ರಾಜ್ಯದಲ್ಲಿ ಫ್ರೀಡಮ್ 125 ಮೊದಲ ಮೋಟಾರ್ ಸೈಕಲ್ ನೀಡಿಕೆ
ಸಂಜೆವಾಣಿ ನ್ಯೂಸ್
ಹುಬ್ಬಳ್ಳಿ,ಸೆ.12; ವಿಶ್ವದ ಪ್ರಥಮ ಅತ್ಯಂತ ಮೌಲ್ಯಯುತ ಟೂ ವೀಲರ್ ಮತ್ತು ಶ್ರೀ ವೀಲರ್ ಕಂಪನಿ ಬಜಾಜ್ ಆಟೋ ಲಿ. ಕರ್ನಾಟಕದಲ್ಲಿ ಇಂದು ಫ್ರೀಡಮ್ 125 ಡೆಲಿವರಿ ಆರಂಭಿಸಿದೆ. ಆರಂಭದಲ್ಲಿ 10 ಮೋಟರ್‍ಸೈಕಲ್‍ಗಳ ಬ್ಯಾಚ್ ಅನ್ನು ಡೆಲಿವರಿ ಮಾಡಲಾಗಿದ್ದು, ಸಂತೃಪ್ತ ಗ್ರಾಹಕರು ತಮ್ಮ ಸುಂದರವಾದ ಬೈಕ್‍ಗಳನ್ನು ಪಡೆದುಕೊಂಡರು.
ಜುಲೈನಲ್ಲಿ ಫ್ರೀಡಮ್ 125 ಅನ್ನು ಮಹಾರಾಷ್ಟ್ರ ಮತ್ತು ಗುಜರಾತ್‍ನಲ್ಲಿ ಬಿಡುಗಡೆ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೋಟರ್‍ಸೈಕಲ್‍ಗೆ ಸುಮಾರು 60 ಸಾವಿರಕ್ಕೂ ಹೆಚ್ಚು ವಿಚಾರಣೆಗಳು ಬಂದಿವೆ. ಈಗ ಫ್ರೀಡಮ್ 125 ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗುಜರಾತ್, ದೆಹಲಿ, ಕೇರಳ ಮತ್ತು ತಮಿಳುನಾಡಿನಲ್ಲಿ ಲಭ್ಯವಿದೆ. ಪ್ರಸ್ತುತ ತ್ರೈಮಾಸಿಕದಲ್ಲಿ ಭವಿಷ್ಯದ ರಾಜ್ಯಗಳಲ್ಲಿ ಬಿಡುಗಡೆಯನ್ನು ಮಾಡಲಾಗುತ್ತದೆ.
ಹೊಸ ಮಾನದಂಡದ ರಚನೆ ಫ್ರೀಡಮ್ 125 ಉದ್ಯಮದಲ್ಲಿ ಹೊಸ ಮಾನದಂಡವನ್ನು ನಿಗದಿಪಡಿಸಿದ್ದು, ಇದು ಡ್ಯೂಯೆಲ್ ಪ್ಯೂಯೆಲ್ ಸಾಮಥ್ರ್ಯವನ್ನು ಹೊಂದಿದೆ. ಹೀಗಾಗಿ, ಸಿಎನ್‍ಜಿ ಮತ್ತು ಪೆಟ್ರೋಲ್ ಎರಡನ್ನೂ ಬಳಸುವ ಅನುಕೂಲವನ್ನು ಇದು ಸವಾರರಿಗೆ ನೀಡುತ್ತದೆ.
ಇದರ ಅದ್ಭುತ, ಸಂಯೋಜಿತ ರೇಂಜ್ 330 ಕಿ.ಮೀ ಇದ್ದು, ದೀರ್ಘ ದೂರದವರೆಗೆ ಮತ್ತು ಅಡೆತಡೆ ಇಲ್ಲದ ಪ್ರಯಾಣದ ಖುಷಿಯನ್ನು ಒದಗಿಸುತ್ತದೆ. ಹೀಗಾಗಿ, ದೈನಂದಿನ ಪ್ರಯಾಣಿಕರು ಮತ್ತು ದೀರ್ಘದೂರಕ್ಕೆ ಪ್ರಯಾಣಿಸುವವರಿಗೆ ಸೂಕ್ತವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬಜಾಜ್ ಆಟೋ ಲಿ. ಮೋಟಾರ್‍ಸೈಕಲ್ ವಿಭಾಗದ ಅಧ್ಯಕ್ಷ ಸಾರಂಗ್ ಕಾನಡೆ “ನಮ್ಮ ಫ್ರೀಡಮ್ 125 ಬಗ್ಗೆ ಜನರು ತೋರಿಸಿದ ಮೆಚ್ಚುಗೆಯು ನಮಗೆ ಹೆಮ್ಮೆ ಮೂಡಿಸಿದೆ. ಇದು ಸುರಕ್ಷತೆ, ಆರಾಮ ಮತ್ತು ಕೈಗೆಟಕುವಿಕೆಯ ಪರಿಪೂರ್ಣ ಮಿಶ್ರಣವನ್ನು ನೀಡುತ್ತದೆ. ದೆಹಲಿಯಲ್ಲಿ ಮೊದಲ ಫ್ರೀಡಮ್ 125 ಡೆಲಿವರಿಯು ಗ್ರಾಹಕರಿಗೆ ನಾವು ನೀಡಿದ ಬದ್ಧತೆಗೆ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಉತ್ತಮ ಸಿಎನ್‍ಜಿ ನೆಟ್‍ವರ್ಕ್ ಇದೆ ಮತ್ತು ಸುರಕ್ಷಿತ ಮತ್ತು ಪರಿಸರ ಸ್ನೇಹಿ ಪ್ರಯಾಣದ ಜೊತೆಗೆ ಕಡಿಮೆ ವೆಚ್ಚದ ಪ್ರಯಾಣವನ್ನು ಕರ್ನಾಟಕದ ಜನರು ಮಾಡಬಹುದಾಗಿದೆ ಎಂದರು.