ವಿಘೇಶ್ವರನ ಆರಾಧನೆಯಿಂದ ಮನಸಿಗೆ ನೆಮ್ಮದಿ
ಚಿತ್ತಾಪೂರ:ಸೆ.12:ಸರ್ವ ದೇವರಲ್ಲಿಯೇ ಅತೀ ಪೂಜ್ಯನೀಯವಾಗಿರುವ ವಿಘ್ನೇಶ್ವರನ ಸ್ಥಾಪನೆ ಮತ್ತು ಆರಾಧನೆಯಿಂದ ಮನಸ್ಸಿಗೆ ಶಾಂತಿ, ಸಮಾಧಾನ, ನೆಮ್ಮದಿ ಲಭಿಸಲಿದೆ ಎಂದು ಪುರಸಭೆ ವಿರೋಧ ಪಕ್ಷದ ನಾಯಕ ನಾಗರಾಜ ಬಂಕಲಗಾ ಹೇಳಿದರು.
ಪಟ್ಟಣದ ವಾರ್ಡ ನಂ 3 ರಲ್ಲಿಯ ಸಂತೊಷನಗರದಲ್ಲಿ ಮಹಿಳಾ ಮಂಡಲದ ವತಿಯಿಂದ ಪ್ರತಿಷ್ಟಾಪಿಸಲಾಗಿರುವ ಗಣೇಶ ಮೂರ್ತಿಯ ಬಳಿ ಹಮ್ಮಿಕೊಂಡಿದ್ದ ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ತಾಲೂಕಿನಲ್ಲಿ ಸರ್ವ ಧರ್ಮಿಯರು ಕೂಡಿ ಪ್ರತಿ ವರ್ಷ ಅತೀ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಆಚರಿಸುವದನ್ನು ನೋಡಿದ್ದೇವೆ. ಆದರೆ ಇಲ್ಲಿ ಮಹಿಳೆಯರು ಒಗ್ಗೂಡಿ ಗಣೇಶ ಮೂತಿ ಕೂಡಿಸಿರುವದು ವಿಶೇಷವಾಗಿದೆ ಎಂದರು.
ನಾಗಾವಿ ಎಕ್ಸಪ್ರೇಸ್ ಪತ್ರಿಕೆಯ ಸಂಪಾದಕ ಕಾಶಿನಾಥ ಗುತ್ತೆದಾರ ಮಾತನಾಡಿ ಇಂದಿನ ಯಾಂತ್ರಿಕ ಯುಗದಲ್ಲಿಯೂ ಸರ್ವರು ಒಗ್ಗೂಡಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವದರಿಂದ ಅದಕ್ಕೆ ವಿಶೇಷ ಮೆರಗು ಮೂಡುತ್ತದೆ ಅಲ್ಲದೇ ಮಕ್ಕಳು ಹಾಗೂ ಮಹಿಳೆಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಭಾಗವಹಿಸುವದರಿಂದ ಅವರಲ್ಲಿ ಪ್ರತಿಭೆಯನ್ನು ಪ್ರದರ್ಶಿಸಲು ಇಂತಹ ವೇದಿಕೆಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ಅಪರಾಧ ವಿಭಾಗದ ಪಿ.ಎಸ್.ಐ ಚಂದ್ರಮಪ್ಪಾ ಬಳಿಚಕ್ರ, ಪುರಸಭೆ ಸದಸ್ಯರಾದ ವಿನೊದ ಗುತ್ತೆದಾರ, ಅನ್ನಪೂರ್ಣ ಕಲ್ಲಕ್ಕ್ ಕಾಂಗ್ರೆಸ್ ಮುಖಂಡ ಬೆಂಜಿ ಮೊಹನ್, ಪತ್ರಕರ್ತ ರವಿಶಂಕರ ಬುರ್ಲಿ, ಮಹಿಳಾ ಮಂಡಲ ಅಧ್ಯಕ್ಷೆ ಶ್ರೀದೇವಿ ತಳವಾರ ವೇದಿಕೆಯಲ್ಲಿದ್ದರು.
ಮಹಿಳಾ ಮಂಡಲದ ಕಾಶಿಬಾಯಿ ಗುತ್ತೆದಾರ, ಅಂಬುಬಾಯಿ ಗುತ್ತೆದಾರ, ಶ್ರೀದೇವಿ ಗುತ್ತೆದಾರ, ಖ್ಯಾದಮ್ಮ ಬುರ್ಲಿ, ಲಕ್ಷಿ??ಬಾಯಿ ತಳವಾರ, ಜ್ಯೊತಿಲಕ್ಷಿ??, ಆಶಾ, ಮೀನಾಕ್ಷಿ ಬಡಿಗೇರ, ಶೀಲಾ, ಸಿದ್ದಪ್ಪ ಬುರ್ಲಿ, ಬಸವರಾಜ ಮುಡಬೂಳ, ಮಂಜುನಾಥ, ಸಾಬಣ್ಣ ಮಾಲಗತ್ತಿ, ವಿಶ್ವನಾಥ, ಮಲ್ಲಯ್ಯ ಸ್ವಾಮಿ, ಬಸವರಾಜ ಮಾಲಗತ್ತಿ, ಶಾಂತಕುಮಾರ ಆಲೂರ, ಮಮತಾ ದೊಡ್ಮನಿ, ಗೌರಿಶಂಕರ ದಂಡೊತಿ, ವಿಜಯೇಂದ್ರ ಬುರ್ಲಿ, ಭಾವೇಶ ಗುತ್ತೆದಾರ ಇತರರು ಇದ್ದರು.
ಪೂಜಾ ಮಾಲಗತ್ತಿ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು. ಶರಣಯ್ಯ ಸ್ವಾಮಿ ವಂದಿಸಿದರು.