ರೈತ ಮತ್ತು ಸೈನಿಕ ಭಾರತ ದೇಶದ ಎರಡು ಕಣ್ಣು:ದೇ.ಹಿಪ್ಪರಗಿಶ್ರೀ
ತಾಳಿಕೋಟೆ:ಸೆ.12: ಶಿವಯೋಗಿಗಳು ಹಾಗೂ ಮಹಾತ್ಮರೆಲ್ಲರ ಪುಣ್ಯದ ಕಾರಣದಿಂದಲೇ ರೈತ ಮತ್ತು ಸೈನಿಕ ಭಾರತದೇಶದ ಎರಡು ಕಣ್ಣುಗಳಾಗಿ ಮಾರ್ಪಟ್ಟಿವೆ ಈ ಎರಡು ಕಣ್ಣುಗಳೇ ಈ ಇಡೀ ದೇಶವನ್ನು ಹಾಗೂ ನಮ್ಮೇಲರನ್ನು ರಕ್ಷೀಸಲು ಮುಂದಾಗಿವೆ ಈ ಇಬ್ಬರೂ ಇಲ್ಲದಿದ್ದರೆ ನಮ್ಮ ಸ್ಥಿತಿ ದೇವರೇಬಲ್ಲದ್ದಾಗುತ್ತಿತ್ತೆಂದು ದೇವರ ಹಿಪ್ಪರಗಿ ಜಡಿ ಮಠದ ಶ್ರೀ ಷ.ಬ್ರ.ಜಡಿಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.
ಮಂಗಳವಾರರಂದು ಸ್ಥಳೀಯ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯವರ ವತಿಯಿಂದ 25ನೇ ವರ್ಷ ಕಾರ್ಗಿಲ್ ವಿಜಯೋತ್ಸವದ ಸವಿ ನೆನಪಿಗಾಗಿ ಏರ್ಪಡಿಸಲಾದ ಹುತಾತ್ಮ ಯೋಧರ ಪಾಲಕರಿಗೆ ಹಾಗೂ ಮಾಜಿ ಸೈನಿಕರ ಸನ್ಮಾನ ಸಮಾರಂಭದ ದಿವ್ಯ ಸಾನಿದ್ಯ ವಹಿಸಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಶ್ರೀಗಳು 11 ವರ್ಷದಿಂದ ಗಜಾನನ ಉತ್ಸವದ ಕಾರ್ಯಕ್ರಮ ನಡೆಸುತ್ತಾ ಸಾಗಿಬಂದ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯ ಸೇವಾ ಕಾರ್ಯವನ್ನು ನೋಡಿದರೆ ಮೇರಾ ಹೈ ಎನ್ನಿರಿ ಯಾಕೆಂದರೆ ಜಬತ್‍ಕ್ ಜಿಂದಗಿ ರಹೇಗಿ ಪುರಸತ್ ನಹಿ ಮೀಲೇಗಿ ಕಾರಣ ನಮ್ಮ ದೇಶದಲ್ಲಿಯ ಸಂಸ್ಕಾರ ಸಂಸ್ಕøತಿಯನ್ನು ಅವಲಂಬಿಸಿ ನಡೆಯಿರಿ ಎಂದ ಶ್ರೀಗಳು ಗಣಪತಿ ಹಬ್ಬವನ್ನು ಹುಟ್ಟು ಹಾಕಿದ ಬಾಲ ಗಂಗಾಧರ ತಿಲಕ ಅವರ ಇತಿಹಾಸ ವಿವರಿಸಿ ಅವರಿಗೆ ತಾಯಿಯ ಪ್ರೇರಣೆ ಹೆಚ್ಚಾಗಿತ್ತೆಂಬುದನ್ನು ತಿಳಿಸಿದರಲ್ಲದೇ ನೀವು ಪ್ರತಿಷ್ಠಾಪಿಸಿದ ಗಣಪತಿ ಒಂದು ಕ್ಷಣ ಎಚ್ಚರದಿಂದ ನೋಡಿದರೆ ಮಹಾತ್ಮರಾಗಲು ಸಾದ್ಯವೆಂಬಂತೆ ಕಾಣುತ್ತದೆ ಅಲ್ಲದೇ ದುರ್ಗುಣಗಳು ನಾಶವಾಗಲಿವೆ ಎಂಬುದರಲ್ಲಿ ಯಾವ ಸಂಶಯವಿಲ್ಲಾವೆಂದ ಶ್ರೀಗಳು ಪಾಲಕರಾದವರು ಮಕ್ಕಳಿಗೆ ಪೇಸ್‍ಬುಕ್ ಪಾಸ್‍ಬುಕ್ ನೋಡಲು ಬಿಡದೇ ಮಹಾತ್ಮರ ಬುಕ್‍ಗಳನ್ನು ನೀಡಿ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಲು ಮುಂದಾಗಿರಿ ಎಂದರು.
