ರಸ್ತೆ ವಿಭಜಕಕ್ಕೆ ಅಪ್ಪಳಿಸಿದ ಕಾರು
ಕಲಬುರಗಿ,ಸೆ 12: ರಸ್ತೆ ವಿಭಜಕಕ್ಕೆ ಕಾರು ಅಪ್ಪಳಿಸಿದ ಘಟನೆ ಇಲ್ಲಿನ ರಾಮ ಮಂದಿರ – ಹೈಕೋರ್ಟ್ ರಸ್ತೆಯ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದ ಎದುರು ಇಂದು ಬೆಳಗ್ಗೆ ನಡೆದಿದೆ.
ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಜಖಂಗೊಂಡಿದ್ದು, ಕಾರಿನ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಲಬುರಗಿ ನಗರ ಸಂಚಾರಿ ಠಾಣೆ-1 ಪೆÇಲೀಸರು ಘಟನಾ ಸ್ಥಳಕ್ಕೆ ಧಾವಿಸಿ, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.