ಸೆ.14ರಿಂದ ವಿಕಲಚೇತನರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ
ಕಲಬುರಗಿ.ಸೆ.12: ರಾಜ್ಯದಲ್ಲಿಕಾರ್ಯನಿರ್ವಹಿಸುತ್ತಿರುವಎಂಆರ್‍ಡಬ್ಲ್ಯು/ವಿಆರ್‍ಡಬ್ಲ್ಯು/ಯುಆರ್‍ಡಬ್ಲ್ಯುವಿಕಲಚೇತನಗೌರವಧನಕಾರ್ಯಕರ್ತರ ಸೇವೆ ಕಾಯಂಗೊಳಿಸುವಂತೆ ಒತ್ತಾಯಿಸಿ ಇದೇ ಸೆಪ್ಟೆಂಬರ್14ರಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿಎದುರುಅನಿರ್ದಿಷ್ಟಾವಧಿಧರಣಿ ಸತ್ಯಾಗ್ರಹನಡೆಸಲಾಗುವುದುಎಂದು ನವ ಕರ್ನಾಟಕಎಂಆರ್‍ಡಬ್ಲ್ಯು/ವಿಆರ್‍ಡಬ್ಲ್ಯು/ಯುಆರ್‍ಡಬ್ಲ್ಯುವಿಕಲಚೇತನರಗೌರವಧನಕಾರ್ಯಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ.ಅಂಬಾಜಿ ಪಿ.ಮೇಟಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವಅವರು, ರಾಜ್ಯಾದ್ಯಂತವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣಇಲಾಖೆಯಅಧೀನದಲ್ಲಿ ಸುಮಾರು 6860 ವಿವಿಧೋದ್ದೇಶ, ತಾಲೂಕು ಹಾಗೂ ನಗರ ಪುನರ್ವಸತಿಕಾರ್ಯಕರ್ತರುಗೌರವಧನಆಧಾರದಲ್ಲಿಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಕಾರ್ಯಕರ್ತರು ಕಳೆದ 15 ವರ್ಷಗಳಿಂದ ಅತ್ಯಂತಕಡಿಮೆಗೌರವಧನದಲ್ಲಿದುಡಿಯುತ್ತಿದ್ದು, ಪ್ರಸ್ತುತಕೇವಲ ರೂ.9000/- ಗೌರವಧನ ಪಡೆಯುತ್ತಾಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಹೀಗೆ ಕಾರ್ಯನಿರ್ವಹಿಸುತ್ತಿರುವಪುನರ್ವಸತಿಕಾರ್ಯಕರ್ತರು ವಿಕಲಚೇತನರೇಆಗಿದ್ದು, ಅಂಗವೈಕಲ್ಯತೆಗಳ ಮಧ್ಯೆಯೂಗ್ರಾಮೀಣ ಹಾಗೂ ನಗರ ಭಾಗದಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಹಿತಕಾಯುವ ನಿಟ್ಟಿನಲ್ಲಿಮುಂಚೂಣಿ ಸೇವೆ ಸಲ್ಲಿಸುತ್ತಿದ್ದಾರೆ.ಹಾಗಾಗಿ, ವಿಕಲಚೇತನಪುನರ್ವಸತಿಕಾರ್ಯಕರ್ತರ ಸೇವೆಯನ್ನುರಾಜ್ಯ ಸರಕಾರ ಕಾಯಂಗೊಳಿಸುವ ಮೂಲಕ ಸೇವಾ ಭದ್ರತೆ ನೀಡಬೇಕು. ಒಂದುವೇಳೆ, ಸೇವೆ ಕಾಯಂಗೊಳಿಸುವುದು ಸಾಧ್ಯವಿಲ್ಲ ಎನ್ನುವುದಾದರೆಕನಿಷ್ಠ ವೇತನಜಾರಿಗೆತರುವ ಮೂಲಕ ನ್ಯಾಯಒದಗಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ಸತ್ಯಾಗ್ರಹದಲ್ಲಿರಾಜ್ಯದಎಲ್ಲ ಜಿಲ್ಲೆಗಳಿಂದ ಸುಮಾರು 1500ಕ್ಕೂ ಅಧಿಕ ವಿಕಲಚೇತನ ಪುನರ್ವಸತಿಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಬೇಡಿಕೆಈಡೇರುವವರೆಗೆ ಹೋರಾಟ ಮುಂದುವರೆಸಲಾಗುವುದುಎಂದುಅವರು ಹೇಳಿದ್ದಾರೆ.