ಇನ್ನೋರ್ವ ಸಾನಿದ್ಯ ವಹಿಸಿದ ವಿಜಯಪುರ ಜಿಲ್ಲಾ ಬರಣಾಪೂರ ತಾಲೂಕಿನ ಸಿದ್ದಾರೂಡ ಮಠದ ಯೋಗಿಶ್ವರಿ ಮಾತಾಜಿ ಮಾತನಾಡಿ ಹುತಾತ್ಮ ಯೋಧರ ಕುರಿತು ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಭಾರತ ದೇಶದಲ್ಲಿ ವೀರ ಸನ್ಯಾಸಿ, ರೈತಾಪಿ ಹಾಗೂ ವೀರಯೋಧರನ್ನು ಕೊಟ್ಟಂತಹದ್ದು ತಾಯಿಯ ಮಡಿಲಾಗಿದೆ ಅಂತಹ ಮಡಿಲಲ್ಲಿ ಜನ್ಮತಾಳಿದ ಎಲ್ಲರೂ ದೇಶ ಸೇವೆಗಾಗಿ ಒಬ್ಬ ಮಗನನ್ನಾದರೂ ಸೀಮಿತಗೊಳಿಸಿ ಸೈನ್ಯಕ್ಕೆ ಸೇರಿಸಿ ಎಂದ ಅವರು ಇಂದಿನ ದಿನಮಾನದಲ್ಲಿ ಮಕ್ಕಳ ಸಂತತಿ ಕ್ಷೀಣಾವಸ್ತೆಗೆ ತಲುಪಿದೆ ಸೈನ್ಯದಲ್ಲಿ ಸಐನಿಕರ ಸಂಖ್ಯೆ ಹೆಚ್ಚಾಗಬೇಕಾಗಿದೆ ಇದನ್ನು ಮಾತೆಯರು ಅರ್ಥೈಸಿಕೊಳ್ಳಬೇಕೆಂದ ಮಾತಾಜಿ ಅವರು ಹೆಣ್ಣು ಮಕ್ಕಳು ಮನೆಗೆ ಅಷ್ಟೇ ಸೀಮಿತವಲ್ಲಾ ಖಡ್ಗ ಹಿಡಿಯುವ ಶಕ್ತಿ ಮಹಿಳೆಯರಲ್ಲಿಯೂ ಬರಲಿ ಎಂದರಲ್ಲದೇ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರಂತಹ ಮತ್ತು ಭಗತ್‍ಸಿಂಗ್ ಅವರಂತಹ ಮಕ್ಕಳನ್ನು ನಿರ್ಮಾಣ ಮಾಡಿ ಎಂದು ದೇಶಾಭಿಮಾನದ ಮಾತನ್ನು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ನೇತ್ರ ತಜ್ಞ ಡಾ.