ಸೆ,೧೫ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ಕೋಲಾರ, ಸೆ,೧೨-ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ೨೦೦೭ ರಲ್ಲಿ ಅಂಗಿಕರಿಸಿದ ನಿರ್ಣಯದಂತೆ ಪ್ರತಿ ವರ್ಷದ ಸೆಪ್ಟೆಂಬರ್ ೧೫ ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಯಾವುದೇ ಜಾತಿ, ಧರ್ಮ, ಮತಗಲ್ಲೇನ್ನದೆ ಸ್ವಯಂ ಪ್ರೇರಿತರಾಗಿ ಮಾನವ ಸರಪಳಿಯಲ್ಲಿ ಭಾಗವಹಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಅವರು ತಿಳಿಸಿದರು.
ನಗರದ ಮಹರ್ಷಿ ವಾಲ್ಮೀಕಿ ಭವನ ಆರ್.ಜಿ ಲೇಔಟ್ ಬಡವಣೆಯಲ್ಲಿ. ಹಮ್ಮಿಕೊಳ್ಳಾಲಾಗಿದ್ದು, ಕರ್ನಾಟಕದ ಉತ್ತರ ತುದಿ ಬೀದರ ಜಿಲ್ಲೆಯಿಂದ, ದಕ್ಷಿಣದ ತುದಿ ಚಾಮರಾಜ ನಗರ ಜಿಲ್ಲೆಯವರಗೆ ವಿಭಿನ್ನವಾಗಿ ಏಕಕಾಲದಲ್ಲಿ ಮಾನವ ಸರಪಳಿಯನ್ನು ರಚಿಸುವ ಮೂಲಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸುವ ಸಂಬಂಧ ಕೋಲಾರ ಜಿಲ್ಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು, ಕೋಲಾರ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಹೆಚ್.ಕ್ರಾಸ್‌ನಿಂದ ಕೋಲಾರದ ರಾಮಸಂದ್ರ ಟೋಲ್‌ಗೇಟ್ ವರೆಗೂ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತೀರ್ಮಾನಿಸಲಾಗಿರುತ್ತದೆ.
ಸಭೆಗೆ ಜಿಲ್ಲೆಯ ಎಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದ ಮುಖಂಡರುಗಳು ಅಧ್ಯಕ್ಷರು, ಉಪಾಧ್ಯಕ್ಷರು, ಮತ್ತು ಪದಾಧಿಕಾರಿಗಳು, ಜಿಲ್ಲೆಯ ಎಲ್ಲಾ ಕನ್ನಡ ಪರ ಸಂಘಟನೆಗಳ, ಮುಖಂಡರುಗಳು, ಜಿಲ್ಲೆಯ ಎಲ್ಲಾ ಸಮುದಾಯಗಳ ಸಂಘಟನೆಗಳ ಮುಖಂಡರುಗಳು, ಜಿಲ್ಲೆಯ ಎಲ್ಲಾ ಪ್ರಗತಿಪರ ಸಂಘಟನೆಗಳ ಮುಖಂಡರುಗಳು, ಕೋಲಾರ ನಗರದ ಎಲ್ಲಾ ವಾಹನ ಚಾಲಕರ ಸಂಘಟನೆಗಳ ಮುಖಂಡರುಗಳು. ಹಾಗೂ ಜಿಲ್ಲೆಯ ಎಲ್ಲಾ ರೈತಪರ ಸಂಘಟನೆಗಳು, ರೈತರ ಉತ್ಪಾಧಕ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು, ರೆಡ್ ಕ್ರಾಸ್ ಸಂಸ್ಥೆ ಮತ್ತು ಇತರೆ ಸಂಘಟನೆಗಳ ಮುಖಂಡರುಗಳು, ಸಭೆಗೆ ಆಗಮಿಸಿ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ವೆಂಕಟಚಲಪತಿ ಹಾಗೂ ಮಾಲೂರು ವೆಂಕಟರಾಮ, ಜಿಲ್ಲೆಯ ಆರ್.ಟಿ.ಒ ಅಧಿಕಾರಿ ಯೋಜಕೇಶಪ್ಪ, ಜಿಲ್ಲಾ ಹಿರಿಯ ದಲಿತ ಮುಂಖಡ ಚಂದ್ರಶೇಖರ್, ಭೀಮಸೇನೆಯ ರಾಜ್ಯಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ದಲಿತ ಮಹಾಸೇನೆಯ ಕದಾರಿಪುರ ಬಾಬು, ಜನವಾದಿ ಸಂಘದ ಗೀತಾ, ಘಮನ ಮಹಿಳಾ ಸಮೂಹದ ಶಾಂತಮ್ಮ, ಮಮತರೆಡ್ಡಿ, ನರಸಿಂಹಯ್ಯ ಮತ್ತಿತರರು ಉಪಸ್ಥಿತರಿದ್ದರು.