ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಪೂರಕ
ಲಕ್ಷ್ಮೇಶ್ವರ, ಸೆ12: ಪಟ್ಟಣದ ಉರ್ದು ಶಾಲೆ ನಂಬರ-2 ರಲ್ಲಿ ಕ್ಲಸ್ಟರ್ ಮಟ್ಟದ ಉರ್ದು ಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆ ಜರುಗಿದವು.
ಪ್ರತಿಭಾ ಕಾರಂಜಿಯನ್ನು ಶಾಸಕ ಡಾ. ಚಂದ್ರು ಲಮಾಣಿ ಅವರು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಲು ಪ್ರತಿಭಾ ಕಾರಂಜಿಗಳು ಪೂರಕವಾಗಿವೆ.
ನಮ್ಮ ಕಲೆ ಸಂಗೀತ ನೃತ್ಯ ಕಂಠಪಾಠ ಜಾನಪದ ಮುಂತಾದ ಕಲೆಗಳು ಜೀವಂತವಾಗಿ ಉಳಿಯಲು ಮತ್ತು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಲು ಪ್ರತಿಭಾ ಕಾರಂಜಿಗಳು ವಿದ್ಯಾರ್ಥಿಗಳಿಗೆ ವೇದಿಕೆಗಳಾಗಿವೆ. ಅನೇಕ ವಿದ್ಯಾರ್ಥಿಗಳು ಅನೇಕ ರೀತಿಯ ಪ್ರತಿಭೆಗಳನ್ನು ಹೊಂದಿದ್ದರು ಅವುಗಳನ್ನು ಗುರುತಿಸಲು ಸೂಕ್ತ ವೇದಿಕೆ ಇರಲಿಲ್ಲ ಈಗ ರಾಜ್ಯದಲ್ಲಿ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಜ್ಯಮಟ್ಟದಲ್ಲಿ ಜಿಲ್ಲಾಮಟ್ಟದಲ್ಲಿ ತಾಲೂಕ ಮಟ್ಟದಲ್ಲಿ ಕ್ಲಸ್ಟರ್ ಮಟ್ಟದಲ್ಲಿ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಗುರುತಿಸಲು ಪ್ರತಿಭಾ ಕಾರಂಜಿ ಅತ್ಯಂತ ಮಹತ್ವದ ಘಟ್ಟವಾಗಿವೆ ವಿದ್ಯಾರ್ಥಿಗಳನ್ನು ಕೇವಲ ವಿದ್ಯೆಗೆ ಸೀಮಿತವಾಗಿಸದೆ ಅವರಲ್ಲಿ ಸಾಂಸ್ಕೃತಿಕ ಬೆಳವಣಿಗೆಗಳನ್ನು ಬೆಳೆಸುವುದನ್ನು ಶಿಕ್ಷಕರು ಮನದಟ್ಟು ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗದಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಶ್ರಾಂತ ಉಪನಿರ್ದೇಶಕರುಗಳಾದ ಜಿ ಬಸವಲಿಂಗಪ್ಪ ಐ.ಬಿ. ಬೆನಕಪ್ಪ ಅವರು ಭಾಗವಹಿಸಿ ಮಾತನಾಡಿದರು.
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ದಲ್ಲಿ 9 ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಪುರಸಭಾ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್‍ಎನ್ ನಾಯಕ್ ಪುರಸಭೆ ಉಪಾಧ್ಯಕ್ಷ ಫಿರ್ದೋಷ ಆಡೂರ ಅಂಜುಮನ್ ಕಮಿಟಿ ಅಧ್ಯಕ್ಷ ಎಂ ಎಂ ಗದಗ ಎಸ್ ಡಿ ಎಂ ಸಿ ಅಧ್ಯಕ್ಷ ಮಹಮ್ಮದ್ ರಫೀಕ್ ಕುಡಚಿ ಎಂ ಎಂ ಹವಳದ ಈಶ್ವರ್ ಮೆಡ್ಲೇರಿ ದಾದಾಪೀರ್ ಮಚ್ಚಾಲೆ ಎನ್‍ಎ ಮುಲ್ಲಾ ಸತೀಶ್ ಬೊಮಲೆ ಸಿ. ವಿ. ವಡಕಣ್ಣನವರ ಉಮೇಶ ನೇಕಾರ ಸೇರಿದಂತೆ ಅನೇಕರಿದ್ದರು.
ಎ ಐ ಮಿಯಾನವರ ಎಂ ಎಂ ಗುತ್ತಲ ಎಚ್ ಬಿ ಪಟ್ಟಣದ ನಿರ್ವಹಿಸಿದರು.