ಮಾನವ ಸರಪಳಿ ಜಿಲ್ಲೆಯಲ್ಲಿ ರೂಟ್‌ಮ್ಯಾಪ್ ಅಂತಿಮ
ಕೋಲಾರ, ಸೆ,೧೨-ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ ೧೫ ರಂದು ಕೋಲಾರ ಜಿಲ್ಲೆಯಲ್ಲಿ ನಡೆಯಲಿರುವ ಮಾನವ ಸರಪಳಿ ಕಾರ್ಯಕ್ರಮಕ್ಕೆ ರೂಟ್ ಮ್ಯಾಪನ್ನು ಅಂತಿಮಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದ್ದಾರೆ.
ಅಂದು ಕೋಲಾರ ಜಿಲ್ಲೆಯಲ್ಲಿ ಸುಮಾರು ೫೧ ಕಿಲೋ ಮೀಟರ್‌ವರೆಗೆ ಮಾನವ ಸರಪಳಿ ನಿರ್ಮಿಸಲು ಅವಕಾಶವಿರುತ್ತದೆ. ಕೋಲಾರ ಜಿಲ್ಲೆಯ ಚಿಕ್ಕಕೊಂಡಹಳ್ಳಿ ಗ್ರಾಮದಿಂದ ಕೆ.ಟಿ.ಬಿ ಫಾರ್ಮ್‌ವರೆಗೆ ೧.ಕಿ.ಮೀ., ಕೆ.ಟಿ.ಬಿ ಫಾರ್ಮ್‌ನಿಂದ ಬಿ.ಕೆ.ಎನ್ ಹೋಟೆಲ್ ವರೆಗೆ ೧.೩ಕಿ.ಮೀ., ಬಿ.ಕೆ.ಎನ್ ಹೋಟಲ್‌ನಿಂದ ಅಂಜುಹಾಲೋಬ್ರಿಕ್ಸ್ ವರೆಗೆ ೧ಕಿ.ಮೀ., ಅಂಜುಹಾಲೋಬ್ರಿಕ್ಸ್ ನಿಂದ ಕ್ಯಾಲನೂರು ಕ್ರಾಸ್‌ನ ಟೇಕ್ಸ್‌ಟ್ರೆಂಡ್ಸ್‌ವರೆಗೆ ೧ಕಿ.ಮೀ., ಕ್ಯಾಲನೂರು ಕ್ರಾಸ್‌ನ ಟೇಕ್ಸ್‌ಟ್ರೆಂಡ್ಸ್‌ನಿಂದ ಎಂ.ಎನ್.ಎಸ್. ಇಂಡಸ್ಟ್ರೀಸ್ ವರೆಗೆ ೧.೪ಕಿ.ಮೀ., ಎಂ.ಎಸ್.ಎಸ್. ಇಂಡಸ್ಟ್ರೀಸ್ ನಿಂದ ವಾಲ್ಮೀಕಿ ಭವನವರೆಗೆ ೧ಕಿ.ಮೀ., ವಾಲ್ಮೀಕಿ ಭವನದಿಂದ ವೇಮಗಲ್ ಕೈಗಾರಿಕ ಕ್ಷೇತ್ರ ಆರ್.೧೯ ವರೆಗೆ ೧.೧ಕಿ.ಮೀ., ವೇಮಗಲ್ ಕೈಗಾರಿಕ ಕ್ಷೇತ್ರ ಆರ್.೧೯ ನಿಂದ ಮಿಟ್ಸುಬಿಷಿ ಆರ್.೨೩ ವರೆಗೆ ೧.೧ಕಿ.ಮೀ., ಮಿಟ್ಸುಬಿಷಿ ಆರ್.