ನಿಸರ್ಗ ಚಿಕಿತ್ಸೆ ಮೂಲಕ ಉತ್ತಮ ಆರೋಗ್ಯ ಹೊಂದಿ
ಚನ್ನಮ್ಮನ ಕಿತ್ತೂರು, ಸೆ12: ಪ್ರತಿಯೊಬ್ಬರು ನಿರಂತರ ಯೊಗ ಮಿತ ಆಹಾರ ಹೆಚ್ಚು ನೀರು ಕುಡಿಯುವುದರ ಮೂಲಕ ರೋಗ ಮುಕ್ತರಾಗಲು ಧಾರವಾಡದ ಮಹಿಶಿ ಟ್ರಸ್ಟ್ ಮುಖ್ಯ ವೈದ್ಯ ಡಾ. ಮುರುಘನ್ ಹೇಳಿದರು.
ತಾಲೂಕಿನ ನಿಚ್ಚಣಕಿ ಗ್ರಾಮದ ಗುರು ಮಡಿವಾಳೇಶ್ವರ ಮಠದ ಆವರಣದಲ್ಲಿ ಕಸಾಪ, ಗ್ರಾಪಂ ಡಿಜಿಟಲ್ ಗ್ರಂಥಾಲಯ ಮತ್ತು ಅರವು ಕೇಂದ್ರ ಧಾರವಾಡ ದಡ್ಡಿ ಕಮಲಾಪೂರ ಮಹಿಶಿ ಟ್ರಸ್ಟ್ ಆಶ್ರಯದಲ್ಲಿ ನಡೆದ ಚಿಕಿತ್ಸಾ ಶಿಬಿರದಲ್ಲಿ ಅತಿಥಿಗಳಾಗಿ ಮಾತನಾಡಿದವರು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಮನೆಯ ಆಹಾರ ಪದ್ಧತಿಯಲ್ಲಿದೆ. ಇದಕ್ಕೆ ನಿಸರ್ಗ ಚಿಕಿತ್ಸೆ ಮೂಲಕ ಉತ್ತಮ ಆರೋಗ್ಯ ಹೊಂದಿ. ಮುಂದೆ ಬರುವ ರೋಗಗಳನ್ನು ತಡೆಯಬಹುದುದೆಂದು ತಿಳಿಸಿದರು.
ಮಹಿಶಿ ಟ್ರಸ್ಟ್ ಆಡಳಿತ ಮುಖ್ಯಸ್ಥೆ ಸಾವಿತ್ರಿ ಮಹಿಶಿ ಮಾತನಾಡಿ ಮುಂಜಾಗ್ರತೆ ಚಿಕಿತ್ಸೆಗಿಂತ ಉತ್ತಮವಾದದ್ದು ನಮ್ಮ ಪೂರ್ವಜರ ಮಾರ್ಗದಲ್ಲಿ ಮಿತ ಆಹಾರದಿಂದ ಉತ್ತಮ ಆರೋಗ್ಯ ಹೊಂದಬೇಕೆಂದರು. ಇಂತಹ ಚಿಕಿತ್ಸೆಗಳನ್ನು ಗ್ರಾಮೀಣ ಮಟ್ಟದಲ್ಲಿ ಹಮ್ಮಿಕೊಂಡು ಸಾರ್ವಜನಿಕರಿಗೆ ಅರಿವು ಮೂಡಿಸುವುದು ಉತ್ತಮ ಕೆಲಸವೆಂದು ಪ್ರಶಂಸಿಸಿದರು.
ಟ್ರಸ್ಟಿನ ಆಡಳಿತಾಧಿಕಾರಿ ವಿಜಯಾ ದೇಸಾಯಿ ಹಾಗೂ ಗುರುರಾಜ ನಾಡಗೇರ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಗ್ರಾಪಂ ಅಧ್ಯಕ್ಷ ಕಾವ್ಯಾ ಮುರಗೋಡಮಠ ವಹಿಸಿಕೊಂಡಿದ್ದರು. ಗ್ರಾಮದ ಹಿರಿಯ ಚಂದ್ರಮ್ಮ ಗಾಳಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈಶ್ವರ ಗಡಿಬಿಡಿ ಪಾರ್ಥಿಸಿದರು, ಗ್ರಾಪಂ ಅಭಿವೃದ್ದಿ ಅಧಿಕಾರಿ ಶ್ರೀಮತಿ ಕುಸಮಾ ಸ್ವಾಗತಿಸಿದರು, ಕಸಾಪ ಅಧ್ಯಕ್ಷ ಡಾ. ಎಸ್.ಬಿ.ದಳವಾಯಿ ಪ್ರಾಸ್ತಾವಿಕ ನುಡಿಯನ್ನಾಡಿದರು. ಭಾಗ್ಯಶ್ರೀ ಆನಂದಿ ವಂದಿಸಿದರು. ಗ್ರಂಥ ಪಾಲಕ ಬಸವರಾಜ ದಳವಾಯಿ ನಿರೂಪಿಸಿದರು. ಗ್ರಾಪಂ ಸರ್ವ ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರಿದ್ದರು.