ಸ್ಥಳೀಯ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸ ನಿರಂತರವಾಗಿರಬೇಕು: ಬಿಇಓ ಗುರುಲಿಂಗಯ್ಯ
ಸಂಜೆವಾಣಿ ವಾರ್ತೆ
ಹನೂರು ಸೆ 12 :– ಸ್ಥಳೀಯ ಕಲಾ ಪ್ರಕಾರಗಳಾದ ರಾಗಿ ಕಲ್ಲು ಬೀಸುಪದ, ತಂಬೂರಿ ಪದ, ಹಾಗೂ ಇನ್ನಿತರೆ ನಮ್ಮ ಭಾಗದ ಮೂಲ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸ ನಿರಂತರವಾಗಿ ಸಾಗ ಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗುರು ಲಿಂಗಯ್ಯ ಅವರು ಅಭಿಪ್ರಾಯಪಟ್ಟರು.
ಹನೂರು ತಾಲೂಕಿನ ಬಂಡಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಭಾಗದ ಸಾಂಸ್ಕೃತಿಕ ರಾಯಭಾರಿಗಳಾದ ಮಹದೇಶ್ವರರು, ಮಂಟೇಸ್ವಾಮಿ, ಸಿದ್ದಪ್ಪಾಜಿ ರವರ ಕುರಿತಾದ ಜಾನಪದ ಕಾವ್ಯಗಳ ಕುರಿತು ಇಂದಿನ ಮಕ್ಕಳಿಗೆ ತಿಳಿಸಿ ಕೊಡುವ ಅವಶ್ಯಕತೆ ಇದೆ.
ನಮ್ಮ ನಾಡು ಜಿಲ್ಲೆಯ ಐತಿಹಾಸಿಕವಾಗಿ ಮಹತ್ವವಾದ ತನ್ನದೇ ಕಲೆ ಸಂಸ್ಕೃತಿ ಸಾಹಿತ್ಯ ಗೌರವಿಸಬೇಕು ಇದರ ಬಗ್ಗೆ ತಿಳಿದು ಕೊಳ್ಳುವ ಮೂಲಕ ಮಕ್ಕಳು ಕಲಿತು ಮುಂದಿನ ಪೀಳಿಗೆಗೆ ಇಂತಹ ಅತ್ಯುತ್ತಮ ಸಂಸ್ಕೃತಿಯನ್ನು ನೀಡಬೇಕು ಎಂದರು. ಇದೆ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ಲಸ್ಟರ್ ನ ವಿವಿಧ ಶಾಲೆಯ ಮಕ್ಕಳಿಗೆ ಶಾಲೆಯ ಶಿಕ್ಷಕರ ಜೊತೆ ಪ್ರಶಸ್ತಿ ಪತ್ರ ಫಲಕ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಮಲ್ಲು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯ ಮುನಿಯ ನಾಯಕ, ಸಿ.ಆರ್.ಪಿ ದೊಡ್ಡ ಸಿದ್ದಶೆಟ್ಟಿ, ಜೆ.ಎಸ್.ಎಸ್ ಶಾಲೆಯ ಮುಖ್ಯ ಶಿಕ್ಷಕರು ವಿವಿಧ ಶಾಲೆಯ ಶಿಕ್ಷಕರು ಮಕ್ಕಳು ಹಾಜರಿದ್ದರು.