೨೩ ನಿಂದ ವೇಮಗಲ್ ನಾಡಕಚೇರಿವರೆಗೆ ೧.೨ಕಿ.ಮೀ., ವೇಮಗಲ್ ನಾಡಕಚೇರಿಯಿಂದ ವೇಮಗಲ್ ಬಸ್ ನಿಲ್ದಾಣದವರೆಗೆ ೦.೫ಕಿ.ಮೀ.,ವೇಮಗಲ್ ಬಸ್ ನಿಲ್ದಾಣದಿಂದ ಭಾರತ್ ಪೆಟ್ರೋಲ್‌ವರೆಗೆ ೧ಕಿ.ಮೀ., ಭಾರತ್ ಪೆಟ್ರೋಲ್‌ನಿಂದ ತಿರುಮಲ ಲೇಔಟ್ ವರೆಗೆ ೧ಕಿ.ಮೀ, ತಿರುಮಲ ಲೇಔಟ್‌ನಿಂದ ಐ.ಕ್ಯೂ.ಎಫ್. ಪುಡ್ ಪ್ರೈವೇಟ್ ಲಿಮಿಟೆಡ್‌ವರೆಗೆ ೧ಕಿ.ಮೀ, ಐ.ಕ್ಯೂ.ಎಫ್. ಪುಡ್ ಪ್ರೈವೇಟ್ ಲಿಮಿಟೆಡ್‌ನಿಂದ ಪೂರ್ವಿ ಹೋಟೆಲ್ ವರೆಗೆ ೧ಕಿ.ಮೀ, ಪೂರ್ವಿ ಹೋಟೆಲ್‌ನಿಂದ ಮೇಡಿಹಾಳ ಅಂದ್ರಹಳ್ಳಿ ವರೆಗೆ ೧ಕಿ.ಮೀ, ಮೇಡಿಹಾಳ ಅಂದ್ರಹಳ್ಳಿನಿಂದ ಎಂ.ಜಿ. ಹೋಟೆಲ್‌ವರೆಗೆ ೧ಕಿ.ಮೀ, ಎಂ.ಜಿ. ಹೋಟೆಲ್‌ನಿಂದ ಬೆಸ್ಕಾಂ ಪವರ್‌ಗ್ರೀಡ್‌ವರೆಗೆ ೦.೫ಕಿ.ಮೀ, ಬೆಸ್ಕಾಂ ಪವರ್‌ಗ್ರೀಡ್‌ನಿಂದ ತಲಗುಂದ ಗೇಟ್‌ವರೆಗೆ ೧.೬ಕಿ.ಮೀ, ತಲಗುಂದ ಗೇಟ್‌ನಿಂದ ರೋಷನ್ ಪೋಮ್ಸ್‌ವರೆಗೆ ೧.೩ಕಿ.ಮೀ, ರೋಷನ್ ಪೋಮ್ಸ್‌ನಿಂದ ವೀರಾಂಜನೇಯಸ್ವಾಮಿ ದೇವಸ್ಥಾನದವರೆಗೆ ೧.೩ಕಿ.ಮೀ, ವೀರಾಂಜನೇಯಸ್ವಾಮಿ ದೇವಸ್ಥಾನದನಿಂದ ಸೀಪುರಗೇಟ್‌ವರೆಗೆ ೧ಕಿ.ಮೀ, ಸೀಪುರಗೇಟ್‌ನಿಂದ ಹೊಗರಿ ಬಸ್ ನಿಲ್ದಾಣವರೆಗೆ ೦.೫ಕಿ.ಮೀ
