ಬೇಡಿಕೆಗಳ ಈಡೇರಿಕೆಗೆ ಮಸಣ ಕಾರ್ಮಿಕರ ಆಗ್ರಹ
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.12: ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ಬಳ್ಳಾರಿ ತಾಲೂಕು, ಜಿಲ್ಲೆ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ರವಾನಿಸಿದ್ದಾರೆ.
ಇದೀಗ ನಾವು ಸಂಘಟಿತರಾಗಿ ಕಳೆದ ಹತ್ತು ವರ್ಷಗಳಿಂದ ಸಮಾಜದ ಹಾಗೂ ಸರ್ಕಾರದ ಗಮನ ಸೆಳೆಯುತ್ತಾ ಬಂದ ಪರಿಣಾಮಗಳಿಂದ ನಮಗೆ ಕೆಲವು ಸೌಲಭ್ಯಗಳು ತಾವುಗಳು ಹಾಗೂ ಸರ್ಕಾರಗಳು ಘೋಷಿಸಿದ್ದೀರಿ ನಮ್ಮ ಮಕ್ಕಳ ಶಿಕ್ಷಣಕ್ಕೆ ವಿಶೇಷ ಪ್ರವರ್ಗದಡಿ ಇತರರ ಜೊತೆ ಶೇ 10 ಮೀಸಲಾತಿ ಹಾಗೂ ಇತರೆ ಆರ್ಥಿಕ ಸೌಲಭ್ಯಗಳನ್ನು ಘೋಷಿಸಿದ್ದೀರಿ ತಮಗೆ ಅಭಿನಂದನೆಗಳು
ಆದರೆ ನಾವು ಮಸಣ ಕಾರ್ಮಿಕರೆಂದು ಸರ್ಕಾರದಿಂದ ಅಧಿಕೃತವಾಗಿ ಗುರುತಿಸಲ್ಪಡದೆ ಸೌಲಭ್ಯ ಪಡೆಯುವುದು ಕಷ್ಟವಾಗಿದೆ. ಅದರಿಂದ ನಮ್ಮಗಳ ಗಣತಿ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಪೆನ್ಷನ್ ಹಾಗೂ  ಕುಣಿ ಅಗೆಯುವ ಕೆಲಸ ಉದ್ಯೋಗ ಖಾತ್ರಿ ಕೆಲಸವನ್ನಾಗಿಸುವುದು ಮತ್ತು ನಮಗೆ ಅಗತ್ಯ ಪರಿಕಗಳು ಹಾಗೂ ಸುರಕ್ಷ ಕ್ರಮ ವಹಿಸುವುದಕ್ಕೆ ಸರ್ಕಾರ ಕ್ರಮವಹಿಸುವಂತೆ ವಿನಂತಿಸಿಕೊಂಡಿದ್ದಾರೆ.
ಮನವಿಪತ್ರ ರವಾನಿಸಿದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ಬಳ್ಳಾರಿ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ  ಜಿಲ್ಲಾ ಘಟಕದ ಅಧ್ಯಕ್ಷರಾದ ಹೆಚ್.ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಮತ್ತಿತರರು ಇದ್ದರು.