ಗಣಪತಿಗೆ ವಿಘ್ನ ನಿವಾರಕ ಶಕ್ತಿ ಯಿದೆ: ಬಸವಲಿಂಗ ಅವಧುತರು
ಔರಾದ:ಸೆ.12: ಭಾರತದಲ್ಲಿ ಅನಾದಿಕಾಲದಿಂದಲೂ ಗಣಪತಿಯ ಮೂರ್ತಿಯ ಪೂಜೆ ನೆರವೇರಿಸಕೊಂಡು ಬರಲಾಗುತ್ತಿದೆ ಎಂದು ಮಲ್ಲಯ್ಯಗಿರಿ, ದೇಗಲಮಡಿ ಮತ್ತು ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಪೂಜ್ಯ ಶ್ರೀ ಡಾ. ಬಸವಲಿಂಗ ಅವಧೂತರು ಹೇಳಿದರು. ಅವರು ಔರಾದ ತಾಲೂಕಿನ ಬೆಲ್ದಾಳ ಗ್ರಾಮದ ಸಿದ್ದಿವಿನಾಯಕ ಗಣೇಶ ಉತ್ಸವ ನಿಮಿತ್ತ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮ ಸಾನಿಧ್ಯವಹಿಸಿ ಮಾತನಾಡಿದರು. ಮಣ್ಣಿನ ಮೂರ್ತಿ ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಪೂಜಿಸುತ್ತಿದ್ದರು. ಗಣೇಶನಿಗೆ ವಿಗ್ನನಿವಾಹಾರಕ ಶಕ್ತಿ ಇದೆ ಎಂದು ಹೇಳಿದರು.
ಮುಂದೆ ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ ಎಂದು ಹೇಳಿದರು.
ಧರ್ಮ ಮತ್ತು ಅಧರ್ಮ ಮಕ್ಕಳಿಗೆ ತಿಳಿ ಹೇಳಬೇಕು ಇದರಿಂದ ಮಕ್ಕಳು ಸಂಸ್ಕಾರ ಉಳ್ಳುವರಾಗುತ್ತಾರೆ ಎಂದರು. ಪ್ರತಿಯೊಬ್ಬರು ಬೆಳಗಿನ ಜಾವ ಬೇಗ ಎದ್ದು ದೇವರ ಧ್ಯಾನದಲ್ಲಿ ಮಗ್ನರಾಗಬೇಕು ಎಂದು ಸಲಹೆ ನೀಡಿದರು. ಬಸವಣ್ಣನವರ ಸಪ್ತ ಸೂತ್ರ ಬಗ್ಗೆ ವಿವರವಾಗಿ ತಿಳಿಸಿದರು. ಈ ಊರಲ್ಲಿ ಎಲ್ಲರೂ ಸೌರ್ಹಾದತೆಯಿಂದ ಬದುಕು ಸಾಗಿಸಬೇಕು ಎಂದು ತಿಳಿಸಿದರು
ಮೊದಲಿಗೆ ಸಿದ್ದಿವಿನಾಯಕ ಗಣೇಶನಿಗೆ ಅವಧೂತರು ಪೂಜೆ ಸಲ್ಲಿಸಿದರು.
ಪ್ರಮುಖರಾದ ನವೀನ ರಡ್ಡಿ, ಈಶಾ ರಡ್ಡಿ, ಸಂದೀಪ ವಗ್ಗೆ, ನವೀನ ಉಪ್ಪಾರ, ವಿಠಲ್ ರಡ್ಡಿ, ಪವನ ವಗ್ಗೆ, ಸಂತೋಷ ವಗ್ಗೆ ಮೊದಲಾದವರು ಇದ್ದರು.