ಚುನಾವಣೆಯ ತಕಾರರು ಅರ್ಜಿ ಸೆ.23ಕ್ಕೆ ವಿಚಾರಣೆ ಮುಂದೂಡಿಕೆ
ಕೋಲಾರ,ಸೆ,೧೨-ಮಾಲೂರು ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯದ ದೃಶ್ಯವಳಿಗಳನ್ನು ಚಿತ್ರೀಕರಿಸಿ ಶೇಖರಿಸಿಟ್ಟಿರುವ ಹಾರ್ಡ್ ಡಿಸ್ಕ್ ಅನ್ನು ಮೇ.ಐಕೀಯಾ ಬಿಸಿನೆಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಪಡೆಯಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣ ಪತ್ರ ಸಲ್ಲಿಸುವಂತೆ ಕೋಲಾರ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ವೆಂಕಟರಾಜು ಅವರಿಗೆ ರಾಜ್ಯ ಉಚ್ಚನ್ಯಾಯಾಲಯ ಸೂಚಿಸಿದೆ.
ವಿಧಾನಸಭೆ ಚುನಾವಣೆಯಲ್ಲಿ ಕೋಲಾರದ ಮಾಲೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಕೆ.ವೈ.ನಂಜೇಗೌಡರ ವಿರುದ್ದ ಬಿಜೆಪಿಯಿಂದ ಸ್ವರ್ಧಿಸಿದ್ದ ಪರಾಜಿತ ಅಭ್ಯರ್ಥಿ ಕೆ.ಎಸ್.ಮುಂಜುನಾಥ್ ಗೌಡ ಅವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಆರ್.ದೇವದಾಸ್ ಅವರಿದ್ದ ಪೀಠವೂ ಈ ಸೂಚನೆಯ ಆದೇಶ ನೀಡಿದೆ.
ಮಾಲೂರು ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯದ ಸಂಪೂರ್ಣ ವಿಡಿಯೋ ಚಿತ್ರಕರೀಸಿರುವ ಹಾರ್ಡ್ ಡಿಸ್ಕ್ ನಾಪತ್ತೆಯಾಗಿರುವ ಬಗ್ಗೆ ವಿವರಣೆ ನೀಡಿ ಪ್ರಮಾಣ ಪತ್ರ ಸಲ್ಲಿಸುವಂತೆ ಕಳೆದ ವಿಧಾನ ಸಣೆ ಚುನಾವಣೆಯ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಾಗಿದ್ದ ವೆಂಕಟರಾಜ ಅವರಿಗೆ ಆ೨೭ ರಂದು ರಾಜ್ಯ ಉಚ್ಚಾನ್ಯಾಯಾಲಯವು ಸೂಚಿಸಿತ್ತು.
ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದ ವೆಂಕಟರಾಜು ಅವರ ಪರ ವಕೀಲರು ಮೆ. ಐಕಿಯಾ ಬಿಸಿನೆಸ್ ಸಲ್ಯೂಷನ್ಸ್ ಪ್ರವೇಟ್ ಲಿಮಿಟೆಡ್ ಎಂಬ ಏಜೆನ್ಸಿಗೆ ಮತ ಎಣಿಕೆ ಕಾರ್ಯದ ದೃಶ್ಯವಳಿಗಳನ್ನು ಚಿತ್ರೀಕರಣ ಮಾಡಲು ಗುತ್ತಿಕೆಯನ್ನು ನೀಡಲಾಗಿತ್ತು. ಅವರ ಚಿತ್ರೀಕರಿಸಿ ವಿಡೀಯೋ ಒಳಗೊಂಡ ಹಾರ್ಡ್‌ಡಿಸ್ಕ್ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನೀಡಿರುವುದಾಗಿ ತಿಳಿಸಿ ಸ್ವೀಕೃತಿಯ ಪತ್ರ ಪಡೆದಿರುವುದನ್ನು ವಿವರಿಸಿದ್ದಾರೆ ಅದರೆ ಅವರು ಪಡೆದಿರುವ ಸ್ವೀಕೃತಿಯ ಪ್ರತಿಯ ದಾಖಲೆ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ.
ನ್ಯಾಯಪೀಠವು ಹಾಡ್ ಡಿಸ್ಟ್ ವಿತರಿಸಿರುವ ಏಜೇನ್ಸಿಗೆ ಜಿಲ್ಲಾ ಚುನಾವಣಾಧಿಕಾರಿಗಳಿಂದ ಡಿಸ್ಕ್ ಪಡೆದಿರುವ ಸ್ವೀಕೃತಿಯ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸೊಚಿಸಿ ಜೂತೆಗೆ ಜಿಲ್ಲಾಧಿಕಾರಿಗಳಾಗಿದ್ದ ವೆಂಕಟರಾಜು ಅವರಿಗೆ ಹೊಸದಾಗಿ ಪ್ರಮಾಣ ಪತ್ರ ಸಲ್ಲಿಸ ಬೇಕೆಂದು ಸೂಚಿಸಿ ವಿಚಾರಣೆಯನ್ನು ಸೆ,೨೩ಕ್ಕೆ ಮುಂದೂಡಿದೆ ಎಂದು ವರದಿಯಾಗಿದೆ.