ರಾಜ್ಯದ ಸಣ್ಣ ಕೈಗಾರಿಕೆ ಸಚಿವರ ಪ್ರವಾಸ
ಕಲಬುರಗಿ:ಸೆ.12:ರಾಜ್ಯದ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪೂರ ಅವರು ಇದೇ ಸೆಪ್ಟೆಂಬರ್ 13 ರಂದು ಕಲಬುರಗಿಯಿಂದ ರಸ್ತೆ ಮೂಲಕ ಯಾದಗಿರಿ ಜಿಲ್ಲೆಯ ಶಹಾಪೂರಕ್ಕೆ ಪ್ರಯಾಣಿಸಿ, ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಸಂಜೆ 6 ಗಂಟೆಗೆ ಮರಳಿ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಇದೇ ಸೆಪ್ಟೆಂಬರ್ 14 ರಂದು ಕಲಬುರಗಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಹಾಗೂ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಸೆಪ್ಟೆಂಬರ್ 15 ರಂದು ಯಾದಗಿರಿ ಮತ್ತು ಶಹಾಪೂರದಲ್ಲಿ ಹಾಗೂ 16 ರಂದು ಶಹಾಪೂರದಲ್ಲಿ ನಿಗದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮರಳಿ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಸೆಪ್ಟೆಂಬರ್ 17 ರಂದು ಯಾದಗಿರಿಯಲ್ಲಿ ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಧ್ಯಾಹ್ನ 3 ಗಂಟೆಗೆ ಮರಳಿ ಕಲಬುರಗಿಗೆ ಆಗಮಿಸುವರು. ನಂತರ ಸಂಜೆ 4 ಗಂಟೆಗೆ ಕಲಬುರಗಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸುವರು.