ಬೀದರ್ ನಲ್ಲಿ ಅಷ್ಟಲಕ್ಷ್ಮಿ ಪೂಜೆ ಸಂಪನ್ನ
ಬೀದರ್:ಸೆ.12: ನಗರದ ಚಿದ್ರಿ ರಸ್ತೆಯಲ್ಲಿರುವ ಹನುಮಾನ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ ಅವರ ಮನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಬುಧವಾರ ಸಂಜೆ ಅಷ್ಟಲಕ್ಷ್ಮಿ ಪೂಜೆ ನೆರವೇರಿತು
ದಯಾನಂದ ಸ್ವಾಮಿ ಹಾಗೂ ಕುಟುಂಬಸ್ಥರು ಸೇರಿ ಬುಧವಾರ ಸಂಜೆ 7:00 ಗಂಟೆಗೆ ಅಷ್ಟಲಕ್ಷ್ಮಿ ಪೂಜೆ ನೆರವೇರಿಸಿದರು.
ನಂತರ ತಮ್ಮ ಸಂಬಂಧಿಕರು ಮಿತ್ರರು ನೆಂಟರಿಷ್ಟಾಧಿಯಾಗಿ ಎಲ್ಲರಿಗೆ ಔತಣಕೂಟ ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ದಯಾನಂದ ಸ್ವಾಮಿ ಸಿರ್ಸಿ ಅವರ ಧರ್ಮ ಪತ್ನಿ ಜೈಶ್ರೀ ದಯಾನಂದ ಸ್ವಾಮಿ, ಪುತ್ರರಾದ ಆಕಾಶ, ಆದರ್ಶ್, ಸಾಯಿ ಶಂಕರ, ಶ್ರೇಷ್ಠ, ಬಸವಕುಮಾರ ಸ್ವಾಮಿ ಸೇರಿದಂತೆ ಇತರೆ ಬಂಧು ಮಿತ್ರರು ಹಾಗೂ ಸ್ನೇಹಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.