ಪ್ರಭುಗೌಡ ಚಬನೂರ ಅವರು ಮಾತನಾಡಿ ನಾವು ದೇಶದಲ್ಲಿ ಸುರಕ್ಷೀತರಾಗಿರಬೇಕಾದರೆ ದೇಶದ ಗಡಿ ಕಾಯುವ ಸೈನಿಕರೇ ಕಾರಣೀಬೂತರಾಗಿದ್ದಾರೆ ಅಂತವರನ್ನು ನಮ್ಮ ಭಾಗದಲ್ಲಿ ಗುರುತಿಸಿ ಸನ್ಮಾನಿಸಿರುವದು ಅತೀವ ಮಹತ್ವದ್ದಾಗಿದೆ ಎಂದರು. ಸಮಾಜದ ಏಳಿಗೆಗೆ ದುಡಿಯಲು ಮುಂದಾದಾಗ ಮಾತ್ರ ಅದಕ್ಕೆ ಬೆಲೆ ಬರುತ್ತದೆ ಸನಾತನ ಧರ್ಮವಾದ ಹಿಂದೂ ಧರ್ಮವಾಗಿದೆ ಎಂದು ಪುರಾಣ ಪುಣ್ಯಕಥೆಗಳಲ್ಲಿ ಈ ಮಾತು ಹೊರಬರುತ್ತವೆ ಅಂತಹ ಸೇವಾ ಕಾರ್ಯ ಹಿಂದೂ ಮಹಾ ಗಣಪತಿ ಮಹಾ ಮಂಡಳಿ ಮಾಡುತ್ತಾ ಕಳೆದ 11 ವರ್ಷಗಳಿಂದ ಸಾಗಿದೆ ಎಂದ ಅವರು ರಕ್ತದಾನಕ್ಕೂ ತಾಳಿಕೋಟೆ ಪಟ್ಟಣ ಪ್ರಸಿದ್ದತೆ ಪಡೆದಿದೆ ನೀರಿನಿಂದ ಪ್ರತಿಹಳ್ಳಿಗಳು ಹಸಿರಾಗಿಸಬೇಕೆಂಬ ಆಸೆಯಿಂದ ನಾನೂ ನನ್ನ ವೃತ್ತಿ ಜೀವನಕ್ಕೆ ಒತ್ತು ಕೊಟ್ಟವರೂ ತಾಳಿಕೋಟೆಯವರೇ ಎಂದರೆ ತಪ್ಪಾಗಲಾರದು ನಾನು ವರ್ಷದಲ್ಲಿ 2 ಸಲವಾದರೂ ಕಣ್ಣಿನ ಉಚಿತ ಸೇವೆಗೆ ಸಿದ್ದನಿದ್ದೇನೆಂದು ಡಾ.ಪ್ರಭುಗೌಡ ಅವರು ಹೇಳಿದರು.
