ನಗರ ಶಾಸಕರಿಂದ ಕಾಕರ್ಲತೋಟದಕ್ಯಾದಿಗೆ ಹಳ್ಳದ ಸೇತುವೆ ಸೇರಿದಂತೆ ವಿವಿಧ ಕಾಮಗಾರಿಗೆ  ಚಾಲನೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.12: ಇಲ್ಲಿನ  ಕಾಕರ್ಲತೋಟ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದೆಂದು  ನಗರ  ಶಾಸಕ ನಾರಾ ಭರತ್ ರೆಡ್ಡಿ ಹೇಳಿದ್ದಾರೆ‌
ಅವರು ಇಂದು ವಿಶೇಷ ಅನುದಾನದ ಅಡಿ ಅಂದಾಜು 8 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ  ಸೇತುವೆ ಹಾಗೂ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗುಗ್ಗರ ಹಟ್ಟಿಯ ಬಳಿಯ ಬಳ್ಳಾರಿ-ಬೆಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಯಾಗುತ್ತಿದೆ‌‌. ಈ  ನೂತನ ಸೇತುವೆಯ ನಿರ್ಮಾಣದಿಂದ ಟ್ರಾಫಿಕ್ ಜಾಮ್ ತಗ್ಗಲಿದೆ, ಅಲ್ಲದೇ ಬಳ್ಳಾರಿ ನಗರ ಕೇಂದ್ರದಿಂದ ಕಾಕರ್ಲತೋಟದ ಭಾಗಕ್ಕೆ ಸಂಚರಿಸುವ ಜನರಿಗೂ ಅನುಕೂಲವಾಗಲಿದೆಂದು ಹೇಳಿದ್ದಾರೆ.
ಸೇತುವೆ ಕಾಮಗಾರಿಯ ಹೊರತಾಗಿ 5ನೇ ವಾರ್ಡಿನ ರಸ್ತೆ ಅಭಿವೃದ್ಧಿಗಾಗಿ 75 ಲಕ್ಷ ರೂ.ಗಳ ಹಣ ಮಂಜೂರು ಮಾಡಿಸಲಿದೆಂದು ಶಾಸಕರು ಹೇಳಿದ್ದಾರೆ. ಈ  ವೇಳೆ 5ನೇ ವಾರ್ಡಿನ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಚಾಲನೆ:
ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯ ಒಳಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗೆ (4 ಕೋಟಿ 19 ಲಕ್ಷ ರೂ.ಗಳ ವೆಚ್ಚ, ಸಿಸಿ ರಸ್ತೆ) ಚಾಲನೆ ನೀಡಿದ ಶಾಸಕರು,  ಎಪಿಎಂಸಿಯ ಪಕ್ಕದ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಹೊರ ಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜನರಿಂದ ಅಹವಾಲು ಸ್ವೀಕರಿಸಿದರು.
ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಈಗಾಗಲೇ ಓವರ್ ಹೆಡ್ ಟ್ಯಾಂಕ್ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಹೊರ ಚರಂಡಿ ನಿರ್ಮಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.
ರಸ್ತೆ ನಿರ್ಮಾಣ: ಹಂದ್ರಾಳ ಪ್ರದೇಶದಲ್ಲಿ 1 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ  ಸಹ ಇಂದು ನಗರ ಶಾಸಕರು ಚಾಲನೆ ನೀಡಿ ನಂತರ  ನಿರ್ಮಾಣ ಹಂತದಲ್ಲಿ ಚಾಲ್ತಿಯಲ್ಲಿರುವ ಹಂದ್ರಾಳ ಸೇತುವೆ ಕಾಮಗಾರಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮೇಯರ್ ಮುಲ್ಲಂಗಿ ನಂದೀಶ್, ಪಾಲಿಕೆಯ ಸದಸ್ಯರಾದ ರಾಜಶೇಖರ ಹಡ್ಲಿಗಿ, ಎಂ.ಪ್ರಭಂಜನಕುಮಾರ್, ರಾಮಾಂಜನೇಯ,  ಮುಖಂಡರಾದ ವಿಜಯ್, ಅನೂಪ್ ಸೇರಿದಂತೆ ಹಲವರು ಇದ್ದರು.
One attachment • Scanned by Gmail