ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರುತ್ತದೆ
ಸಂಜೆವಾಣಿ ನ್ಯೂಸ್
ಮೈಸೂರು:ಸೆ.12:-ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆಗಳಿವೆ ಅವುಗಳನ್ನು ಹೊರತರಲು ಈ ರೀತಿಯ ಕಾರ್ಯಕ್ರಮ ಅವಶ್ಯಕ ಎಂದು ಪ್ರಸಾರಾಂಗ ನಿರ್ದೇಶಕ ಪೆÇ್ರ.ಎಂ.ನಂಜಯ್ಯ ಹೊಂಗನೂರು ಹೇಳಿದರು.
ಸರಸ್ವತಿಪುರಂ ಜೆಎಸ್‍ಎಸ್ ಮಹಿಳಾ ಕಾಲೇಜು ವತಿಯಿಂದ ನಡೆದ ಸಾಂಸ್ಕøತಿಕ, ಸಾಹಿತ್ಯಕ ಮತ್ತು ಕ್ರೀಡೆ ವೇದಿಕೆಗಳ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶಿಕ್ಷಣದ ಕಲಿಕೆ ಜತೆಗೆ ಪಠ್ಯೇತರ ಚಟುವಟಿಕೆ ಬಹಳ ಮುಖ್ಯ. ಹಾಗೆಯೇ ಮಕ್ಕಳು ಆಧುನಿಕ ಸಂಸ್ಕೃತಿಯಿಂದ ಗ್ರಾಮೀಣ ಸಂಸ್ಕೃತಿ ಕಡೆಗೆ ಮುಖ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು.
ಜಂಗಮವಾಣಿಯಿಂದ ಯುವ ಪೀಳಿಗೆ ತಮ್ಮ ಭವಿಷ್ಯವನ್ನೇ ಮರೆಯುತ್ತಿದ್ದಾರೆ. ವಿದ್ಯಾರ್ಥಿಗಳು ಜಂಗಮವಾಣಿ ಕಡೆ ಗಮನಹರಿಸದೆ ತಮ್ಮ ಉಜ್ವಲ ಭವಿಷ್ಯದ ಬಗ್ಗೆ ಚಿಂತಿಸಬೇಕು ಎಂದರು.
ಅಂತಾರಾಷ್ಟ್ರೀಯ ವಾಲಿಬಾಲ್‍ನ ನಿವೃತ್ತ ತರಬೇತುದಾರ ಎನ್.ಬಿ.ಸುರೇಶ್ ಮಾತನಾಡಿ, ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಕಾಪಾಡಲು ಯೋಗ ಮಾಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರತಿಯೊಬ್ಬರಿಗೂ ಅವಕಾಶಗಳು ಸಿಗುತ್ತವೆ. ಅವುಗಳನ್ನು ಕಡೆಗಣಿಸದೆ ಸರಿಯಾಗಿ ಸದುಪಯೋಗ ಪಡೆದುಕೊಳ್ಳಿ. ಹೆಣ್ಣು ಮಕ್ಕಳು ಸಾಮಾಜಿಕ ಪಿಡುಗು ಎದುರಿಸಲು ದೈಹಿಕ ಶಿಕ್ಷಣ ಅವಶ್ಯಕ ಎಂದು ಅವರು ಕಿವಿಮಾತು ಹೇಳಿದರು.
ಇದೇ ವೇಳೆ ಸರಿಗಮ_ 20 ಸೀಜನ್ ಗಾಯಕಿ ಅಮೂಲ್ಯಾ ಮಾತನಾಡಿ, ನೀವು ಏನಾದರೂ ಸಾಧಿಸಲು ಗುರಿ ಮುಖ್ಯ. ಗುರಿ ಇಲ್ಲದ್ದಿದರೆ ಏನು ಸಾಧಿಸಲು ಸಾಧ್ಯವಿಲ್ಲ ಎಂದರು.
ಬಳಿಕ ಕೆಲವು ಚಲನಚಿತ್ರ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಪೂರ್ಣಿಮಾ, ಬಿ.ಎಂ.ಉಮಾದೇವಿ, ರಶ್ಮಿ, ರೇಚಣ್ಣ ಇದ್ದರು.