ಆಲಮೇಲ ತಹಶೀಲ್ದಾರರವರಿಗೆ ಬೀಳ್ಕೋಡುಗೆ
ಆಲಮೇಲ :ಸೆ.೧೨: ನೂತನ ಆಲಮೇಲ ತಾಲೂಕಿನ ತಹಶೀಲ್ದಾರ ಸುರೇಶ ಚಾವಲರ್ ವರ್ಗಾವಣೆ ಹೊಂದಿದ ಪ್ರಯುಕ್ತ ತಾಲೂಕಿನ ಅಧಿಕಾರಿಗಳು, ಗ್ರಾಮದ ಗಣ್ಯರು ಸನ್ಮಾನಿಸಿ ಗೌರವಿಸಿದರು.ನೂತನವಾಗಿ ಆಗಮಿಸಿರುವ ತಹಶೀಲ್ದಾರ ವಿಜಯಕುಮಾರ ಇವರಿಗೆ ಸ್ವಾಗತಿಸಿ ಬರಮಾಡಿಕೊಂಡರು.
ಬಳಿಕ ವರ್ಗಾವಣೆಯಾದ ತಹಶೀಲ್ದಾರ ಸುರೇಶ ಚಾವಲರ್ ನೂತನ ತಹಶೀಲ್ದಾರ ವಿಜಯಕುಮಾರ ಅವರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದ್ದು ನೂತನ ತಾಲೂಕು ಆಗಿದ್ದರಿಂದ ಅತ್ಯಂತ ಪರಿಶ್ರಮದಿಂದ ಇಲ್ಲಿನ ಸಿಬ್ಬಂದಿಗಳು ನನಗೆ ಹೆಗಲಿಗೆ ಹೆಗಲು ಕೊಟ್ಟು ಇಲ್ಲಿನ ಜನರ ಸಹಕಾರದಿಂದ ಉತ್ತವiವಾದ ಕಾರ್ಯನಿರ್ವಹಿಸಿದ್ದು ನನಗೆ ಸಂತಸ ತಂದಿದೆ, ಎಂದು ನನಗೆ ಕೊಟ್ಟ ಸಹಕಾರವನ್ನು ನೂತನ ತಹಶೀಲ್ದಾರರಿಗೆ ಸಹಕಾರ ಮಾಡಿ ಎಂದು ಆಶಿಸುತ್ತೇನೆ. ನನ್ನ ಮೇಲೆ ಇಟ್ಟ ವಿಶ್ವಾಸಕ್ಕೆ ಎಲ್ಲಾ ಅಧಿಕಾರಿ ವರ್ಗಕ್ಕೆ ಋಣಿಯಾಗಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ವೈದ್ಯರಾದ ಡಾ, ಪತ್ತಾರ, ಪಿ.ಎಸ್.ಐ ಅರವಿಂದ ಅಂಗಡಿ, ಕಂದಾಯ ನಿರೀಕ್ಷಕ ಅತ್ತಾರ , ಶಿಕ್ಷಣ ಪ್ರೇಮಿ ಶಂಕರ್, ಹಲವಾರು ಅಧಿಕಾರಿಗಳು ಗ್ರಾಮದ ಗಣ್ಯರು, ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪೋಟೋ:೦೨ ತಾಲೂಕಿನ ಅಧಿಕಾರಿಗಳು, ಗ್ರಾಮದ ಗಣ್ಯರು ಸನ್ಮಾನಿಸಿ ಸತ್ಕರಿಸಿದರು.