, ಹೊಗರಿ ಬಸ್ ನಿಲ್ದಾಣದಿಂದ ರಾಮಣ್ಣಮಿಲ್‌ವರೆಗೆ ೧ಕಿ.ಮೀ, ರಾಮಣ್ಣಮಿಲ್‌ನಿಂದ ಅಲಿ ಪಬ್ಲಿಕ್ ಸ್ಕೂಲ್‌ವರೆಗೆ ೧ಕಿ.ಮೀ, ಅಲಿ ಪಬ್ಲಿಕ್ ಸ್ಕೂಲ್‌ನಿಂದ ರೈಲ್ವೇ ಬ್ರೀಡ್ಜ್‌ವರೆಗೆ ೦.೫ಕಿ.ಮೀ, ರೈಲ್ವೇ ಬ್ರಿಡ್ಜ್‌ನಿಂದ ಪೆಟ್ರೋಲ್ ಪಂಪ್‌ವರೆಗೆ ೧ಕಿ.ಮೀ, ಪೆಟ್ರೋಲ್ ಪಂಪ್‌ನಿಂದ ಜಿಲ್ಲಾ ಪಂಚಾಯತ್‌ವರೆಗೆ ೦.೫ಕಿ.ಮೀ, ಜಿಲ್ಲಾ ಪಂಚಾಯತ್‌ನಿಂದ ಮೇಕ್ರಿ ಸರ್ಕಲ್‌ವರೆಗೆ ೧ಕಿ.ಮೀ, ಮೇಕ್ರಿ ಸರ್ಕಲ್‌ನಿಂದ ಅಂಜನೇಯಸ್ವಾಮಿ ದೇವಸ್ಥಾನದವರೆಗೆ ೧ಕಿ.ಮೀ, ಅಂಜನೇಯಸ್ವಾಮಿ ದೇವಸ್ಥಾನದಿಂದ ಬಂಗಾರಪೇಟೆ ವೃತ್ತದವರೆಗೆ ೦.೫ಕಿ.ಮೀ, ಬಂಗಾರಪೇಟೆ ವೃತ್ತದಿಂದ ಮಹಿಳಾ ಸಮಾಜ ಸ್ಕೂಲ್‌ವರೆಗೆ ೧ಕಿ.ಮೀ, ಮಹಿಳಾ ಸಮಾಜ ಸ್ಕೂಲ್‌ನಿಂದ ಅಮೇರಹಳ್ಳಿ ಲೇಕ್‌ವರೆಗೆ ೧ಕಿ.ಮೀ, ಅಮೇರಹಳ್ಳಿ ಲೇಕ್‌ನಿಂದ ಹೋಟೆಲ್ ದಕ್ಷಿಣ್ ಸ್ವಾದ್‌ವರೆಗೆ ೧ಕಿ.ಮೀ, ಹೋಟೆಲ್ ದಕ್ಷಿಣ್ ಸ್ವಾದ್‌ನಿಂದ ಸೇಂಟನ್ಸ್ ಸ್ಕೂಲ್‌ವರೆಗೆ ೧ಕಿ.ಮೀ, ಸೇಂಟನ್ಸ್ ಸ್ಕೂಲ್‌ನಿಂದ ಮಾರುಕಟ್ಟೆ ಬ್ರೀಡ್ಜ್‌ವರೆಗೆ ೦.೫ಕಿ.ಮೀ,
ಮಾರುಕಟ್ಟೆ ಬ್ರೀಡ್ಜ್‌ನಿಂದ ಕ್ಲಾಕ್‌ಟವರ್‌ವರೆಗೆ ೧ಕಿ.ಮೀ, ಕ್ಲಾಕ್‌ಟವರ್‌ನಿಂದ ಸಹಿ ಎಕ್ಸ್‌ಪೋರ್ಟ್ಸ್‌ವರೆಗೆ ೧ಕಿ.ಮೀ, ಸಹಿ ಎಕ್ಸ್‌ಪೋರ್ಟ್ಸ್‌ನಿಂದ ಬೆಟ್ಟನಿ ಬ್ರೀಡ್ಜ್‌ವರೆಗೆ ೦.೫ಕಿ.ಮೀ, ಬೆಟ್ಟನಿ ಬ್ರೀಡ್ಜ್‌ನಿಂದ ಎಚ್.ಪಿ. ಪೆಟ್ರೋಲ್ ಪಂಪ್‌ವರೆಗೆ ೧ಕಿ.ಮೀ, ಎಚ್.ಪಿ. ಪೆಟ್ರೋಲ್ ಪಂಪ್‌ನಿಂದ ಪೆಟ್ರೋಲ್ ಸ್ಟೇಷನ್‌ವರೆಗೆ ೧ಕಿ.ಮೀ, ಪೆಟ್ರೋಲ್ ಸ್ಟೇಷನ್‌ನಿಂದ ಸಿ.ಎನ್.ಜಿವರೆಗೆ ೧ಕಿ.