ಬಳ್ಳಾರಿ ಜೈಲಿನಲ್ಲಿ  ಮತ್ತೆದರ್ಶನ ಭೇಟಿ ಮಾಡಿದ ಪತ್ನಿ ಸಹೋದರ ವಕೀಲರು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.12: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ  ಇಲ್ಲಿನ ಜೈಲಿನಲ್ಲಿ ಬಂಧಿಯಾಗಿರುವ ನಟ ದರ್ಶನ್ ನನ್ನು ಇಂದು ಅವರ  ವಕೀಲ  ಸುನೀಲ್.  ಪತ್ನಿ ವಿಜಯಲಕ್ಷ್ಮಿ ಸಹೋದರ
ದಿನಕರ್ ತೂಗದೀಪ  ಇಂದು  ಭೇಟಿ ಮಾಡಿದರು.
ಅವರು ಜೈಲಿಗೆ  ಒಂದು ಬ್ಯಾಗ್ ತಂದಿದ್ದು ಅದರಲ್ಲಿ ಡ್ರೈ ಪ್ರೊಟ್ಸ್, ಬಿಸ್ಕಟ್, ದೇವರ ಪ್ರಸಾದ್ ತಂದಿದ್ದಾರಂತೆ.
ಮಧ್ಯಾಹ್ನ 12.25 ಕ್ಕೆ ಆಗಮಿಸಿ ಆರ್ಧ ತಾಸು ಕಾಲ‌ ದರ್ಶನ್ ಅವರನ್ನು ಸಂದರ್ಶನ ಕೊಠಡಿಯಲ್ಲಿ ಭೇಟಿ ಮಾಡಿದರು.
ಅವರೊಂದಿಗೆ ಬಮನದಿದ್ದ ವಕೀಲರು  ನ್ಯಾಯಾಲಯಕ್ಕೆ ಜಾಮೀನು ಸಲ್ಲಿಸಲು ಅಗತ್ಯವಾದ ದಾಖಲೆಗಳೊಂದಿಗೆ  ಆಗಮಿಸಿ ಪ್ರಕರಣದ ಮುಂದಿನ ವಿಚಾರಣೆಗೆ ಸಂಬಂಧಿಸಿದಂತೆ ದರ್ಶನ್ ಜೊತೆ ಚರ್ದೆ ಮಾಡಿದರಂತೆ.