ಗ್ಯಾರಂಟಿ ಸಹಾಯ: ಫಲಾನುಭವಿಗಳು ಬಿಚ್ಚಿಟ್ಟ ಮನದಾಳದ ಮಾತು ಸಿಎಂ ಸಿದ್ದರಾಮಯ್ಯ ಎಲ್ಲೆ ಇದ್ದರೂ ತಣ್ಣಗಿರಲಿ
ಕಲಬುರಗಿ:ಸೆ.12: “ಮಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲೇ ಇದ್ದರೂ ನಮ್ಮಪ್ಪ ಚನ್ನಾಗಿರಲಿ. ಅವರು ಜಾರಿಗೆ ತಂದಿರುವ ಐದು ಗ್ಯಾರಂಟಿಗಳಿಂದ ನನ್ನಂತಹ ಬಡವಿಗೆ ಬಹಳ ಅನುಕೂಲವಾಗಿದೆ
ಗುರುವಾರದಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಜೊತೆಗೆ ಗುರುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಾವಳಿಗಿಯಿಂದ ಬಂದಿರುವ ರಾಧಾ ಅವರು ಕೂಲಿ ಕೆಲಸ ಮಾಡಿಕೊಂಡಿರುವ ಇವರು ಎರಡು ಮಕ್ಕಳಿಗೆ ಕಂಪ್ಯೂಟರ ಕ್ಲಾಸ್‍ಗೆ ಪ್ರವೇಶಾತಿ ಮಾಡಿಸಿದ್ದಾಳೆ. ಈ ಕೋರ್ಸಗೆ 6 ತಿಂಗಳಿಗೆ 8 ಸಾವಿರ ಫೀಜ್ ಇದೆ. ಕೂಲಿ ಮಾಡಿ ಬಂದ ಹಣದಿಂದ ಮನೆ ನಡೆಸುವುದೆ ಕಷ್ಟಕರವಾಗಿತ್ತು ಆದರೆ ಗೃಹ ಲಕ್ಷ್ಮಿ ಹಣದಿಂದ ಅನೂಕುಲವಾಗಿದೆ ಎಂದು ತಮ್ಮ ಮನದಾಳದ ಮಾತು. ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಮೆಹರೋಜ್ ಖಾನ್ ಅವರು ಐದು ಗ್ಯಾರಂಟಿ ಯೋಜನೆಗಳ ಯೋಜನೆಗಳ ಫಲಾನುಭವಿಗಳ ಅನುಭವಗಳನ್ನು ಆಲಿಸಿದರು.
ಫಲಾನುಭವಿಗಳಾದ ಅಮೀನಾ ಮಾತನಾಡಿ ನಾನು ಪ್ರರ್ವೇಟ್ ಸ್ಕೂಲ್ ಶಿಕ್ಷಕಿ ಆಗಿದ್ದೇನೆ ಮನೆ ಹೆಣ್ಣು ಮಕ್ಕಳಿಗೆ 2 ಸಾವಿರ ಅಂದರೆ 2 ಲಕ್ಷ ಇದ್ದಂತೆ ನನಗೆ ಎರಡು ಹೆಣ್ಣು ಮಕ್ಕಳು ಇದ್ದಾರೆ. 8ನೇ ತರಗತಿ ಓದುತ್ತಿದ್ದಾರೆ ಅವರಿಗೆ ಸ್ಕೂಲ್ ಫೀಜ್ ಕಟ್ಟಲು ಆಗುತ್ತಿರಲಿಲ್ಲ ಆದರೆ ಇಗ ನಾವು ಗೃಹಲಕ್ಷ್ಮಿ ಹಣದಿಂದ ಸರಳವಾಗಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಲು ಅನುಕೂಲಕರವಾಗಿದೆ ಎಂದು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
“ನನ್ನ ಗಂಡ ನಿಧನರಾಗಿ ಎರಡು ವರ್ಷಗಳಾಗಿವೆ. ಮಗಳು ಕಾಲೇಜಿಗೆ ಹೋಗುತ್ತಾಳೆ. ಗೃಹಲಕ್ಷ್ಮಿ ಹಣದಿಂದ ಅವಳ ಓದಿಗೆ ಬಹಳ ಅನುಕೂಲವಾಗಿದೆ. ಕಾಲೇಜಿಗೆ ಹೋಗಿ ಬರಲು ಉಚಿತವಾಗಿ ಬಸ್ ವ್ಯವಸ್ಥೆ ಮಾಡಿದ್ದಾರೆ. ರೇಷನ್ ಕೊಡುತ್ತಿದ್ದಾರೆ. ಕರೆಂಟ್ ಬಿಲ್ ತುಂಬುವ ಅಗತ್ಯವಿಲ್ಲ. ನನ್ನಂತಹ ಬಡ ಹೆಣ್ಣುಮಗಳಿಗೆ ಮನೆ ನಡೆಸುವುದು ಕಷ್ಟ. ಗ್ಯಾರಂಟಿ ಯೋಜನೆಗಳಿಂದ ಕಷ್ಟಗಳೆಲ್ಲ ದೂರವಾಗಿದೆ. ಸಿದ್ದರಾಮಯ್ಯನವರು ಎಲ್ಲೇ ಇದ್ದರು ಸುಖವಾಗಿ ಇರಲಿ’ ಎಂದು ಬಸಮ್ಮ ಭಾವುಕರಾಗಿ ಮಾತನಾಡಿದರು.
