ಡಿಜಿಟಲ್ ವರ್ಗ ಕೋಣೆ ಉದ್ಘಾಟನೆ
ಸಂಜೆವಾಣಿ ವಾರ್ತೆ
ಔರಾದ : ಸೆ.೧೨:ತಾಲೂಕಿನ ಕಂದಗೂಳ ಗ್ರಾಮದ ಸರ್ಕಾರಿ ಹಿರಿಯ ಶಾಲೆಯಲ್ಲಿ ಡಿಜಿಟಲ್ ವರ್ಗ ಕೋಣೆ ಉದ್ಘಾಟನೆ ಕಾರ್ಯಕ್ರಮ ಜರುಗಿತು.
ಡಿಜಿಟಲ್ ವರ್ಗ ಕೋಣೆಗೆ ಬೇಕಾದ ಕಂಪ್ಯೂಟರ್ ಹಾಗೂ ಡಿಜಿಟಲ್ ಇಂಟರ್ ಆಕ್ಟಿವ್ ಪ್ಯಾನೆಲ್ ಬೋರ್ಡ್ ಹಾಗೂ ಸಾಮಗ್ರಿಗಳನ್ನು ಜಂಬಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮನಬಾಯಿ ಬಾಬುರಾವ ಅವರು ಕೊಡುಗೆಯಾಗಿ ನೀಡಿದ್ದಾರೆ, ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬೆಳೆದಾಗ ಮಾತ್ರ ಪಾಲಕರು ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಮಾಡುತ್ತಾರೆ. ಆದ್ದರಿಂದ ಸರ್ಕಾರಿ ಶಾಲೆಗಳಿಗೆ ಪಾಲಕರ ಹಳೆ ವಿದ್ಯಾರ್ಥಿಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಂಬಗಿ ಗ್ರಾ.ಪಂ ಉಪಾಧ್ಯಕ್ಷೆ ರುಕ್ಮಿಣಿಬಾಯಿ ಪಂಢರಿನಾಥ, ಎಸ್ಡಿಎಂಸ
ಅಧ್ಯಕ್ಷ ಸಂತೋಷ ಮಾಲಿಪಾಟೀಲ, ಡಯಟ್ ಉಪನ್ಯಾಸಕ ಲಕ್ಷಣ ತೂರೆ, ಬಿಆರ್.ಪಿ ಸಂತೋಷ ರೆಡ್ಡಿ, ಸಂಪನ್ಮೂಲ ವ್ಯಕ್ತಿ ರವೀಂದ್ರ ಡಿಗ್ಗಿ, ಅಶೋಕ ಪಾಟೀಲ, ರಾಜಪ್ಪ ಖಡಕೆ, ಮುಖ್ಯಗುರು ಸುರೇಶ ರೆಡ್ಡಿ ಶಿಕ್ಷಕರಾದ ರವಿ, ಸುಪ್ರಿಯಾ, ಸುನೀತಾ, ಭೀಮಾಶಂಕರ, ದತ್ತಾತ್ರೇಯ, ಸೇರಿದಂತೆ ಇನ್ನಿತರರಿದ್ದರು.