ಇನ್ನೋರ್ವ ಅತಿಥಿ ಸಾಹಿತಿ ದಿಕ್ಸೂಚಿ ಭಾಷಣ ಮಾಡಿ ಈ ಹಿಂದೆ ದೇಶದೊಂದಿಗೆ ನಡೆದ ಭಾರತ-ಪಾಕಿಸ್ಥಾನ ಯುದ್ದ ಕುರಿತು ಅದರಲ್ಲಿ ಭಾರತ ಜಯ ಸಾಧಿಸಿದ್ದರ ಕುರಿತು ಕಾರ್ಗಿಲ್ ಯೋಧರಿಗಾಗಿ ಬಾಲಕಿಯೋರ್ವಳು ದೇಶದ ಭಕ್ತಿಗೀತೆ ಹಾಡಿ ಸುಮಾರು 25 ಸಾವಿರ ರೂ. ನಿಧಿ ಸಂಗ್ರಹಿಸಿ ದೇಶಕ್ಕಾಗಿ ನೀಡಿದ್ದರ ಬಗ್ಗೆ ವಿವರಿಸಿದರಲ್ಲದೇ ಕರ್ನಲ್ ತಾವರ್ ತಾಯಿಗೆ ಪತ್ರ ಬರೆದು ಯುದ್ದದಲ್ಲಿ ಗೆದ್ದ ವಿಷಯಗಳನ್ನು ಪ್ರಸ್ಥಾಪಿಸಿದ ಹಂಚಲಿ ಅವರು ವಿಕ್ರಮ ಕಾದ್ರಿ, ಮನೋಜ್ ಪಾಂಡ್ಯಾ, ಪರಮವೀರ ಚಕ್ರ ಪಡೆಯಲು ಪ್ರಾಣವನ್ನೇ ಬಲಿಕೊಟ್ಟಿದ್ದರ ಕುರಿತು ಸಾವಿಗೆ ಅಂಜದೇ ಹೋರಾಟ ಮಾಡಿದ ಕರ್ನಲ್ ಸೈನಿಕ ಅವರು ಭಾರತ ಮಾತೆಯ ಮೇಲಿಟ್ಟ ಭಕ್ತಿ ಸೈನಿಕರ ತ್ಯಾಗ ಬಲಿದಾನದ ಬಗ್ಗೆ ತಿಳಿಸಿದ ಅವರು ಯೋಗೀಂದ್ರಸಿಂಗ್ ಯಾಧವ, ಅಬ್ದುಲ್ ಅಮೀದ್ ಅನ್ನುವಂತಹ ಯೋಧ ಏಕಾಂಗಿಯಾಗಿ ಯುದ್ದದಲ್ಲಿ 8 ಟ್ಯಾಂಕರ್‍ಗಳನ್ನು ನಾಶ ಪಡಿಸಿ ದೇಶಕ್ಕೆ ವಿಜಯದ ಮಾಲೆ ತಂದುಕೊಟ್ಟಂತಹ ಇಂತಹ ವೀರಯೋಧರಿಂದ ನಮ್ಮ ದೇಶದ ರಕ್ಷಣೆಯಾಗಿದೆ ಎಂದು ಎಳೆ ಎಳೆಯಾಗಿ ಹಂಚಲಿ ಅವರು ದೇಶದ ಇತಿಹಾಸ ಬಿಚ್ಚಿಟ್ಟರು.
ಇನ್ನೋರ್ವ ಅಧ್ಯಕ್ಷತೆ ವಹಿಸಿದ ಕರ್ನಲ್ ರಾಜಶೇಕರ ಮಹೇಂದ್ರಕರ ಅವರು ಮಾತನಾಡಿ ಇಂದು ಸೈನಿಕರಿಗಾಗಿ ಗಣೇಶ ಉತ್ಸವದಲ್ಲಿ ಸನ್ಮಾನಿಸಿರುವದು ಖುಷಿ ತಂದಿದೆ ಯೋಧ ಎಂಬವ ಗಡಿ ರಕ್ಷಣೆಯಲ್ಲಿ ಮಳೆ ಬಿಸಿಲೆನ್ನದೇ ತಂಡಿ ತಡೆಗಳನ್ನು ಲೆಕ್ಕಿಸದೇ ಜೀವದ ಹಂಗು ತೋರೆದು ದೇಶ ಸೇವೆಗೆ ಮುಂದಾಗುತ್ತಾನೆ ಇಂತಹ ದೇಶ ಭಕ್ತಿ ಪ್ರತಿಯೊಬ್ಬರಲ್ಲಿ ಬರಬೇಕೆಂದರು. ವಿವಿಧತೆಯಲ್ಲಿ ಏಕತೆ ಎಂಬುದಿದೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತೀಯ ಆಚಾರ ವಿಚಾರ ಬೇರೆ ಬೇರೆಯಾಗಿದ್ದರೂ ನಾವೇಲ್ಲರೂ ಭಾರತೀಯರಾಗಿದ್ದೇವೆ ಪ್ರಜಾ ಪ್ರಭುತ್ವ ಎಂಬುದು ಇದು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ಇದು ಗಟ್ಟಿತನವಾಗಬೇಕಾಗಿದೆ ದೇಶವನ್ನು ಮುಂದುವರೆಸುವ ಭಾವನೆ ನಮ್ಮೇಲ್ಲರಲ್ಲಿ ಬರಬೇಕೆಂದ ಅವರು ಯಾವುದೇ ಮಾಡುವ ಕೆಲಸ ಒಳ್ಳೆಯದಾಗಿರಬೇಕು ಅದರಲ್ಲಿ ನಿಷ್ಠೇ, ಪ್ರಾಮಾಣಿಕತನವೆಂಬುದಿರಬೇಕು ಆಚಾರ, ವಿಚಾರದೊಂದಿಗೆ ಜ್ಞಾನದ ಅರಿವಿನಿಂದ ಸಾಗಬೇಕು ಶಿಕ್ಷಣ ಅಂದರೆ ಕೇವಲ ಡಿಗ್ರಿ ಮಾತ್ರವಲ್ಲಾವೆಂದು ಹೇಳಿದ ಅವರು ಹೆಣ್ಣು ಮಕ್ಕಳಿಗೂ ಒಳ್ಳೆಯ ಕಾರ್ಯದಲ್ಲಿ ಎಲ್ಲದರಲ್ಲಿಯೂ ಸಮಾನ ಅವಕಾಶ ಕೊಡುವ ಕಾರ್ಯವಾಗಬೇಕೆಂದು ಬಹು ಮಾರ್ಮಿಕವಾಗಿ ಮಾತನಾಡಿದರು.
ಇದೇ ಸಮಯದಲ್ಲಿ ಕಾರ್ಗಿಲ್ ಯುದ್ದದಲ್ಲಿ ಯೋಧ ಬಸವಂತ್ರಾಯ ಲಿಂಗದಳ್ಳಿ, ದವಲಸಾಬ ಕಂಬಾರ, ರಣಜಿತ್‍ಸಿಂಗ್ ಹಜೇರಿ ಅವರ ಪಾಲಕರಿಗೆ ಹಾಗೂ ಮಾಜಿ ಸೈನಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಮಯದಲ್ಲಿ ಅತಿಥಿಗಳಿಗೆ ಅಧ್ಯಕ್ಷರಿಗೆ, ಶ್ರೀಗಳಿಗೆ, ಮಾತಾಜಿ ಅವರಿಗೆ ಹಾಗೂ ಗಣ್ಯಮಾನ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಹಿಂದೂ ಮಹಾಗಣಪತಿಯ ಸಂಚಾಲಕ ರಾಘವೇಂದ್ರ ವಿಜಾಪೂರ ಪ್ರಾಸ್ಥಾವಿಕ ಮಾತನಾಡಿದರು.
ವೇದಿಕೆಯ ಮೇಲೆ ಹಿಂದೂ ಮಹಾಗಣಪತಿ ಮಹಾ ಮಂಡಳಿಯ ಗೌರವ ಕಾರ್ಯದರ್ಶ ವೇ.ಸಂತೋಷಬಟ್ ಜೋಶಿ, ರುದ್ರಗೌಡ ಲಿಂಗದಳ್ಳಿ, ನಬಿ ಕಂಬಾರ, ಬಾಲಾಜಿಸಿಂಗ್ ಹಜೇರಿ, ಅವರು ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ಬಸವರಾಜ ಗೂರುಜಿ ಸ್ವಾಗತಿಸಿದರು. ಶಿಕ್ಷಕ ಸಾಹೇಬಗೌಡ ಬಿರಾದಾರ ನಿರೂಪಿಸಿದರು. ಕು.ತೇಜಸ್ವೀನಿ ಡಿಸಲೆ ವಂದಿಸಿದರು.