ಶಿಕ್ಷಕರ ಕಾರ್ಯ ಶ್ಲ್ಯಾಘನೀಯ
ನವಲಗುಂದ, ಸೆ12 : ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸಿ ವಿದ್ಯಾರ್ಥಿಗಳ ಕನಸನ್ನು ಸಾಕಾರಗೊಳಿಸುವ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ಮಾಡಲ್ ಹೈಸ್ಕೂಲ ಮುಖ್ಯೋಪಾಧ್ಯಾಯರಾದ ಎಸ್ ವಾಯ್ ಉಳ್ಳಿಕಾಶಿ ಹೇಳಿದರು.
ಮಾಡೆಲ್ ಬಾಲಕಿಯರ ಪ್ರೌಢಶಾಲೆಯಲ್ಲಿ ಗಣೇಶ ಪ್ರತಿಷ್ಠಾಪನಾ ಕಾರ್ಯಕ್ರಮ ಅಂಗವಾಗಿ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು `ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾದುದು. ಸಮಾಜದಿಂದ ಏನನ್ನು ಬಯಸದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ವರ್ಗವನ್ನು ಸನ್ಮಾನಿಸುವ ಪ್ರೋತ್ಸಾಹಿಸುವಂತಹ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೆ ವೇಳೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಾದ ಎ ಆರ್ ಹೌದಕ್ಕನ್ನವರ ಹಾಗೂ ಎಸ್ ಎನ್ ಬೀರನೂರರವರನ್ನು ಸನ್ಮಾನಿಸಲಾಯಿತು
ಇದಕ್ಕೂ ಮೊದಲು ಚೈತ್ರಾ ಮಾದರ ಹಾಗೂ ಐಶ್ವರ್ಯ ಕಿಲಾರಿ ಸಂಗಡಿಗರವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು
ಶಿಕ್ಷಕರಾದ ಯು ಎ ಗದಗ, ಆರ್ ಎಸ್ ಆಲೂರ, ಎಸ್ ಜಿ ಪಾಟೀಲ್, ಪಿ ಬಿ ಚಳಕೊಪ್ಪ, ಎಮ್ ಬಿ ಸುಳ್ಳದ ಸೇರಿದಂತೆ ಶಿಕ್ಷಕ-ಶಿಕ್ಷಕಿಯರು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ಕಾರ್ಯದರ್ಶಿಗಳು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಲೆಯ ಪ್ರಧಾನ ಮಂತ್ರಿಯಾದ ಕುಮಾರಿ ವೈಭವಿ ಪಾಟೀಲ ನಿರೂಪಿಸಿದರು, ಕುಮಾರಿ ಚಿನ್ನವ್ವ ಸಂಗಟಿ ವಂದಿಸಿದರು.