ಬಬಲೇಶ್ವರ ಕ್ಷೇತ್ರದ ಶಾಲೆಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು: ಎಂಎಲ್‍ಸಿ ಸುನೀಲಗೌಡ
ವಿಜಯಪುರ,ಸೆ.12: ಬಬಲೇಶ್ವರ ಮತಕ್ಷೇತ್ರದಲ್ಲಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದರಜೊತೆಗೆಅಭಿವೃದ್ಧಿ ಕಾಮಗಾರಿಗಳಿಗೂ ಆದ್ಯತೆ ನೀಡಲಾಗಿದೆಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.
ಬುಧವಾರ ಬರಟಗಿಎಲ್. ಟಿ- 1 ಮತ್ತು 3 ರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ತಲಾರೂ. 100 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಿಸಿ ರಸ್ತೆ ಕಾಮಗಾರಿಗಳಿಗೆ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೈಗಾರಿಕೆ, ಮೂಲಸೌಲಭ್ಯಅಭಿವೃದ್ಧಿ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು, ಸಿ.ಎಸ್.ಆರ್ ಅನುದಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಶಾಲೆಗಳ ಅಭಿವೃದ್ಧಿಗೆ ಬಳಸಲು ಕ್ರಮಕೈಗೊಂಡಿದ್ದಾರೆ. ಇದರಿಂದಗ್ರಾಮೀಣ ಭಾಗದ ಬಡಜನರ ಮಕ್ಕಳಿಗೆ ಸ್ಮಾರ್ಟ್‍ಕ್ಲಾಸ್ ಸೇರಿದಂತೆಕಾನ್ವೆಂಟ್ ಶಾಲೆಗಳ ಮಾದರಿಯಲ್ಲಿಗುಣಮಟ್ಟದ ಶಿಕ್ಷಣಕ್ಕೆ ಆಗತ್ಯವಾಗಿರುವ ಪರಿಕರಗಳನ್ನು ಒದಗಿಸಲಾಗುತ್ತಿದೆ. ಅಲ್ಲದೇ, ಮತಕ್ಷೇತ್ರದಲ್ಲಿ ರಸ್ತೆಗಳ ನಿರ್ಮಾಣ, ದುರಸ್ಥಿ ಸೇರಿದಂತೆ ಸಮಗ್ರಅಭಿವೃದ್ಧಿಗೆಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನುಳಿದಿರುವ ಬಾಕಿ ಕಾಮಗಾರಿಗಳಿಗೂ ಅತೀ ಶೀಘ್ರದಲ್ಲಿ ಚಾಲನೆ ಸಿಗಲಿದೆ. ಅಭಿವೃದ್ಧಿ ಕೆಲಸಗಳಿಗೆ ಗ್ರಾಮಸ್ಥರೂ ಕೂಡ ಸಂಪೂರ್ಣ ಸಹಕಾರ ನೀಡುವ ಮೂಲಕ ಸಹಕರಿಸಬೇಕು ಎಂದು ಅವರು ಹೇಳಿದರು.
ಜಲಸಂಪನ್ಮೂಲ ಸಚಿವರಾಗಿದ್ದಾಗ ಎಂ. ಬಿ. ಪಾಟೀಲ ಅವರುಕೈಗೊಂಡಿದ್ದ ನೀರಾವರಿಯೋಜನೆಯಿಂದಾಗಿ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯಲು ಕಷ್ಟ ಪಡುತ್ತಿದ್ದರೈತರುಇಂದು ನೀರಾವರಿ ಬೆಳೆಯಾದ ಕಬ್ಬು ಬೆಳೆಯುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಯಾಗುತ್ತಿದ್ದಾರೆಎಂದುಅವರು ಹೇಳಿದರು.
ಈ ಸಂದರ್ಭದಲ್ಲಿತಿಕೋಟಾ ಬ್ಲಾಕ್‍ಕಾಂಗ್ರೆಸ್‍ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಬಿ. ಜಿ. ಪಾಟೀಲ, ರಾಮುರಾಠೋಡ, ಸದಾಶಿವ ಪೂಜಾರಿ, ಚನ್ನಪ್ಪ ವಾರದ, ರಾಜುರಾಠೋಡ, ಎಸ್. ಆರ್. ನಾಯಕ, ಕಿರಣ ನಾಯಕ, ಶ್ರೀಧರ ಹೆಗಡೆ, ಗೋವಿಂದ ಶಿಂಧೆ, ನಟರಾಜ ಪತ್ತಾರ, ಹುನ್ನು ಬಾಬು ನಾಯಕ, ಕವಿತಾ ಸುಭಾಷರಜಪೂತ, ಸುಭಾಷ ರಜಪೂತ, ಸತೀಶ ನಾಯಕ, ಧನರಾಜ ಪತ್ತಾರ, ಆರ್. ಬಿ. ನಾಯಕ, ಮೋತಿಲಾಲ ನಾಯಕ, ಸತೀಶ ನಾಯಕ, ಅಶೋಕ ನಾಯಕ ಮುಂತಾದವರು ಉಪಸ್ಥಿತರಿದ್ದರು.