ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ:ವಾಲಿಕಾರ
ತಾಳಿಕೋಟೆ:ಸೆ.೧೨: ತಾಳಿಕೋಟೆ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಅಕ್ಟೋಬರ ೧ ರಂದು ನಡೆಯಲಿದ್ದು ಎಲ್ಲ ರೀತಿಯ ಸಿದ್ದತೆಗಳನ್ನು ತ್ವರಿತಗತಿಯಾಗಿ ಕೈಗೊಳ್ಳಲಾಗುತ್ತಿದೆ ಕನ್ನಡ ಅಭಿಮಾನಿಗಳ ತವರು ತಾಳಿಕೋಟೆ ಹಿರಿಮೆ ಈ ಸಮ್ಮೇಳನ ಹೆಚ್ಚಿಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಹಾಸೀಂಫೀರಾ ವಾಲಿಕಾರ ಅವರು ತಿಳಿಸಿದರು.
ಬುಧವಾರರಂದು ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಾಲಯದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ತಾಳಿಕೋಟೆಯು ನೂತನ ತಾಲೂಕಾ ಕೇಂದ್ರವಾಗಿ ರಚನೆಯಾದ ಬಳಿಕ ಮೊದಲನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗುತ್ತಿರುವದರಿಂದ ಕನ್ನಡ ಮನಸ್ಸುಗಳನ್ನು ಒಂದೆಡೆ ಸೇರಿಸುವಂತಹ ವೈಭವ ಪೂರಿತವಾದ ಸಮ್ಮೇಳನ ನಡೆಸಲು ಸಿದ್ದತೆ ಕೈಗೊಳ್ಳಲಾಗುತ್ತಿದೆ ಸುಡಿ ಕನ್ನಡ, ಭಾಷೆ ಕನ್ನಡ ಎಂಬ ಮಾತಾಗದೇ ಮನಸ್ಸಿನ ಆಳದಲ್ಲಿ ಕನ್ನಡ ಪ್ರೇಮವನ್ನು ಹೆಚ್ಚಿಸುವಂತಹ ಸಮ್ಮೇಳನದ ಹಾದಿಯಲ್ಲಿ ಸಾಗಲಾಗುತ್ತಿದೆ ಈ ಸಮ್ಮೇಳನವು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ರೀತಿಯಲ್ಲಿ ನಡೆಸಲು ಎಲ್ಲ ಕನ್ನಡ ಮನಸ್ಸುಗಳು ಕೈಜೋಡಿಸುತ್ತಿರುವದು ಸಂತಸ ತಂದಿದೆ ಎಂದ ಜಿಲ್ಲಾ ಅಧ್ಯಕ್ಷ ಹಾಸೀಂಪೀರಾ ವಾಲಿಕಾರ ಅವರು ಅಂದು ಸಮ್ಮೇಳನದಲ್ಲಿ ಧ್ವಜಾರೋಹಣ, ಮೆರವಣಿಗೆಗೆ ಚಾಲನೆ, ಸಮ್ಮೇಳನದ ಉದ್ಘಾಟನಾ ಸಮಾರಂಭ, ನಡೆಸಲು ತಿರ್ಮಾನಿಸಲಾಗಿದೆ ಈ ಸಮ್ಮೇಳನದಲ್ಲಿ ಎಲ್ಲ ಕನ್ನಡ ಪ್ರೇಮಿಗಳಿಗೆ ಅವಕಾಶವನ್ನು ಕಲ್ಪಿಸಲು ಮಹಿಳಾ ಗೋಷ್ಠಿ, ಕವಿಗೋಷ್ಠಿ, ಜಾನಪದ ಗೋಷ್ಠಿ, ಒಳಗೊಂಡAತೆ ಇನ್ನಿತರ ಸಲಹೆಗಳನ್ನು ಮುಂದಿನ ಸಭೆಗಳಲ್ಲಿ ಪಡೆದುಕೊಂಡು ನಿರ್ಧರಿಸಲಾಗುತ್ತದೆ ಉದ್ಘಾಟನಾ ಸಮಾರಂಭದ ನಂತರ ಬಹಿರಂಗ ಸಭೆ ನಂತರ ಎಲ್ಲ ಗೋಷ್ಠಿಗಳ ಮುಕ್ತಾಯದ ನಂತರ ಸಮಾರೋಪ ಸಮಾರಂಭ, ಸಾಂಸ್ಕöÈತಿಕ ಉತ್ಸವ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳ ಪಟ್ಟಿ ಸಿದ್ದತೆಯಾಗುತ್ತಿದೆ ಎಂದು ಹೇಳಿದ ವಾಲಿಕಾರ ಅವರು ಉಪನ್ಯಾಸ ನೀಡುವರು, ಕಾವ್ಯ ವಾಚನ ಮಾಡುವವರು, ಜಾನಪದ ವಿದ್ವಾಂಸರು, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ತಾಳಿಕೋಟೆ ತಾಲೂಕಾ ಅಧ್ಯಕ್ಷ ರೇವಣಸಿದ್ದಪ್ಪ ಕೊಪ್ಪದ ಅವರಲ್ಲಿ ಹೆಸರು ನೊಂದಾಯಿಸಬೇಕು ಹಾಗೂ ಕನ್ನಡ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷರನ್ನು ಯಾರನ್ನು ಮಾಡಿದರೆ ಸೂಕ್ತವಾಗುತ್ತದೆ ಎಂಬುದರ ಕುರಿತು ಅಧ್ಯಕ್ಷರಾಗುವವರ ಸಾಹಿತ್ಯಾಭಿರುಚಿ, ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಇನ್ನಿತರ ಮಾಹಿತಿಯೊಂದಿಗೆ ತಾಲೂಕಾ ಅಧ್ಯಕ್ಷರ ಬಳಿ ಮಾಹಿತಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಕಸಾಪ ತಾಲೂಕ ಅಧ್ಯಕ್ಷ ರೇವಣಸಿದ್ದಪ್ಪ ಕೊಪ್ಪದ ಅವರು ಮಾತನಾಡಿ ಸಂಘ ಸಂಸ್ಥೆಗಳ, ಜನಪ್ರತಿನಿಧಿಗಳ, ಸಾಹಿತಿಗಳ, ಶಿಕ್ಷಕರ, ಕನ್ನಡಾಭಿಮಾನಿಗಳ, ವಿದ್ಯಾರ್ಥಿಗಳ ಸಹಯೋಗದೊಂದಿಗೆ ತಾಳಿಕೋಟೆ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಎಲ್ಲರನ್ನು ವಿಸ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿದೆ ಇದಕ್ಕೆ ಎಲ್ಲರೂ ಸಹಕರಿಸುತ್ತಿರುವದು ಸಮ್ಮೇಳನ ಸಿದ್ದತೆ ನಡೆಸಲು ಪರಿಷತ್ತಿನ ಸದಸ್ಯರಲ್ಲಿ ಇನ್ನಷ್ಟು ಹುಮ್ಮಸ್ಸು ಮೂಡಿಸಲು ಕಾರಣವಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಬ ಬಾಗೇವಾಡಿ ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ಆರ್.ಬಿ ದಾನಿ, ಬಿ.ಬಿ ಬಿರಾದಾರ, ಸಿದ್ದು ಶಿರಸಿ, ಜೈಬೀಮ ಮುತ್ತಗಿ, ಬಿ.ಆರ್ ಪೋಲಿಸ ಪಾಟೀಲ, ಸಂಗನಗೌಡ ಅಸ್ಕಿ, ಗಂಗಾಧರ, ಡಾ ನಜೀರ ಕೋಳ್ಯಾಳ, ಮೊದಲಾದವರು ಉಪಸ್ಥಿತರಿದ್ದರು.