ಪಂಚ ಗ್ಯಾರೆಂಟಿ ಯೋಜನೆಗಳಿಗೆ ಹಣಕಾಸಿನ ಕೊರತೆ ಇಲ್ಲ
ಕಲಬುರಗಿ:ಸೆ.12: ರಾಜ್ಯದಲ್ಲಿ ಪ್ರಥಮ ಬಾರಿಗೆ ಪಂಚ ಗ್ಯಾರಂಟಿ ಯೋಜನೆ ಅನುμÁ್ಠನಕ್ಕೆ ತರಲಾಗಿದ್ದು, ಇದಕ್ಕೆ ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುμÁ್ಠನ ಪ್ರಾಧಿಕಾರದ ಉಪಾಧ್ಯಕ್ಷ ಎಸ್. ಆರ್. ಮೆಹರೋಜ್‍ಖಾನ ಸ್ಪಷ್ಟಪಡಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಪಂಚಗ್ಯಾರಂಟಿ ಫಲಾನುಭವಿಗಳ ಜತೆ ಸಂವಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ ಚಿಂತನೆ, ಸಾಮಾಜಿಕ ಕಳಕಳಿ ಇಟ್ಟುಕೊಂಡು ಮಹಿಳಾ ಸಬಲೀಕರಣ, ಯುವ ಸಬಲೀಕರಣ ಮಾಡುವ ಗ್ಯಾರಂಟಿಗಳ ಸದುದ್ದೇಶವಾಗಿದೆ. ಆದರೆ ಪಂಚಗ್ಯಾರಂಟಿ ಸ್ಥಗಿತ ಮಾಡಬೇಕು ಎಂಬ ಶಾಸಕರ ಆಗ್ರಹವನ್ನು ತಳ್ಳಿ ಹಾಕಿದರು.
ರಾಜ್ಯದಲ್ಲಿ 4.20 ಕೋಟಿ ಜನರು ಐದು ಗ್ಯಾರಂಟಿ ಯೋಜನೆಗೊಳಪಟ್ಟಿದ್ದು, ವಾರ್ಷಿಕವಾಗಿ 53 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು. ರಾಜ್ಯದಲ್ಲಿ ನಾಲ್ಕೈದು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಗ್ಯಾರಂಟಿ ಯೋಜನೆಗಳ ಪರಾಮರ್ಶಿಸಲಾಗಿದೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಶೇ.96 ಸಾಧನೆ:-
ಈ ಜಿಲ್ಲೆಯಲ್ಲಿ ಇದುವರೆಗೆ ಶೇ.96 ರಷ್ಟು ಪಂಚಗ್ಯಾರಂಟಿಗಳ ಅನುμÁ್ಠನವಾಗಿದ್ದು, ತಾಂತ್ರಿಕ ಸಮಸ್ಯೆಗಳಿಂದ ಶೇ.4 ಫಲಾನುಭವಿಗಳಿಗೆ ಯೋಜನೆ ತಲುಪಿಲ್ಲ. ಮುಂದಿನ ದಿನಗಳಲ್ಲಿ ನೂರಕ್ಕೆ ನೂರರಷ್ಟು ಗುರಿ ಸಾಧಿಸಲಾಗುವುದು.
ಗೃಹಲಕ್ಷ್ಮೀ: 5.45 ಲಕ್ಷ ಫಲಾನುಭವಿಗಳಿಗೆ 109 ಕೋಟಿ ರೂ. ಖರ್ಚಾದರೆ, ಗೃಹಜ್ಯೋತಿ: 5.49 ಲಕ್ಷ ಫಲಾನುಭವಿಗಳಿಗೆ 279 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇನ್ನು ಅನ್ನಭಾಗ್ಯ ಯೋಜನೆ ಅಡಿ 314 ಕೋಟಿ ರೂ. ಡಿಬಿಟಿ ಮೂಲಕ ಹಣ ಸಂದಾಯಿಸಲಾಗಿದೆ. ಮಹಿಳಾ ಉಚಿತ ಪ್ರಯಾಣದ ಶಕ್ತಿ ಯೋಜನೆಯಡಿ 8.28 ಕೋಟಿ ರೂ. ನಷ್ಟು ಟ್ರಿಪ್‍ಗಳಾಗಿದ್ದು, ಇದಕ್ಕೆ 271 ಕೋಟಿ ರೂ. ವೆಚ್ಚ ಭರಿಸಲಾಗಿದೆ. ಯುವ ನಿಧಿ ಯೋಜನೆಯಡಿ 12,287 ಯುವಕರಿಗೆ 26 ಲಕ್ಷ ರೂ. ಭತ್ಯೆ ಪಾವತಿಸಲಾಗಿದೆ. ತಾಂತ್ರಿಕ ಸಮಸ್ಯೆಗಳಿಂದ ಕೆಲವರಿಗೆ ಯುವನಿಧಿ ಭತ್ಯೆ ಸಿಗದಿರುವುದಕ್ಕೆ ಕೇಳಲಾದ ಪ್ರಶ್ನೆಗೆ ಪ್ರತಿ ತಿಂಗಳು ಉದ್ಯೋಗ ದೊರೆತ್ತಿಲ್ಲವೆಂದು ಸ್ವಯಂ ದೃಢೀಕರಣ ಪತ್ರ ಅಪ್‍ಲೋಡ್ ಮಾಡಿದರೆ ಮುಂದಿನ ತಿಂಗಳ ಭತ್ಯೆ ಸಿಗಲಿದೆ ಎಂದು ತಿಳಿಹೇಳಿದರು. ಅನುμÁ್ಠನ ಪ್ರಾಧಿಕಾರದ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಉಪಾಧ್ಯಕ್ಷ ಸೋಮಶೇಖರ ಹಿರೇಮಠ, ಸಿದ್ದರಾಮಲು ಕುಂಬಾರ, ಸದಸ್ಯರಾದ ಶರಣು ಡೋಣಗಾಂವ್ ಮತ್ತಿತರರಿದ್ದರು.
ನಂತರ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್. ಆರ್. ಮೆಹರೋಜ್ ಖಾನ ಅವರು ಸುಪರ್ ಮಾರ್ಕೆಟ್ ಹೋಗಿ ಅಲ್ಲಿಂದ ಬಸ್ ಒಳಗಡೆ ಹೋಗಿ ಬಸಕಂಡಕ್ಟರಾಗಿ ಪ್ರಯಾಣಿಕರಿಗೆ ಟಿಕೇಟ್ ನೀಡಿ ಅವರು ಕುಂದುಕೊರತೆಗಳನ್ನು ಆಲಿಸಿದರು.