ಕಂಚಿಕೆರೆಯಲ್ಲಿ ಮಹಾಭಾರತ- ರಾಮಾಯಣ ವೇಷಧಾರಿಗಳ ಮೆರವಣಿಗೆ ವೈಭವ.
ಸಂಜೆವಾಣಿವಾರ್ತೆ
ಹರಪನಹಳ್ಳಿ.ಸೆ.೧೨; ತಾಲೂಕಿನ ಕಂಚಿಕೆರೆ ಗ್ರಾಮದಲ್ಲಿ ಹಿಂದೂ ‌ಮಹಾಗಣಪತಿ ಮೂರ್ತಿಯನ್ನು, ವಿನಾಯಕ ಸ್ನೇಹ ಜೀವಿ ಬಳಗದಿಂದ ಮೊದಲನೇ ವರ್ಷದ  ಕಲಾ ತಂಡಗಳಾದ ಸಮಾಳ, ನಂದಿಕೋಲು, ಹಲಗೆ, ಗೊಂಬೆ ಕುಣಿತ, 35 ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳಲ್ಲಿ ರಾಮಾಯಣ ಮತ್ತು ಮಹಾ ಭಾರತದಲ್ಲಿ ಬರುವ ಸನ್ನಿವೇಶಧಾರಿ ಗಳನ್ನು ಮೆರವಣಿಗೆ ನಡೆಸಿದರು.ಈ ಸಂದರ್ಭದಲ್ಲಿ ವ್ಯವಸ್ಥಾಪಕ ಡಿ.ಜಿ.ಕೃಷ್ಣ, ಪ್ರಶಾಂತ್, ಎಂ.ಹೆಚ್.ರಾಜಪ್ಪ, ಕೆಂಚಪ್ಪ. ಎಂ., ಅಶೋಕ, ಜಿ.ಜ್ಯೋತೆಪ್ಪ,ಬಿ. ಜಗದೀಶಪ್ಪ, ಕೊಟ್ರೇಶ್,ಹರೀಶ್, ಕಲಾವಿದರು ಹಾಗೂ ಊರಿನ ಮುಖಂಡರು ಪಾಲ್ಗೊಂಡಿದ್ದರು.
