ಚೆಸ್ ಸ್ಪರ್ಧೆಯಲ್ಲಿ ಎಸ್‍ಆರ್‍ಎನ್ ಮೆಹತಾ ಶಾಲೆವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆಆಯ್ಕೆ
ಕಲಬುರಗಿ,ಸೆ 12: ಸಾರ್ವಜಕನಿಕ ಶಿಕ್ಷಣ ಇಲಾಖೆಯು ಆಯೋಜಿಸಿದ ಜಿಲ್ಲಾ ಮಟ್ಟದಚೆಸ್ ಸ್ಪರ್ಧೆಯಲ್ಲಿಭಾಗವಹಿಸಿ ನಗರದಎಸ್. ಆರ್. ಎನ್. ಮೆಹತಾ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿ ರಾಜ್ಯಮಟ್ಟಕ್ಕೆಆಯ್ಕೆಯಾಗಿದ್ದಾರೆ.
14 ವರ್ಷದೊಳಗಿನ ಬಾಲಕಿಯರ ಸ್ಪರ್ಧೆಯಲ್ಲಿ ಅನುಶ್ರೀ ಕುಲಕರ್ಣಿ ಪ್ರಥಮ ಸ್ಥಾನ,ಅನನ್ಯಾ ಬಿರಾದರ ನಾಲ್ಕನೇ ಸ್ಥಾನ,14 ವರ್ಷದೊಳಗಿನ ಬಾಲಕರ ಸ್ಪರ್ಧೆಯಲ್ಲಿ ಪ್ರದೀಪ ಪಾಟೀಲಪ್ರಥಮ ಸ್ಥಾನ,ಅನೀಷ ಪಿ. ಮೋರೆ ದ್ವೀತಿಯ ಸ್ಥಾನ, ನಿಖಿಲ ರೆಡ್ಡಿ ನಾಲ್ಕನೇ ಸ್ಥಾನಪ್ರಜ್ವಲ್‍ಧನ್ನಾಐದನೇ ಸ್ಥಾನ,
17 ವರ್ಷದೊಳಗಿನ ಬಾಲಕಿಯರ ಸ್ಪರ್ಧೆಯಲ್ಲಿಪ್ರತೀಕ್ಷಾ ಪಿ. ಆರ್ ಪ್ರಥಮ ಸ್ಥಾನ,ಸೈಯ್ಯದಾರಿದಾತೃತಿಯ ಸ್ಥಾನ,17 ವರ್ಷದೊಳಗಿನ ಬಾಲಕರ ಸ್ಪರ್ಧೆಯಲ್ಲಿ ವೇದಾಂತ ಸದ್ದು ಪ್ರಥಮ ಸ್ಥಾನ, ಶ್ರೇಯಸ್ಸ ಸದ್ದು ದ್ವೀತಿಯ ಸ್ಥಾನ,ಸಾತ್ವಿಕ ಬಿ.ಕೆ.ತೃತಿಯ ಸ್ಥಾನ ಪಡೆದಿದ್ದಾರೆ. ಈ ವಿದ್ಯಾರ್ಥಿಗಳು ಹಾಸನದಲ್ಲಿ ನಡೆಯಲಿರುವರಾಜ್ಯ ಮಟ್ಟದಚೆಸ್‍ಕ್ರೀಡಾಕೂಟಕ್ಕೆಆಯ್ಕೆಯಾಗಿಜಿಲ್ಲೆಗೆ ಮತ್ತು ಶಾಲೆಗೆ ಕೀರ್ತಿತಂದಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯ ಟ್ರಸ್ಟಿ ಚಕೋರ ಮೆಹತಾ, ಪ್ರಾಚಾರ್ಯರಾದ ಪ್ರೀತಿ ಮೆಹತಾ, ದೈಹಿಕ ಶಿಕ್ಷಣದ ವಿಭಾಗ ಮುಖ್ಯಸ್ಥ ಬಸವರಾಜ ತಳಕೇರಿ, ಚೆಸ್‍ತರಬೇತಿದಾರ ಪ್ರಮೋದ ಮೋರೆ ಹಾಗೂ ಶಿಕ್ಷಕ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.