ಕಸದ ರಾಶಿಯಲ್ಲಿ ಪೆÇಲೀಸ್ ಟೋಪಿಗಳು ಪತ್ತೆ!
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.12-ಕಸದ ರಾಶಿಯಲ್ಲಿ ಪೆÇಲೀಸ್ ಟೋಪಿಗಳು ಪತ್ತೆಯಾಗಿರುವ ಘಟನೆ ಚಾಮರಾಜನಗರದಲ್ಲಿ ಕಂಡು ಬಂದಿದೆ.
ಚಾಮರಾಜನಗರದ ಬುದ್ಧ ನಗರ ಬಡವಾಣೆಯ ರಸ್ತೆ ಬದಿ ಕಸದ ರಾಶಿಯಲ್ಲಿ ಮೂರು ಪೋಲಿಸ್ ಟೋಪಿಗಳು ಪತ್ತೆಯಾಗಿವೆ. ಕಾನ್ಸ್‍ಟೇಬಲ್‍ಗಳು ಧರಿಸುವ ಟೋಪಿಗಳು ಇವಾಗಿವೆ. ಟೋಪಿಗಳಲ್ಲಿ ನಂಬರ್ ಹಾಗೂ ಕರ್ನಾಟಕ ಪೆÇಲೀಸ್ ಚಿಹ್ನೆಯನ್ನು ತೆಗೆದು ಎಸೆಯಲಾಗಿದೆ.
ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ. ಪೆÇಲೀಸ್ ಟೋಪಿಗಳನ್ನು ಗೌರಯುತವಾದ ವಿಲೇವಾರಿ ಮಾಡಬೇಕಿತ್ತು ಎಂದು ಜನರು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕುರಿತು ಎಸ್‍ಪಿ ಡಾ. ಬಿ.ಟಿ.ಕವಿತಾ ಪ್ರತಿಕ್ರಿಯಿಸಿ, ಪೆÇಲೀಸ್ ಚಿಹ್ನೆಯ ಜೊತೆ ಟೋಪಿಗಳನ್ನು ಎಸೆದಿದ್ದರೆ ತಪ್ಪಾಗುತ್ತಿತ್ತು. ಗೌರವಯುತ ವಿಲೇವಾರಿ ಅಗತ್ಯವಿತ್ತು ಎಂದು ಅವರು ಸಹ ಅಭಿಪ್ರಾಯಪಟ್ಟಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.