ಗಜಾನನ ಮಹಾ ಮಂಡಳಿಯಲ್ಲಿ ಗಂಗಾರತಿ
ವಿಜಯಪುರ:ಸೆ.12: ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿರುವ ಗಜಾನನ ಮಹಾ ಮಂಡಳಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಗಂಗಾ ಆರತಿ ನಡೆಯಿತು. ಆರತಿಯನ್ನು ವಾರಣಾಸಿಯಿಂದ ಆಗಮಿಸಿದ್ದ ಐದು ಜನ ಅರ್ಚಕರಿಂದ ಗಣೇಶನಿಗೆ ಒಂದು ಗಂಟೆಗಳ ಕಾಲ ಗಂಗಾ ಆರತಿ ಮಾಡಲಾಯಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪರಮಪೂಜ್ಯ ಅಭಿನವ ಶ್ರೀ ಅವಧೂತ ಸಿದ್ಧ ಮಹಾರಾಜರು ಅರಕೇರಿಗುಡ್ಡ ಹಾಗೂ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಸಾವಿರಾರು ಭಕ್ತರು ಉಪಸ್ಥಿತರಿದ್ದರು. ಗಂಗಾ ಆರತಿ ಬಳಿಕ ಭಕ್ತರಿಗೆ ಪ್ರಸಾದ ವಿತರಣೆ. ಮಾಡಲಾಯಿತು. ಸುಮಾರು 1 ಗಂಟೆಗಳ ಕಾಲ ಗಣೇಶನಿಗೆ ಗಂಗಾ ಆರತಿ ಮೂಲಕ ಪೂಜೆ ಸಲ್ಲಿಸಲಾಯಿತು.