ಭಾಗ್ಯಶ್ರೀ ಕೊಲೆ ಆರೊಪಿಗೆ ಗಲ್ಲು ಶಿಕ್ಷೆಗೆ ನೀಡಲು ಆಗ್ರಹ
ಚಿತ್ತಾಪೂರ:ಸೆ.೧೨:ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗುಣತೀರ್ಥ ಗ್ರಾಮದ ಕೊಲಿ ಸಮಾಜದ ಯುವತಿ ಭಾಗ್ಯಶ್ರೀ ಅವರನ್ನು ಅಪಹರಿಸಿ ಅತ್ಯಾಚಾರ ನಡೆಸಿ ಅಮಾನುಷವಾಗಿ ಕೊಲೆ ಮಾಡಿರುವ ಘಟನೆಯು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಇಂತಹ ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದು ಕೃತ್ಯ ಎಸಗಿರುವ ಆರೊಪಿಗಳಿಗೆ ಅತೀ ಕಠೀಣ ಶಿಕ್ಷೆಯಾಗಿರುವ ಮರಣ ದಂಡನೆಯನ್ನು ನೀಡಬೇಕು ಎಂದು ತಾಲೂಕು ಕೊಲಿ ಸಮಾಜದ ಅಧ್ಯಕ್ಷ ರಾಮಲಿಂಗ ಬಾನರ್ ಒತ್ತಾಯಿಸಿದರು.
ಪಟ್ಟಣದ ತಹಸೀಲ ಕಚೇರಿ ಅವರಣದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಇತ್ತಿಚೆಗೆ ಕೊಲಿ ಸಮಾಜದ ಮೇಲೆ ನಿರಂತರವಾಗಿ ದಬ್ಬಾಳಿಕೆ, ದೌರ್ಜನ್ಯ, ಕೊಲೆ, ಮಹಿಳೆಯರ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಅದಕ್ಕೆ ಕಡಿವಾಣ ಹಾಕಲು ಸರ್ಕಾರವು ಕಾನೂನು ಮೂಲಕ ಮುಂದಾಗಬೇಕು. ಇಂತಹ ಪ್ರಕರಣಗಳ ಕುರಿತು ಕಲ್ಯಾಣ ಕರ್ನಾಟಕದಲ್ಲಿ ಕೊಲಿ ಸಮಾಜವು ದಂಗೆ ಏಳುವ ಮುಂಚೆ ಇಂತಹ ಕೃತ್ಯಗಳನ್ನು ಮಾಡುವವರನ್ನು ಯಾವುದೇ ಮುಲಾಜು ಇಲ್ಲದೇ ಅತೀ ಕಠೀಣ ಕಾನೂನು ಮೂಲಕ ಉಗ್ರವಾದ ಕ್ರಮ ಕೈಗೊಳ್ಳಬೇಕು ಎಂದರು.
ಗುಣತೀರ್ಥ ಗ್ರಾಮದ ಯುವತಿಯ ಕುಟುಂಬಕ್ಕೆ ಐವತ್ತು ಲಕ್ಷ ಪರಿಹಾರ ಧನ ನೀಡಬೇಕು. ಸರ್ಕಾರದಿಂದಲೇ ಮನೆ ನಿರ್ಮಿಸಿಕೊಡಬೇಕು ಮತ್ತು ಅವರ ಕುಟುಂಬದ ಮಕ್ಕಳ ಶಿಕ್ಷಣದ ಜವಬ್ದಾರಿಯನ್ನು ಸರ್ಕಾರವೇ ವಹಿಸಬೇಕು. ಇಲ್ಲವಾದಲ್ಲಿ ಕೊಲಿ ಸಮಾಜವು ಇದರ ವಿರುದ್ದ ರಾಜ್ಯದ್ಯಂತ ಉಗ್ರವಾದ ಹೊರಾಟವನ್ನು ಹಮ್ಮಿಕೊಳ್ಳಲಾಗುವದು ಎನ್ನುವ ಎಚ್ಚರಿಕೆಯ ಮನವಿ ಪತ್ರವನ್ನು ತಹಸೀಲ್ದಾರವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಒತ್ತಾಯಿಸಿದರು.
ಕೊಲಿ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಎಮ್ಮೆನೊರ, ಗುಂಡು ಐನಾಪುರ, ಹಣಮಂತ ಸಂಕನೂರ, ಮೌನೇಶ ಕರದಳ್ಳಿ, ದೇವಿಂದ್ರ ಅಣಕಲ್, ಶಿವಕುಮಾರ ಸುಣಗಾರ ಮಾತನಾಡಿದರು.
ಮುಖಂಡರಾದ ತಮ್ಮಣ್ಣ ಡಿಗ್ಗಿ, ಬಸವರಾಜ ಚಿಣಮಳ್ಳಿ, ಮೈಪಾಲ ಹೊಸೂರ, ಕರ್ಣಕುಮಾರ ಅಲ್ಲೂರ, ಮಲ್ಲಿಕಾರ್ಜು ಅಲ್ಲೂರ, ಲಕ್ಷಿö??Ãಕಾಂತ ಸಾಲಿ, ಭೀಮರಾಯ ಹೊತಿನಮಡಿ, ದಶರಥ ದೊಡ್ಮನಿ, ಜೈಗಂಗಾ, ಲಿಂಗಣ್ಣ ಹೆಗಲೇರಿ ಸ್ಭೆರಿದಂತೆ ಇತರರು ಇದ್ದರು.