ಕಾರು ಹಿಮ್ಮುಖ ಚಲನೆ-‘ಚರ್ಮುರಿ’ ಅಂಗಡಿಗೆ ಹಾನಿ
ಪುತ್ತೂರು : ನಿಲ್ಲಿಸಲಾಗಿದ್ದ ಕಾರನ್ನು ಚಲಾಯಿಸಲು ಚಾಲಕ ಮುಂದಾದ ಸಂದರ್ಭ ಕಾರಿನ ಎಕ್ಸ್‌ಲೇಟರ್ ಜಾಮ್ ಆಗಿ ಗೊಂದಲ ಉಂಟಾದ ಪರಿಣಾಮ ಕಾರು ಹಿಮ್ಮುಖವಾಗಿ ಚಲಿಸಿ ಕಿಲ್ಲೆ ಮೈದಾನದಲ್ಲಿ ತಾತ್ಕಾಳಿಕವಾಗಿ ಹಾಕಲಾದ ಚರ್ಮುರಿ ಅಂಗಡಿಗೆ ಡಿಕ್ಕಿ ಹೊಡೆದ ಪರಿಣಾಮ ಅಂಗಡಿಯಲ್ಲಿದ್ದ ವ್ಯಕ್ತಿ ಮತ್ತು ಮಹಿಳೆಯೊಬ್ಬರು ಗಾಯಗೊಂಡ ಘಟನೆ ಪುತ್ತೂರು ಕಿಲ್ಲೆ ಮೈದಾನದಲ್ಲಿ ಗುರುವಾರ ನಡೆದಿದೆ.
ಕಿಲ್ಲೆ ಮೈದಾನದೊಳಗೆ ಕಾರು ನಿಲ್ಲಿಸಿದ್ದ ಕಾಸರಗೋಡು ಮೂಲದ ವೆಂಕಟರಮಣ ಭಟ್ ಎಂಬವರು ಕಾರನ್ನು ಚಲಾಯಿಸಲು ಮುಂದಾಗಿದ್ದ ವೇಳೆ ಚಾಲಕನ ನಿಯಂತ್ರಣ ಕಳಕೊಂಡ ಕಾರು ಹಿಮ್ಮುಖವಾಗಿ ಚಲಿಸಿ, ಕಿಲ್ಲೆ ಮೈದಾನದೊಳಗೆ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವದ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಅಳವಡಿಸಲಾಗಿದ್ದ ಅಂಗಡಿಯೊಂದಕ್ಕೆ ಹೋಗಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಅಂಗಡಿಯಲ್ಲಿದ್ದ ರಮೇಶ್ ಹಾಗೂ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ಸ್ಥಳಕ್ಕೆ ಬಂದ ಪುತ್ತೂರು ಸಂಚಾರಿ ಪೊಲೀಸರು ಕಾರನ್ನು ಠಾಣೆಗೆ ಕೊಂಡೊಯ್ದಿದ್ದಾರೆ.