ಎಂಎಲ್ಸಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಬೃಹತ್ ಪ್ರತಿಭಟನೆ
ಹುಮನಾಬಾದ್ :ಸೆ.12:ಶಾಸಕ ವಿರುದ್ಧ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ನೀಡಿರುವ ಹೇಳಿಕೆ ಖಂಡಿಸಿ, ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಎಂಎಲ್ಸಿ ಡಾ. ಚಂದ್ರೇಖರ ಪಾಟೀಲ ಅವರು ಶಾಸಕರ ನಾಲಿಗೆ ಕತ್ತರಿಸುವ ಹೇಳಿಕೆ ಖಂಡಿಸಿ ಹಾಗೂ ಶಾಸಕರು ಪೆÇಲೀಸ್ ಠಾಣೆಗೆ ದೂರು ನೀಡಿದರೂ ಪ್ರಕರಣ ದಾಖಲಿಸದ ಪೆÇಲೀಸ್ ಅಧಿಕಾರಿಗಳ ನಡೆ ಖಂಡಿಸಿ ಬುಧವಾರ ಪಟ್ಟಣದಲ್ಲಿ ತಾಲೂಕು ಬಿಜೆಪಿ ಘಟಕದಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು, ಪೌರಾಡಳಿತ ಸಚಿವರು ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದ ಸಂದರ್ಭದಲ್ಲಿ ನಾಲಿಗೆ ಕತ್ತರಿಸುವ ಮಾತು ಹೇಳಿದ್ದು, ಖುದ್ದು ಪೆÇಲೀಸ್ ಅಧಿಕಾರಿಗಳು ಸ್ವಯಂ ಪ್ರೇರಿತ ದೂರು ದಾಖಲಿಸಬೇಕಿತ್ತು.
ಆದರೂ,ಶಾಸಕರು ಪೆÇಲೀಸ್ ಠಾಣೆಗೆ ತೆರಳಿ ದೂರು ನೀಡಿದರು ಕೂಡ ಇಂದಿಗೂ ಪ್ರಕರಣ ದಾಖಲಿಸದ ಕಾರಣ ಪ್ರತಿಭಟನೆ ನಡೆಸುವ ಸಂದರ್ಭ ಬಂದಿದೆ. ಇದೀಗ ಕೂಡ ಪೆÇಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡು ಪ್ರಕರಣ ದಾಖಲಿಸದಿದ್ದರೆ ಬೀದರ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಸೆ.14ರಂದು ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಅಲ್ಲದೆ, ನಾಲಿಗೆ ಕಟ್ ಕುರಿತು ಎಲ್ಲಾ ಕಡೆಗಳಲ್ಲಿ ಪೆÇೀಸ್ಟರ್ ಅಭಿಯಾನ ನಡೆಸಲಾಗುವುದು ಎಚ್ಚರಿಸಿದರು. ಎಂದು
ಡಾ.ಚಂದ್ರಶೇಖರ ಪಾಟೀಲ್ ಅವರ ಬೆದ ರಿಕೆ ಹೇಳಿಕೆ ನೀಡಿದ್ದ ವೇಳೆ ಕಾರ್ಯಕ್ರಮದ ಸ್ಥಳದಲ್ಲಿ ಪೆÇಲೀಸ್ ಅಧಿಕಾರಿಗಳು ಉಪಸ್ಥಿತ ರಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸದೇ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಸೆ.8 ರಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಸ್ವತಃ ಪೆÇಲೀಸ್ ಠಾಣೆಗೆ ಆಗಮಿಸಿ ಲಿಖಿತ ದೂರು ನೀಡಿದರು. ಶೀಘ್ರ ಎಫ್‍ಐಆರ್ ದಾಖಲಿಸಲು ಕೋರಿದಾಗ ಇಲಾಖೆಯ ಹಿರಿಯ ಅಧಿಕಾರಿ ನಿಮ್ಮ ದೂರಿನ ಅನ್ವಯ 3 ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಒಳಪಡುವ ಪ್ರಕರಣ ಇದಾಗಿದ್ದು, ಇದಕ್ಕೆ ನ್ಯಾಯಾಧೀಶರ ಪೂರ್ವಾನುಮತಿ ಪಡೆದು ಪ್ರಕರಣ ದಾಖಲಿಸಿ ನಿಮಗೆ ಪ್ರತಿ ಕೊಡುತ್ತೇವೆ ಎಂದು ಹೇಳಿ ಸ್ವೀಕೃತಿ ಪತ್ರ ನೀಡಿ ಕಳುಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಒತ್ತಡದಲ್ಲಿ ಈವರೆಗೆ ಪ್ರಕರಣ ದಾಖಲು ಮಾಡಲು ಪೆÇಲೀಸ್ ಇಲಾಖೆ ಹಿಂದೇಟುಹಾಕುತ್ತಿದೆ.ಪ್ರಕರಣದಾಖಲಿಸಲು ಸಂಬಂಧಪಟ್ಟವರಿಗೆ ಆದೇಶಿಸಬೇಕು ಎಂದು ಮನವಿ ಪತ್ರ ಸಲ್ಲಿಸಿ ಪೆÇಲೀಸ್ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ನಿಕಟಪೂರ್ವ ಜಿಲ್ಲಾ ಧ್ಯಕ್ಷ ಶಿವಾನಂದ ಮಂಠಾಳಕರ, ಮಂಡಲ ಅಧ್ಯಕ್ಷ ಅನೀಲ್ ಪಸರ್ಗಿ, ನಿಕಟಪೂರ್ವ ಮಂಡಲ ಅಧ್ಯಕ್ಷ ಪ್ರಭಾಕರನಾಗರಾಳೆ, ಪಕ್ಷದ ಮುಖಂಡಈಶ್ವರಸಿಂಗಠಾಕೂರ್, ಬಸವರಾಜ ಆರ್ಯ, ಪ್ರಭಾಕರ ನಾಗರಾಳೆ, ಅಭಿಮನ್ಯು ನಿರಗೂಡೆ, ಗಿರೀಷ ತುಂಬಾ, ಭದ್ರೇಶ ಪಾಟೀಲ್, ರಮೇಶ ಕಲ್ಲೂರ, ಗೋಪಾಲಕೃಷ್ಣ ಮೊಹಳೆ, ನಾಗಭೂಷಣ ಸಂಗಮ, ಮಲ್ಲಿಕಾ ರ್ಜುನ ಪಾಟೀಲ್, ಅರುಣ ಬಾವಗಿ, ಸಂತೋ ಷ ಪಾಟೀಲ್, ಮಲ್ಲಿಕಾರ್ಜುನ ಸೀಗಿ, ಮಧು ಕರ, ಸಾಯಿನಾಥ ಹಡಗೆ, ಡಿ.ಎನ್ ಪತ್ರಿ, ಮಲ್ಲಿಕಾರ್ಜುನ ಕುಂಬಾರ , ರವಿ ಹೊಸಳ್ಳಿ, ಸೇರಿದಂತೆ ಅನೇಕರು ಇದ್ದರು.