ವಾಯುಪುತ್ರ ಯುವಕರ ಸಂಘಕ್ಕೆ ‘ತಾಯಮ್ಮ ಶಕ್ತಿ ಶ್ರೀ ಸಿದ್ದಿ ವಿನಾಯಕ’ ಪ್ರಶಸ್ತಿ
ಹೊಸಪೇಟೆ: ಅತ್ಯುತ್ತಮ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆಗಾಗಿ ನಗರದ ವಾಯುಪುತ್ರ ಯುವಕರ ಸಂಘಕ್ಕೆ ‘ತಾಯಮ್ಮ ಶಕ್ತಿ ಶ್ರೀ ಸಿದ್ದಿ ವಿನಾಯಕ’ ಪ್ರಥಮ ವರ್ಷದ ಪ್ರಶಸ್ತಿ ಲಭಿಸಿದೆ.
ಟಿ.ಬಿ.ಡ್ಯಾಂ ಎಸ್‍ವಿಜಿ ಯುವಕರ ಸಂಘ, ದ್ವಿತೀಯ ಸ್ಥಾನ ಬಾಣದಕೇರಿ ಕದಂಬ ಯುವಕರ ಸಂಘ, ತೃತೀಯ ಸ್ಥಾನ, ಜನಾಕರ್ಷಣೆಯ ಗಣೇಶ ಪ್ರಶಸ್ತಿಯನ್ನು ಹಿಂದೂ ಮಹಾ ಗಣಪತಿ ಪಡೆದುಕೊಂಡಿದೆ. ಚೆಲುವಾದಿಕೇರಿ ಯುವಕರ ಸಂಘ, ಪಟೇಲ್ ನಗರದ ಬ್ಲೂ ಬಾಯ್ಸ್ ಗಜಾನನ ಯುವಕರ ಸಂಘ, ಚಿತ್ತವಾಡ್ಗಿಯ ಗಜಾನನ ಉತ್ಸವ ಸಮಿತಿ ಹಾಗೂ ಆಕಾಶವಾಣಿ ಏಕದಂತ ಯುವಕರ ಸಂಘಗಳು ಜನಜಾಗೃತಿ ಗಣೇಶನ ವಿಭಾಗ ಪ್ರಶಸ್ತಿ ಪಡೆದುಕೊಂಡಿವೆ.
ನಗರದ ವಡಕರಾಯ ದೇವಸ್ಥಾನದ ಬಳಿ ಬುಧವಾರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಮಾಮ್ ನಿಯಾಜಿ ಅವರು, ವಿಜೇತ ಮಂಡಳಿಗಳಿಗೆ ಪ್ರಥಮ ಬಹುಮಾನ (20 ಸಾವಿರ) ದ್ವಿತಿಯಾ ಬಹುಮಾನ (15 ಸಾವಿರ), ತೃತಿಯಾ ಬಹುಮಾನ (10 ಸಾವಿರ) ಹಾಗೂ ಜನಾಕರ್ಷಣೆ ಗಣೇಶ ಪ್ರಶಸ್ತಿಗೆ(15 ಸಾವಿರ) ಹಾಗೂ ನೆನಪಿನ ಕಾಣಿಕೆ ವಿತರಿಸಿದರು.
ವಡ್ಡರ ಓಣಿಯ ಬೀಷ್ಮ ಯುವಕರ ಸಂಘ, ಮುದ್ಲಾಪುರ ತಾಯಮ್ಮ ಯುವಕರ ಸಂಘ, ಭಾವಸಾರ ಕ್ಷತ್ರಿಯ ವಿಜಯ ವಿಠಲ ಗಣಪತಿ, ಬೀರಲಿಂಗೇಶ್ವರ ಟ್ರಸ್ಟ್ ಹಾಗೂ ವಿಕಾಸ ಯುವಕರ ಮಂಡಳಿ ಮಹಿಳಾ ಮಂಡಳಿಗೆ ಪ್ರಶಸ್ತಿ ಪತ್ರ, ನೆನೆಪಿನ ಕಾಣಿಕೆ ವಿತರಿಸಿದರು.
ಮುಖಂಡರಾದ ರವಿಕಾಂತ, ಚಂದ್ರಶೇಖರ್,  ಪ್ರಕಾಶ್ ಮೆಹರ್ವಾಡ, ರೇಖಾ ಪ್ರಕಾಶ್. ನೀತಾ ಪಾಟೀಲ್, ಪ್ರಿಯಾಂಕ ಜೈನ್,  ಗುಜ್ಜಲ್ ಗಣೇಶ್,  ಈಶಪ್ಪ,  ಕಮಲಾಪುರದ ವೀರೇಶ್, ಕೃಷ್ಣಮೂರ್ತಿ, ಶ್ರೀಧರ್ ಅವಳೆ ಹಾಗೂ ಟಿಂಕರ್ ರಫಿಕ್ ಇತರರಿದ್ದರು.