ಮಕ್ಕಳಿಗೆ ಜವಬ್ದಾರಿ ಕೊಡಬೇಕು:ಮಿಮಿಕ್ರಿ ದಯಾನಂದ್
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.12: ಮಕ್ಕಳಿಗೆ ಕೇವಲ ಆಸ್ತಿ ಮಾಡಿಕೊಟ್ಟರೆ ಸಾಲದು. ಜವಾಬ್ದಾರಿಯನ್ನು ಕೊಡಬೇಕು. ಬದುಕನ್ನು ಎದುರಿಸುವ ಶಕ್ತಿಯನ್ನು ಮಕ್ಕಳಿಗೆ ನೀಡಬೇಕೆಂದು ಹಾಸ್ಯ ಕಲಾವಿದ ಮಿಮಿಕ್ರಿ ದಯಾನಂದ್ ಕರೆ ನೀಡಿದರು.
ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಚಿಣ್ಣರ ಜಾಣರ ಜಗುಲಿ ಮಕ್ಕಳ ಕಾರ್ಯಕ್ರಮದ ಸಾರಥ್ಯ ವಹಿಸಿ ಅವರು ಮಾತನಾಡಿದರು.
ಸಮಾಜದ ನಿರ್ವಹಣೆಯಲ್ಲಿ ಹೆಣ್ಣು ಮತ್ತು ಗಂಡಿನ ಪಾತ್ರಗಳನ್ನು ಕುರಿತು ನಡೆದ ಹರಟೆ ಕಾರ್ಯಕ್ರಮದಲ್ಲಿ ಮಕ್ಕಳ ಜೊತೆಗೂಡಿ ತಮ್ಮ ಅಭಿಪ್ರಾಯ ಮಂಡಿಸಿದ ದಯಾನಂದ್ ಪ್ರಕೃತಿಯಲ್ಲಿ ಯಾವುದೂ ಮೇಲಲ್ಲ, ಅಥವಾ ಯಾವುದೂ ಕೀಳಲ್ಲ. ಇದಕ್ಕೆ ಮಾನವ ಸಮಾಜವೂ ಹೊರತಲ್ಲ. ಹೆಣ್ಣು-ಗಂಡುಗೆಳೆರಡೂ ಸಂಸಾರ ಸಾಗರದಲ್ಲಿ ತಮ್ಮ ಜವಾಬ್ದಾರಿಯಿಂದ ಜೀವನದ ಪಯಣವನ್ನು ಮಾಡಿದರೆ ಮಾತ್ರ ಯಶಸ್ವಿ ಬದುಕು ಸಾಧ್ಯ ಎಂದರು. ಕುಟುಂಬದ ಅಗತ್ಯತೆಗಳನ್ನು ಅರಿತು ಎಲ್ಲವನ್ನೂ ತಂದು ಕೊಡುವವನು ತಂದೆ. ತಂದುಕೊಡುವವನು ತಂದೆಯಾದರೆ ಅದನ್ನು ಸಮರ್ಥವಾಗಿ ನಿರ್ವಹಣೆ ಮಾಡುವವಳು ಹೆಣ್ಣು. ಮನೆಯ ಅಡಿಪಾಯ ಕುಸಿಯದಂತೆ ತಂದೆ ನೋಡಿಕೊಂಡರೆ ಹೆಣ್ಣು ಕುಟುಂಬದ ಕಣ್ಣಾಗಿ ನಿಲ್ಲತ್ತಾಳೆ. ಪೆÇೀಷಕರು ಮಕ್ಕಳ ನಡುವೆ ಹೆಣ್ಣು ಗಂಡು ಎನ್ನುವ ಭಿನ್ನತೆಯನ್ನು ತೋರಿಸದೆ ಮಕ್ಕಳ ವಿಕಸನಕ್ಕೆ ದಾರಿ ದೀಪವಾಗಬೇಕೆಂದ ದಯಾನಂದ್ ಮಕ್ಕಳ ಹರಟೆ ಕಾರ್ಯದಲ್ಲಿ ಸಾರಥ್ಯ ವಹಿಸಿರುವುದು ನನಗೆ ಹೊಸ ಅನುಭವ ಎಂದರು.ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹರಟೆ ಕಾರ್ಯಕ್ರಮಕ್ಕೂ ಮುನ್ನ ಗುರುವಂದನೆ ಹಾಗೂ ಶಾಲಾ ಮಕ್ಕಳಿಂದ ತಮ್ಮ ತಮ್ಮ ತಂದೆತಾಯಿಗಳ ಪಾದಪೂಜೆ ಕಾರ್ಯಕ್ರಮ ನಡೆದವು. ದಾರ್ಮಿಕ ವಿಧಿ ವಿಧಾನಗಳು ಹಾಗೂ ಮಂತ್ರಘೋಷಗಳ ಮೂಲಕ ನಡೆದ ಪಾದಪೂಜೆ ಕಾರ್ಯಕ್ರಮದಲ್ಲಿ ನೂರಾರು ಮಕ್ಕಳ ಪೆÇೀಷಕರು ಭಾಗವಹಿಸಿದ್ದರು.
ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಮನ್ ಮುಲ್ ನಿರ್ದೇಶಕ ಡಾಲು ರವಿ, ಪುರಸಭಾ ಸದಸ್ಯರಾದ ಕೆ.ಬಿ.ಮಹೇಶ್, ಕೆ.ಎಸ್.ಸಂತೋಷ್ ಕುಮಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಬಿ.ಎ.ಮಂಜುನಾಥ್, ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿದ್ದರು.