ಐನೊಳ್ಳಿಯಲ್ಲಿ ಆರೋಗ್ಯಾಧಿಕಾರಿಗಳ ದಾಳಿಯ ಸುಳಿವು: ಕಾಲ್ಕಿತ್ತ ಕೋಲ್ಕತ್ತ ನಕಲಿ ವೈದ್ಯರು
ಚಿಂಚೋಳಿ,ಸೆ.೧೨- ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ಮಾಡುವಷ್ಟರಲ್ಲಿ ಹೇಗೋ ಮಾಹಿತಿ ತಿಳಿದುಕೊಂಡು ಅಧಿಕಾರಿಗಳ ತಂಡ ಹೋಗುವಷ್ಟರಲ್ಲಿ ಐನೋಳ್ಳಿಯ ನಕಲಿ ವೈದ್ಯರೆಂದು ಆರೋಪಿತರಾದವರು ತಮ್ಮ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಿಕೊಂಡು ಹೋಗಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸಿ ತನಿಖೆ ಕೈಗೊಂಡು ಮುಂದಿನ ಕಾನೂನಿನ ಕ್ರಮ ಜರುಗಿಸುತ್ತೇವೆ ಎಂದು ಅಧಿಕಾರಿಗಳು ದೂರುದಾರರಿಗೆ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ತಾಲ್ಲೂಕಿನಲ್ಲಿ ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ಯುವ ಕರ್ನಾಟಕ ಸಂಘಟನೆಯಿAದ ಪ್ರತಿಭಟನೆಯನ್ನು ಹಮ್ಮಿಕೊಂಡು ಮನವಿ ಪತ್ರವನ್ನು ನೀಡಿತ್ತು. ನಿನ್ನೆ ಯುವ ಕರ್ನಾಟಕ ವೇದಿಕೆ ತಾಲೂಕಾಧ್ಯಕ್ಷರಾದ ಸಚಿನ ಚೌವ್ಹಾಣರ ಮಾಹಿತಿ ಮತ್ತು ದೂರಿನನ್ವಯದ ಮೇಲೆ ಕಾರ್ಯಪ್ರವೃತರಾದ ಇಲಾಖೆಯ ಆರೋಗ್ಯಾಧಿಕಾರಿ ಡಾ. ಗಫಾರ್ ತಾಲ್ಲೂಕಿನ ಐನೊಳ್ಳಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಖಾಸಗಿ ಆಸ್ಪತ್ರೆಗೆ ದಾಳಿ ಮಾಡಿದ್ದು, ದಾಳಿ ಮಾಡುತ್ತಿದ್ದಂತೆಯೇ ಅಲ್ಲಿನ ಕೊಲ್ಕತ್ತಾ ಮೂಲದ ನಕಲಿ ವೈದ್ಯ ಕಾಲ್ಕಿತ್ತಿರುವ ಘಟನೆ ನಡೆದಿದೆ. ಒಟ್ಟಾರೆಯಾಗಿ ಗ್ರಾಮದಲ್ಲಿ ಕಲ್ಕತ್ತಾ ಮೂಲದ ನಕಲಿ ವೈದ್ಯರು ಸೇರಿ,ಶಮಶಾಬಾದ ಹಾಗೂ ಸ್ಥಳೀಯ ವೈದ್ಯ ಸೇರಿ ಮೂರು ನಕಲಿ ವೈದ್ಯರು ಮತ್ತು ಅವರಿಗೆ ಸೇರಿರುವ ಮೂರು ಆಸ್ಪತ್ರೆಗಳಿದ್ದು ಇವರೆಲ್ಲರೂ ಸೇರಿ ಜನರ ಜೀವದ ಜೊತೆಗೆ ಆಟವಾಡುತ್ತಿದ್ದಾರೆ ಇಂತಹವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಸಚಿನ ಚೌವ್ಹಾಣ ಆಗ್ರಹಿಸಿದ್ದಾರೆ.
ಇನ್ನು ದಾಳಿಯ ಮಾಹಿತಿ ತಿಳಿದುಕೊಂಡು ಕಾಲ್ಕಿತ್ತಿರುವ ವೈದ್ಯರ ದಾಖಲೆಪತ್ರಗಳನ್ನು ಟಿ.ಎಚ್.ಓ ಗಫಾರ್ ರವರು ಈ ಖಾಸಗಿ ಆಸ್ಪತ್ರೆಗಳನ್ನು ನಡೆಸುತ್ತಿರುವ ವೈದ್ಯರಿಗೆ ಕರೆ ಮಾಡಿ ಮಾಹಿತಿ ಕೇಳಿದಾಗ ನಮ್ಮ ಹತ್ತಿರ ಯಾವುದೇ ಕಾಗದ ಪತ್ರಗಳು ಇರುವುದಿಲ್ಲ ಎಂದು ನೇರವಾಗಿ ಉತ್ತರಿಸಿದ್ದಾರೆ ಎಂದು ಸಚಿನ ಚೌವ್ಹಾಣ ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ.
ಈ ಸಂಬAಧ ತಾಲ್ಲೂಕು ಅಧಿಕಾರಿ ಡಾ.ಗಫಾರ್ ಪ್ರತಿಕ್ರಿಯಿಸಿದ್ದು, ನಾವು ದಾಳಿ ಮಾಡುವಷ್ಟರಲ್ಲಿ ಹೇಗೋ ಮಾಹಿತಿ ತಿಳಿದುಕೊಂಡು ನಾವು ಹೋಗುವಷ್ಟರಲ್ಲಿ ನಕಲಿ ವೈದ್ಯರೆಂದು ಆರೋಪಿತರಾದವರು ತಮ್ಮ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಿಕೊಂಡು ಹೋಗಿದ್ದಾರೆ.ಅವರನ್ನು ವಿಚಾರಣೆಗೆ ಒಳಪಡಿಸಿ ತನಿಖೆ ಕೈಗೊಂಡು ಮುಂದಿನ ಕಾನೂನಿನ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಯುವ ಕರ್ನಾಟಕ ವೇದಿಕೆಯ ಹೀರಾ ಪವಾರ್,ಗುರುನಾಥ ರಾಠೋಡ, ಆಕಾಶ, ವಿಕ್ರಮ ಚೌವ್ಹಾಣ ಸೇರಿದಂತೆ ಮುಂತಾದವರು ಇದ್ದರು.