ಶಕ್ತಿಯೋಜನೆ ಅಡಿಯಲ್ಲಿ ಹೆಣ್ಣು ಮಕ್ಕಳಿಗೆ ಉಚಿತವಾಗಿ ಬಸ್ಸ ಸೌಲಭ್ಯ ಮಾಡಿಕೊಟ್ಟಿದಕ್ಕೆ ಕಲಬುರಗಿಯಿಂದ ಧರ್ಮಸ್ಥಳದ ವರೆಗೆ ಒಟ್ಟು 21 ಜನ ಸೇರಿ ನಾವು ಗೃಹಲಕ್ಷ್ಮಿ ಹಣವನ್ನು ತೆಗೆದುಕೊಂಡು ಧರ್ಮಸ್ಥಳವನ್ನು ಕಣ್ಣಾರೆ ಕಂಡು ತುಂಬಾ ಖುಷಿ ಪಡೆದುಕೊಂಡಿದ್ದೇವೆ ಇದು ಇಲ್ಲಿಗೆ ನಿಲ್ಲಬಾರದು ಸರ್ಕಾರದ ಯೋಜನೆಗಳು ಸತತವಾಗಿ ಜಾರಿ ಇದ್ದರೆ ಬಡಕುಟುಂಬಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ವಿಜಯಲಕ್ಷ್ಮಿ ಸಂವಾದ ಕಾರ್ಯಕ್ರಮದಲ್ಲಿ ಹೇಳಿದರು.
ಯುವನಿಧಿ ಯೋಜನೆ ಅಡಿಯಲ್ಲಿ ಮೇಘರಾಜ್ ಅವರು ಬಿಎಂಟಿಸಿ ಅಪ್ಲೀಕೇಶನವನ್ನು ತುಂಬುವುದಕ್ಕೆ ಹಾಗೂ ವಿದ್ಯಾಭ್ಯಾಸಕ್ಕಾಗಿ ಹಾಗೂ ಕೋಚಿಂಗ್‍ಗಳನ್ನು ಪಡೆದು ಕೊಳ್ಳಲು ತುಂಬಾ ಅನುಕೂಲಕರವಾಗಿದೆ. ಆದರೆ ಇದರಿಂದ ಸಾಲದು ನಮಗೆ ಖಾಯಂ ಆಗಿ ಉದ್ಯೋಗವನ್ನು ಕೂಡಿಸಬೇಕು ನಿಮ್ಮ ಸರಕಾರದಿಂದಲ್ಲೇ ಆಗುತ್ತದೆ ನಿಮ್ಮಲ್ಲಿ ನನ್ನ ಮನವಿಯಾಗಿದೆ ಎಂದು ಖಾನ ಅವರಿಗೆ ಮನವಿ ಮಾಡಿಕೊಂಡರು.
ಆಳಂದ ತಾಲೂಕಿನ ದತ್ತಾತ್ರೇಯ ಅವರು ಶರಣಬಸವೇಶ್ವರ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಿದ್ದೇನೆ. ನನಗೆ ಮಾರ್ಚ್.ಏಪ್ರೀಲ್ ಮತ್ತು ಮೇ ತಿಂಗಳಲ್ಲಿ ಮಾತ್ರ ಹಣ ಬಂದಿದೆ. ಮೂರು ತಿಂಗಳಿಂದ ಹಣ ಬಂದಿಲ್ಲ ಎಂದು ಹೇಳಿದರು.
ಫಲಾನುಭವಿಗಳ ಮಾತು ಆಲಿಸಿದ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಮೆಹರೋಜ್ ಖಾನ್ ಮಾತನಾಡಿ, ಗ್ಯಾರಂಟಿ ಯೋಜನೆಗಳ ಮೂಲಕ ಸರ್ಕಾರ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಮಹಿಳೆಯರು ಸಬಲರಾದಾಗ ಕುಟುಂಬಕ್ಕೆ ಶಕ್ತಿ ಬರುತ್ತದೆ. ಯಾರಾದರೂ ಯೋಜನೆಯಿಂದ ಬಿಟ್ಟು ಹೋದರೆ ಅಂಥಹವರ ಹೆಸರು ನೋಂದಣಿ ಮಾಡಿಸಿ ಲಾಭ ದೊರಕಿಸಿಕೊಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಹೀಗೆ ಗೃಹ ಲಕ್ಷ್ಮಯೋಜನೆ, ಗೃಹಜ್ಯೋತಿ ಯೋಜನೆ, ಶಕ್ತಿ ಯೋಜನೆ, ಅನ್ನ ಯೋಜನೆಯಿಂದ ಸಿಕ್ಕಿರುವ ಯೋಜನೆಗಳ ಬಗ್ಗೆ ಫಲಾನುಭವಿಗಳಿಂದ ಮಾಹಿತಿ ಪಡೆದುಕೊಂಡರು.
ಸರ್ಕಾರದ ಐದು ಗ್ಯಾರೆಂಟಿ ಯೋಜನೆಯ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ ಮಾತನಾಡಿದ ಅವರು ನಾನು ಇಲ್ಲಿ ಹೊಸಬ್ಬಳಾಗಿ ಬಂದಿದ್ದೇನೆ ಇನ್ನೋ ಮುಂದೆ ಏನೆ ನಿಮ್ಮ ಸಮಸ್ಯೆಗಳ ಇದ್ದರೆ ನನ್ನ ಗಮನಕ್ಕೆ ತನ್ನಿ ನಾನು ನನ್ನ ಕೈ ಯಿಂದ ಆದಷ್ಟು ಪ್ರಯತ್ನ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗ್ಗೆಹರಿಸುತ್ತೇನೆ ಎಂದು ಆಶ್ವಾಸನೆಯನ್ನು ಕೊಟ್ಟರು.