೧೧ನೇ ದಿನಕ್ಕೆ ಕಾಲಿಟ್ಟ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೧೨: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ (ಟಿಪಿಜೆಪಿ) ಪದಾಧಿಕಾರಿಗಳು ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದ ಮುಂದೆ ಹಮ್ಮಿಕೊಂಡ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಗುರುವಾರ ೧೨ನೇ ದಿನಕ್ಕೆ ಕಾಲಿಟ್ಟಿದೆ.
ಈ ಸಂದರ್ಭದಲ್ಲಿ ದಮಯಂತಿ ಕುಲಕರ್ಣಿ ಮಾತನಾಡಿ, ಬಡವರು ಕೂಲಿ ಮಾಡಿ ತುಂಬಿದ ದುಡ್ಡನ್ನು ಕಂಪನಿ ಮೋಸ ಮಾಡಿ ವಂಚಿಸಿದ್ದಾರೆ. ಬಡವರ ಹಣವನ್ನು ಲಪಟಾಯಿಸಿದ್ದಾರೆ. ಈಗಾಗಲೇ ೧೦ ವರ್ಷಗಳು ಗತಿಸಿದರೂ ಯಾವುದೇ ಸರ್ಕಾರ ಗಮನ ಹರಿಸುತ್ತಿಲ್ಲ. ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ ಬಡವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಟಿಪಿಜೆಪಿ ಸಂಘಟನೆಯ ರಾಜ್ಯಾಧ್ಯಕ್ಷÀ ಅಪ್ಪಾಸಾಹೇಬ ಬುಗಡೆ ಮಾತನಾಡಿ, ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧರಣಿ ಕುಳಿತು ಇಂದಿಗೆ ೧೨ ದಿನಗಳು ಗತಿಸಿದರೂ ಯಾವೊಬ್ಬ ಜನಪ್ರತಿನಿಧಿಗಳು ಧರಣಿ ನಿರತ ಸ್ಥಳಕ್ಕೆ ಆಗಮಿಸದಿರುವುದು ಅವರ ಜಾಣ ಕುರುಡುತನ ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದÀರ್ಭದಲ್ಲಿ ಜಿಲ್ಲಾಧ್ಯಕ್ಷÀ ಶಿವಶರಣ ಸಿನ್ನೂರ, ಕಾರ್ಯದರ್ಶಿ ರಾಜಶೇಖರ ದೊಡಮನಿ, ತಾಲೂಕಾ ಮುಖಂಡರಾದ ಲಕ್ಷಿö್ಮÃ ಪಾಟೀಲ, ಲಾಲಸಾಬ ವಾಲಿಕಾರ, ಆರ್.ಪಿ. ಮಹೀಂದ್ರಕರ, ಬಾಬು ಪಟೇಲ ಬಿರಾದಾರ, ಗೌಡಪ್ಪಗೌಡ ಕಂಠಿ, ಮಹಾದೇವಿ ತೋಟದ, ಅನ್ನಪೂರ್ಣ ಬಳಗಾನೂರ, ಶಿವಲೀಲಾ ಬಾಗೇವಾಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.