ಚಿಂತನ ಮಂಥನ ಕಾರ್ಯಕ್ರಮ
ಧಾರವಾಡ, ಸೆ12: ಪ್ರಕೃತಿಯಲ್ಲಿ ಮಳೆ ಎಲ್ಲಿಯೂ ವ್ಯತ್ಯಾಸವಾಗಿಲ್ಲ, ನಾವು ಉಪಯೋಗಿಸುವ ಪ್ರಮಾಣದಲ್ಲಿ ವ್ಯತ್ಯಾಸವಾಗಿದೆ. ಬೆಟ್ಟ ಗುಡ್ಡಗಳ ಪರಿಸ್ಥಿತಿ ನೀರಿನ ಹರಿವಿನಿಂದ ತಿಳಿಯುತ್ತದೆ ಎಂದು ಬೆಂಗಳೂರಿನ ಶ್ರೀಮತಿ ನಿರ್ಮಲಾಗೌಡ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಪಶ್ಚಿಮ ಘಟ್ಟ ಉಳಿಸಿ ಅಭಿಯಾನ, ಶಿವಮೊಗ್ಗ, ಪರಿಸರಕ್ಕಾಗಿ ನಾವು ಧಾರವಾಡಜಿಲ್ಲೆ ಸಂಯುಕ್ತಆಶ್ರಯದಲ್ಲಿ ಆಯೋಜಿಸಿದ್ದ ಸಹ್ಯಾದ್ರಿ-2024' ಚಿಪ್ಕೋ-50, ಅಪ್ಪಿಕೋ-40 ಒಂದು ಮೆಲುಕು ಹಾಗೂ ಅರಣ್ಯಗಳು ಮತ್ತು ಸುಸ್ಥಿತ ಅಭಿವೃದ್ಧಿ, ಎರಡು ದಿನಗಳ ಚಿಂತನ-ಮಂಥನಕಾರ್ಯಕ್ರಮದಲ್ಲಿಮೊದಲ ದಿನದ ಮೊದಲನೇ ಗೋಷ್ಠಿಯಲ್ಲಿನದಿ ಮತ್ತು ನೀರು’ ವಿಷಯಕುರಿತು ಮಾತನಾಡುತ್ತಿದ್ದರು.
ನಮ್ಮ ನದಿಗಳಲ್ಲಿ ಎಷ್ಟು ನೀರಿದೆ? ಅದನ್ನು ತಿಳಿಯಲು ಏನು ಮಾಡಬೇಕು?ಎಂಬುದರ ಮಾಹಿತಿ ನಮಗಿರಬೇಕು, ಈ ಕುರಿತು ಸರಕಾರಗಳು ಬಿಡುಗಡೆ ಮಾಡುವ ಅಧಿಸೂಚನೆಗಳ ಬಗ್ಗೆ ನಮಗೆ ಜ್ಞಾನವಿರಬೇಕು.ಅದನ್ನು ನಾವು ಕುಲಂಕುಶ ಅಧ್ಯಯನ ಮಾಡಬೇಕು.ಸರಕಾರವುಎಲ್ಲ ಅಂಕಿ ಅಂಶಗಳನ್ನು ಸಾರ್ವಜನಿಕವಾಗಿ ಸಿಗುವ ಹಾಗೆ ಕಲ್ಪಿಸಿಕೊಡಬೇಕು.ಇಲ್ಲದಿದ್ದಲ್ಲಿ ನಾವು ಸರಕಾರವನ್ನು ಪ್ರಶ್ನಿಸಬೇಕು.ಬೆಂಗಳೂರಿನ ಜನರಿಗೆ ಬೇರೆಎಲ್ಲಿಯೂ ನೀರುಇಲ್ಲದಿರುವುದರಿಂದ ಪಶ್ಚಿಮ ಘಟ್ಟದಲ್ಲಿ ಹರಿಯುವ ನದಿಗಳ ನೀರಿನಅವಶ್ಯಕವಿದೆ.
ನಾವು ನೀರಿಗಾಗಿ ತಮಿಳುನಾಡಿನ ವಿರುದ್ಧ ಹೋರಾಡುತ್ತಿದ್ದೇವೆ. ಆದರೆ ಹೇಮಾವತಿಗೋಸ್ಕರ ಹೋರಾಡುತ್ತಿಲ್ಲ. ನಮಗೆ ಜಲಾಶಯತುಂಬಿದೆಎನ್ನುವುದು ಬೇಕಾಗಿಲ್ಲ. ಜಲಾಶಯಕ್ಕೆ ಎಷ್ಟು ನೀರು ಬರುತ್ತಿದೆಎನ್ನುವುದು ಬೇಕಾಗಿದೆಎಂದಅವರು ಸಂವಾದದೊಂದಿಗೆ ಅನೇಕ ವಿಷಯಗಳನ್ನು ತಿಳಿಸಿಕೊಟ್ಟರು.
ಡಾ. ಜಿನದತ್ತ ಹಡಗಲಿ ಸ್ವಾಗತಿಸಿ, ಪರಿಚಯಿಸಿದರು
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಂಕರ ಕುಂಬಿ, ಡಾ. ಸಂಜೀವಕುಲಕರ್ಣಿ, ಡಾ.ಶಿವಾನಂದ ಶೆಟ್ಟರ, ಶಾರದಾ ಗೋಪಾಲ, ಕವಿತಾ ಎಲೆದಳ್ಳಿ, ಸರಸ್ವತಿ ಪೂಜಾರ, ಬಿ.ಎಂ.ಕುಮಾರಸ್ವಾಮಿ, ಬಾಲಚಂದ್ರ ಹೆಗಡೆ, ಡಾ.ಪ್ರಕಾಶ ಭಟ್, ಮನೋಜಕುಮಾರ, ನಿರ್ಮಲಾಗೌಡ, ಅಖಿಲೇಶ ಚಿಪ್ಪಳಿ, ಮಮತಾರಾಣಿ, ರತ್ನಾ, ಜಬಿವುಲ್ಲಾ, ಲಿನೆಟ್ ಡಿಸಿಲ್ವಾ ಸೇರಿದಂತೆ ಅನೇಕ ಪರಿಸರಕಾರ್ಯಕರ್ತರು ಭಾಗವಹಿಸಿದ್ದರು.