ಮನೆ ಬೀಗ ಮುರಿದು 1.30 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು
ಕಲಬುರಗಿ,ಸೆ.12-ಮನೆ ಬೀಗ ಮುರಿದು 1.30ಲಕ್ಷ ರೂ.ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣ ಕಳವು ಮಾಡಿರುವ ಘಟನೆ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಮಿಜಬಾ ನಗರದಲ್ಲಿ ನಡೆದಿದೆ.
ಹುಸೇನ್ ಮುಲ್ಲಾ ಎಂಬುವವರ ಮನೆ ಬೀಗ ಮುರಿದು 60 ಸಾವಿರ ರೂ.ಮೌಲ್ಯದ 15 ಗ್ರಾಂ.ಬಂಗಾರದ ಮಂಗಳಸೂತ್ರ, 20 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಕಿವಿಯೋಲೆ, 40 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ನೆಕ್ಲೆಸ್, 10 ಸಾವಿರ ರೂ.ಮೌಲ್ಯದ 240 ಗ್ರಾಂ.ಬೆಳ್ಳಿ ಕಾಲು ಜೈನಾ ಸೇರಿ 1.30 ಲಕ್ಷ ರೂ.ಮೌಲ್ಯದ 30 ಗ್ರಾಂ.ಬಂಗಾರದ, 240 ಗ್ರಾಂ.ಬೆಳ್ಳಿಯ ಆಭರಣ ದೋಚಿಕೊಂಡು ಹೋಗಲಾಗಿದೆ. ಈ ಸಂಬಂಧ ಹುಸೇನ್ ಮುಲ್ಲಾ ಅವರು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.
80 ಸಾವಿರ ನಗದು ಕಳವು
ಬಟ್ಟೆ ಅಂಗಡಿಯ ಕೌಂಟರ್ ಟೇಬಲ್ ಡ್ರಾದಲ್ಲಿ ಇಟ್ಟಿದ್ದ 80 ಸಾವಿರ ನಗದನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ಮೋಮಿನಪುರ ಬಡಾವಣೆಯಲ್ಲಿ ನಡೆದಿದೆ.
ಬಸವೇಶ್ವರ ನಗರದ ಮಹ್ಮದ್ ಅಸ್ಪಕ್ ಎಂಬುವವರ ಸೋಫಿ ಕಿಡ್ಸ್ ಕಲೆಶ್ಯನ್ ಹೆಸರಿನ ¨ಟ್ಟೆ ಅಂಗಡಿಯ ಕೌಂಟರ್ ಟೇಬಲ್ ಡ್ರಾದಲ್ಲಿ ಇಟ್ಟಿದ್ದ 80 ಸಾವಿರ ಹಣವನ್ನು ಕಳ್ಳರು ಕಳವು ಮಾಡಿದ್ದು, ಈ ಸಂಬಂಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.