲಂಕಾರ, ಅ.೧೦ ರಂದು ಶಾಕಾಂಬರಿ, ತರಕಾರಿ ಅಲಂಕಾರ, ಅ.೧೧ ರಂದು ದುರ್ಗಾ ಅಲಂಕಾರ ಮತ್ತು ಅ.೧೨ ರಂದು ವಿಶೇಷ ರೀತಿಯಲ್ಲಿ ಹೂವಿನ ಅಲಂಕಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿ ದಿನ ಬೆಳಗ್ಗೆ ೭ ಗಂಟೆಗೆ ಸಪಲಮ್ಮ ದೇವಿಗೆ ಪಂಚಾಮೃತ ಅಭಿಷೇಕ ನಡೆಯಲಿದ್ದು, ಸಂಜೆ ೬-೪೫ಕ್ಕೆ ಅಲಂಕಾರ ಹಾಗೂ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಇರುತ್ತದೆ ಎಂದು ಅರ್ಚಕರಾದ ಸತ್ಯನಾರಾಯಣ ತಿಳಿಸಿದ್ದಾರೆ.