ಮೀ, ಸಿ.ಎನ್.ಜಿಯಿಂದ ಚುಂಚದೇನಹಳ್ಳಿ ಗೇಟ್‌ವರೆಗೆ ೧ಕಿ.ಮೀ, ಚುಂಚದೇನಹಳ್ಳಿ ಗೇಟ್‌ದಿಂದ ಸ್ವರ್ಣ ಗೃಹಾಪ್ತ್‌ವರೆಗೆ ೧.೧ಕಿ.ಮೀ, ಸ್ವರ್ಣ ಗೃಹಾಪ್ತ್‌ದಿಂದ ರೇಸ್ಟೋ ಕಿಂಗ್ ಹೋಟೆಲ್‌ವರೆಗೆ ೧ಕಿ.ಮೀ, ರೇಸ್ಟೋ ಕಿಂಗ್ ಹೋಟೆಲ್‌ನಿಂದ ಪಲ್ಕಿ ಹೋಟೆಲ್‌ವರೆಗೆ ೧ಕಿ.ಮೀ, ಪಲ್ಕಿ ಹೋಟೆಲ್‌ದಿಂದ ಪ್ರಕಾಶ್ ಕಾರ್ಪೋ ವರೆಗೆ ೧ಕಿ.ಮೀ,
ಪ್ರಕಾಶ್ ಕಾರ್ಪೋನಿಂದ ಸಣ್ಣ ನೀರಾವರಿ ಕಚೇರಿಯವರೆಗೆ ೧ಕಿ.ಮೀ, ಸಣ್ಣ ನೀರಾವರಿ ಕಚೇರಿಯಿಂದ ಹನುಮಾನ್ ಇಂಡಸ್ಟ್ರೀಸ್‌ವರೆಗೆ ೧ಕಿ.ಮೀ, ಹನುಮಾನ್ ಇಂಡಸ್ಟ್ರೀಸ್‌ನಿಂದ ಹೋಟೆಲ್‌ವರೆಗೆ ೧ಕಿ.ಮೀ, ಹೋಟೆಲ್‌ನಿಂದ ಹೋಟೆಲ್ ರೇಡಿಯೇಷನ್‌ವರೆಗೆ ೧ಕಿ.ಮೀ, ಹೋಟೆಲ್ ರೇಡಿಯೇಷನ್‌ನಿಂದ ಪೆಟ್ರೋಲ್ ಪಂಪ್‌ವರೆಗೆ ೧ಕಿ.ಮೀ, ಪೆಟ್ರೋಲ್ ಪಂಪ್‌ನಿಂದ ಗೋಕುಲ್ ಹೋಟೆಲ್‌ವರೆಗೆ ೧ಕಿ.ಮೀ, ಗೋಕುಲ್ ಹೋಟೆಲ್‌ನಿಂದ ರೋಡ್ ಕ್ರಾಸ್‌ವರೆಗೆ ೧ಕಿ.ಮೀ, ರೋಡ್ ಕ್ರಾಸ್‌ನಿಂದ ರಾಮಸಂದ್ರ ಚೇಕ್‌ಪೋಸ್ಟ್‌ವರೆಗೆ ೧ಕಿ.ಮೀ, ರಾಮಸಂದ್ರ ಚೇಕ್‌ಪೋಸ್ಟ್‌ನಿಂದ ವೆಂಕಟಾಪುರ ಅಥವಾ ಗಂಗಾಪುರದವರೆಗೆ ೧ಕಿ.ಮೀ. ಸೇರಿ ಒಟ್ಟು ೫೧ ಕಿಲೋ ಮೀಟರ್ ಮಾನವ ಸರಪಳಿಯನ್ನು ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ರಚಿಸಲಾಗುವುದು. ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.